ರಾಕೇಶ್ ಸ್ವಾಮಿ

ಶಿವಮೊಗ್ಗ, ಮೇ.೧೮:
ಶಿವಮೊಗ್ಗ ನಗರದಲ್ಲಿ ಅಕ್ರಮವಾಗಿ ಬಡ್ಡಿ ವ್ಯವಹಾರ ನಡೆಸುವವರಿಗೆ ಶಿವಮೊಗ್ಗ ಜಿಲ್ಲಾ ಪೊಲೀಸ್ ವತಿ ಯಿಂದ ಕಾನೂನು ಕ್ರಮ ಕೈಗೊಳ್ಳಲಾಗು ತ್ತಿದ್ದು, ಇದರಿಂದ ಅಕ್ರಮ ಬಡ್ಡಿ ದಂಧೆ ನಡೆಸುವವರ ಎದೆಯಲ್ಲಿ ನಡುಕ ಶುರುವಾಗಿದೆ.


ನಗರದಲ್ಲಿ ಕೂಲಿ ಕಾರ್ಮಿಕರು ಮತ್ತು ವ್ಯಾಪಾರಿಗಳು, ಜೂಜಾಟ ಆಡುವ ಯುವಕರೇ ಅತಿ ಹೆಚ್ಚಾಗಿ ಟಾರ್ಗೇಟ್ ಆಗಿರುವ ಧನವಂತರಿಗೆ ವಾರಕ್ಕೆ ಶೇ.೧೫% ರಷ್ಟು ಬಡ್ಡಿ

ವಸೂಲಿ ಮುಂದಾಗಿದ್ದಾರೆ. ಕೊಟ್ಟ ಸಾಲದ ಭದ್ರತೆಗೆ ಖಾಲಿ ಚೆಕ್ ಗಳು, ಆಸ್ತಿ ದಾಖಲೆ ಪತ್ರಗಳನ್ನು ಅವರು

ಪಡೆದುಕೊಂಡು ಸಾಲ ನೀಡುವುದಲ್ಲದೇ ಸಾಲ ನೀಡುವುದು ವಿಳಂಬವಾದರೆ ಮೀಟರ್ ಬಡ್ಡಿ ವಿಧಿಸುತ್ತಿರುವ ಹಲವು ಆರೋಪಗಳು ಸಾರ್ವಜನಿಕ ವಲಯ ದಲ್ಲಿ ಕೇಳಿ ಬರುತ್ತಿವೆ.


ನಗರದಲ್ಲಿ ಬಡ್ಡಿ ವ್ಯವಹಾರ ಅತಿ ದೊಡ್ಡ ಮಾಫಿಯಾ ಎಂಬಂತೆ ಬಿಂಬಿತಗೊಂಡಿತ್ತು. ಬಡ್ಡಿಯ ಹಣವನ್ನು ಸಕಾಲದಲ್ಲಿ ನೀಡಲು ಆಗದಿದ್ದರೆ ಕೊಟ್ಟ ಚೆಕ್‌ಗಳ ಆಧಾರದ ಮೇಲೆ ಹೆಚ್ಚಿನ ಹಣಕ್ಕಾಗಿ ಕೋರ್ಟ್ ನಲ್ಲಿ ಕೇಸು ಹಾಕುತ್ತೇನೆಂದು ಬೆದರಿಕೆ ಹಾಕುವುದು

ಮನೆಯ ಸಮೀಪ ಗಲಾಟೆಗಳನ್ನು ಮಾಡುವುದು ಸರ್ವೇ ಸಮಾನ್ಯವಾಗಿತ್ತು. ಇಂತಹ ಬಡ್ಡಿ ವ್ಯವಹಾರಗಳಿಗೆ ಬೇಸತ್ತು ಕೆಲವು ಕುಟುಂಬಗಳು, ಯುವಕರು ಆತ್ಮ ಹತ್ಯೆ ಮಾಡಿಕೊಂಡಿರುವ ಘಟನೆಗಳು ಸಹ ವರದಿಯಾಗಿವೆ.


ಹೀಗಾಗಿ, ಖಾಸಗಿ ಬಡ್ಡಿ ವ್ಯವಹಾ ರಕ್ಕೆ ಕಡಿವಾಣ ಹಾಕುವ ಹಾಗೂ ನೋಂದವರಿಗೆ ಬೆಳಕಾಗುವ ಉದ್ದೇಶ ದಿಂದ ಶಿವಮೊಗ್ಗ ಜಿಲ್ಲಾ ಪೊಲೀಸ್ ಇಲಾಖೆಯ ಕ್ರಮ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಗಿದೆ.


ಈ ಕುರಿತಂತೆ ಜಿಲ್ಲಾ ಪೊಲೀಸ್ ಇಲಾಖೆ ಪತ್ರಿಕಾ ಪ್ರಕಟಣೆ ಬಿಡುಗಡೆ ಮಾಡಿದೆ. ಅಕ್ರಮ ಬಡ್ಡಿ ವ್ಯವಹಾರ ಮಾಡುವವರ ಬಗ್ಗೆ ಸ್ಥಳೀಯ ಪೊಲೀಸ್ ಠಾಣೆಗೆ ಅಥವಾ ೧೧೨ ಸಂಖ್ಯೆಗೆ ಕರೆ ಮಾಡಿ ಮಾಹಿತಿ ನೀಡುವಂತೆ ಸಾರ್ವಜನಿಕರಿಗೆ ಮನವಿ ಮಾಡಿದೆ.

ಅಕ್ರಮ ಬಡ್ಡಿ ವ್ಯವಹಾರ, ದೂರು ನೀಡಿ ನ್ಯಾಯ ಕೊಡಿಸ್ತೇವೆ: ಎಸ್ಪಿ
ಸಹಕಾರ ಇಲಾಖೆಯ ಸಹಯೋಗದೊಂದಿಗೆ ಜಿಲ್ಲೆಯಲ್ಲಿ ಅಕ್ರಮ ಬಡ್ಡಿ ವ್ಯವಹಾರ ನಡೆಸುವವರ ಮನೆಗಳ ಮೇಲೆ ತಪಾಸಣೆ ನಡೆಸುತ್ತಿದ್ದು, ಅಕ್ರಮ ಬಡ್ಡಿ ವ್ಯವಹಾರದಲ್ಲಿ ನೊಂದವರು ಯಾರೇ ಇದ್ದರೂ ಸಹ ಹತ್ತಿರದ ಪೊಲೀಸ್ ಠಾಣೆಗೆ ದೂರು ನೀಡಿ., ಅಲ್ಲಿ ಸೂಕ್ತ ನ್ಯಾಯ ಸಿಗದಿದ್ದಲ್ಲಿ ನೇರ ನಮ್ಮೆಡೆ ಬಂದು ಮಾಹಿತಿ ನೀಡಿ. ತಪ್ಪಿದ್ದರೆ ಅವರನ್ನು ಬಗ್ಗುಬಡಿಯುತ್ತೇವೆ.

  • ಮಿಥುನ್ ಕುಮಾರ್ ಜಿ.ಕೆ., ಜಿಲ್ಲಾ ರಕ್ಷಣಾಧಿಕಾರಿ, ಶಿವಮೊಗ್ಗ

ಮುಲಾಜಿಲ್ಲದೇ ಬಡ್ಡಿದಂ ದೆಯ ದಗಲ್ಬಾಜಿಗಳನ್ನು ಬಂಧಿ ಸಲು ರಕ್ಷಣಾ ಇಲಾಖೆ ರೆಡಿಯಾ ಗಿದೆ. ಇದು ಸಂತೋಷದ ವಿಷಯ. ಈ ಪೈನಾನ್ಸ್ ಹೆಸರಿನ ಮಾಫಿಯಾದ ವಸೂಲಿಯೂ ತಪ್ಪು. ಕೆಲವೆಡೆ ಅತ್ಯಂತ ಪ್ರಮಾಣಿಕ ಬಡ್ಡಿಯಲ್ಲಿ ಮಾನವೀ ಯತೆಯಲ್ಲಿ ಹಣ ಕೊಟ್ಟವನೂ ಆರೋಪಿಯಾಗು ವುದು ತಪ್ಪು. ಹಣದ ವಿಚಾರ ಯಾರದೇ ಆಗಿರಲಿ, ಮೋಸವಾಗದಿರಲಿ.
-ಗಜೇಂದ್ರಸ್ವಾಮಿ, ಸಂಪಾದಕರು

By admin

ನಿಮ್ಮದೊಂದು ಉತ್ತರ

error: Content is protected !!