ಶಿವಮೊಗ್ಗ:
ಶಿವಮೊಗ್ಗ ಜಿಲ್ಲೆಯ ಹಿರಿಮೆಯ ಶ್ರೀ ರಾಮಕೃಷ್ಣ ವಿದ್ಯಾಶ್ರಮ ಟ್ರಸ್ಟ್ ಅಡಿಯಲ್ಲಿ ನಡೆಯುತ್ತಿರುವ ನಾಲ್ಕು ಶಾಲೆಗಳ ಪ್ರಸಕ್ತ ಸಾಲಿನ ಎಸ್ ಎಸ್ ಎಲ್ ಸಿ ಫಲಿತಾಂಶ ಮತ್ತೆ ಎಂದಿನಂತೆ ಶೇಕಡ 100ರಷ್ಟು ಲಭಿಸಿದ್ದು, ಉತ್ತೀರ್ಣರಾದ ಎಲ್ಲ ವಿದ್ಯಾರ್ಥಿಗಳು ಬಹುತೇಕ ಡಿಸ್ಟಿಂಕ್ಷನ್ ಹಾಗೂ ಪ್ರಥಮ ದರ್ಜೆಯ ಅಂಕವನ್ನು ಪಡೆದಿದ್ದಾರೆ.


ಶೇಕಡ 80ಕ್ಕಿಂತ ಅಂಕ ಪಡೆದ ಹೆಚ್ಚು ಪ್ರತಿಭಾನ್ವಿತರನ್ನು ಇಲ್ಲಿ ಕಾಣಬಹುದಾಗಿದೆ.


ಶಿವಮೊಗ್ಗ ಗೋಪಾಳದ ಶ್ರೀ ರಾಮಕೃಷ್ಣ ವಿದ್ಯಾನಿಕೇತನದಲ್ಲಿ ಎಂದಿನಂತೆ ಈ ಬಾರಿಯೂ ಸಹ ಶೇಕಡ 100ರಷ್ಟು ಫಲಿತಾಂಶ ಬಂದಿದ್ದು, ಇಡೀ ಜಿಲ್ಲೆಗೆ ಕೀರ್ತಿ ತರುವಂತೆ ಪ್ರಣೀತ್ ಜೆ. ಹಾಗೂ ವಿಧಾತ್ರಿ ಆರ್ ಬಾಯ್ರಿ ಅವರು 619 ಅಂಕ ಪಡೆಯುವ ಮೂಲಕ ಇಡೀ ಸಂಸ್ಥೆಯ ಕೀರ್ತಿಯನ್ನು ಉತ್ತುಂಗಕ್ಕೆ ಏರಿಸಿದ್ದಾರೆ.


ಅಂತೆಯೇ ಇದೇ ಶಾಲೆಯ ಅನನ್ಯ 618, ವಿಕಾಸ್ ಡಿಬಿ 616, ನಿಖಿಲ್ ರಾಜ್ 615 ಅಂಕಪಡೆದಿದ್ದು, ಇಲ್ಲಿ 19 ವಿದ್ಯಾರ್ಥಿಗಳು ಶೇಕಡ 600ಕ್ಕಿಂತ ಹೆಚ್ಚು ಅಂಕ ಪಡೆದಿರುವುದು ವಿಶೇಷ. ಈ ಶಾಲೆಯಲ್ಕಿ 106 ಮಕ್ಕಳು ಶೇ. 80 ಕ್ಕಿಂತ ಹೆಚ್ಚು ಅಂಕ ಪಡೆದಿದ್ದಾರೆ.
ಇಲ್ಲಿನ ಬಹುತೇಕ ವಿದ್ಯಾರ್ಥಿಗಳು ಕನಿಷ್ಠ 70ಕ್ಕಿಂತ ಹೆಚ್ಚು ಶೇಕಡವಾರು ಫಲಿತಾಂಶವನ್ನು ದಾಖಲಿಸಿರುವುದು ಮತ್ತೊಂದು ವಿಶೇಷ.
ಅಂತೆಯೇ ಶಿವಮೊಗ್ಗ ರಾಮಕೃಷ್ಣ ಗುರುಕುಲ ವಸತಿ ವಿದ್ಯಾಲಯ ಅನುಪಿನಕಟ್ಟೆಯಲ್ಲೂ ಸಹ ಈ ಬಾರಿ ಎಂದಿನಂತೆ ಶೇಕಡ 100ರಷ್ಟು ಫಲಿತಾಂಶ ಪಡೆದಿದೆ.


ಪವನ್ ಎಂವಿ 606, ಚಿರಂತ್ 604, ಕಿಶನ್ ಪಟೇಲ್, 603, ಆಕಾಶ್ ಹಾಗೂ ಶರತ್ ಕುಮಾರ್ 595, ಸಂಜಯ್ ಎಲ್. 588, ಸಂಗಮೇಶ್ 587, ಲಿಖಿತ್ 585, ಬದ್ರಿನಾಥ್ 584, ಆಲ್ವಿನ್ ಜೋಶೈ 583 ಅಂಕ ಪಡೆದಿದ್ದಾರೆ.


ವಿಶೇಷವಾಗಿ ಇದೇ ರಾಮಕೃಷ್ಣ ವಿದ್ಯಾಶ್ರಮ ಟ್ರಸ್ಟ್ ನಿಂದ ಚೋರಡಿಯಲ್ಲಿರುವ ಶ್ರೀ ರಾಮಕೃಷ್ಣ ಗುರುಕುಲ ಆಂಗ್ಲ ಮಾಧ್ಯಮ ಶಾಲೆ ಎಂದಿನಂತೆ ಈ ಬಾರಿಯೂ ಸಹ ಶೇಕಡ 100ರಷ್ಟು ಫಲಿತಾಂಶ ದಾಖಲಿಸಿರುವುದು ವಿಶೇಷ.


ಧನ್ಯ ಎಂ.ಎಂ. 576, ರಮ್ಯ 567 ಅಂಕ ಪಡೆಯುವ ಮೂಲಕ ಶಾಲೆಯ ಪ್ರತಿಭಾನ್ವಿತ ವಿದ್ಯಾರ್ಥಿನಿಯರಾಗಿ ಹೊರಹೊಮ್ಮಿದ್ದಾರೆ. ಉಳಿದಂತೆ ಶೇಕಡವಾರು ಅಂಕಗಳ ಪಟ್ಟಿಯಲ್ಲಿ ಎಲ್ಲಾ ವಿದ್ಯಾರ್ಥಿಗಳು ಹೆಚ್ಚಿನ ಅಂಕ ಪಡೆದಿದ್ದಾರೆ.


ಅಂತೆಯೇ ಶೃಂಗೇರಿಯಲ್ಲಿರುವ ರಾಮಕೃಷ್ಣ ಆಂಗ್ಲ ಮಾಧ್ಯಮ ಪ್ರೌಢಶಾಲೆಯಲ್ಲಿ ಸಹ ಈ ಬಾರಿ ಶೇಕಡ 100ರಷ್ಟು ಫಲಿತಾಂಶ ಲಭಿಸಿದೆ.
ಇಲ್ಲಿ 14 ಡಿಸ್ಟಿಂಕ್ಷನ್, 11 ಪ್ರಥಮ ದರ್ಜೆ ಹಾಗೂ ಒಂದು ದ್ವಿತೀಯ ದರ್ಜೆ ಲಭಿಸಿದ್ದು ವಿದ್ಯಾರ್ಥಿಗಳ ಸಾಧನೆ ಅಮೋಘವಾಗಿದೆ.


ಮಕ್ಕಳ ಫಲಿತಾಂಶ ಈ ಕೆಳಕಂಡಂತಿದ್ದು, ತಲಾ 625 ಅಂಕಗಳಿಗೆ ರೋಷಿಣಿ 607, ಅಮೂಲ್ಯ ಹಾಗೂ ಶ್ರವಂತ್ 601, ನಿಧಿ ಬಿಎಸ್ 594, ಹರ್ಷಿಣಿ 593, ಅನ್ವಿಕ 583, ಸ್ಕಂದ ಬಿಟಿ 575, ತರುಣ್ ಕೆಜೆ ಶೆಟ್ಟಿ 569, ಮೊಹಮ್ಮದ್ ಜಿಯಾ 565, ಐಸಿರಿ ಎಸ್ ವಿ ಹಾಗೂ ಸೃಷ್ಟಿಕ 564, ಪ್ರತಿಕ್ಷಾ 547, ಬೇಬಿ ಆಯೇಷಾ 533, ಶ್ರೇಯಾ 514 ಅಂಕ ಪಡೆದು ಕೀರ್ತಿ ತಂದಿದ್ದಾರೆ.


ಶೃಂಗೇರಿಯಲ್ಲಿರುವ ಈ ಶಾಲೆಯಲ್ಲಿ ಪಡೆದ ಪಲಿತಾಂಶ ಇಡೀ ತಾಲೂಕಿನಲ್ಲಿ ಪ್ರಥಮವಾಗಿ ಹೊರಹೊಮ್ಮಿರುವುದು ವಿಶೇಷ.
ಒಟ್ಟಾರೆ ಸಂಸ್ಥೆಯ ಎಲ್ಲಾ ಶಾಲೆಗಳಲ್ಲಿ ಶೇಕಡ 100ರಷ್ಟು ಫಲಿತಾಂಶ ಬಂದಿರುವುದಲ್ಲದೆ

, ಅತಿ ಹೆಚ್ಚು ಮಕ್ಕಳು 80ಕ್ಕಿಂತಲೂ ಹೆಚ್ಚು ಅಂಕ ಪಡೆದಿರುವುದು ವಿಶೇಷವೇ ಹೌದು. ಎಲ್ಲ ವಿದ್ಯಾರ್ಥಿಗಳನ್ನು ಶಿಕ್ಷಕರನ್ನು ಹಾಗೂ ಪೋಷಕರನ್ನು ಶ್ರೀ ರಾಮಕೃಷ್ಣ ವಿದ್ಯಾಶ್ರಮ ಟ್ರಸ್ಟ್ ನ ಪ್ರಧಾನ ಕಾರ್ಯದರ್ಶಿ ಶೋಭಾ ವೆಂಕಟರಮಣ ಅಭಿನಂದಿಸಿದ್ದಾರೆ.

By admin

ನಿಮ್ಮದೊಂದು ಉತ್ತರ

error: Content is protected !!