ಶಿವಮೊಗ್ಗ, ಮೇ.8:
ದೇಶಪ್ರೇಮದ ಕಿಚ್ಚು ಮೋದಿ ಬಗೆಗಿನ ಅಭಿಮಾನ ಭಾರತೀಯ ಜನತಾ ಪಕ್ಷಕ್ಕೆ ಈ ಬಾರಿ ಶಿವಮೊಗ್ಗ ಲೋಕಸಭಾ ಚುನಾವಣೆಯಲ್ಲಿ ಕಳೆದ ಬಾರಿಗಿಂತ ಹೆಚ್ಚು ಅಂತರದ ಬಹುಮತ ತಂದುಕೊಡುವುದು ಗ್ಯಾರಂಟಿ ಎಂದು ಸಂಸದ ಅಭ್ಯರ್ಥಿ ಬಿ ವೈ ರಾಘವೇಂದ್ರ ತಿಳಿಸಿದರು.


ಅವರಿಂದು ಬೆಳಿಗ್ಗೆ ಪಕ್ಷದ ಕಚೇರಿಯಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡುತ್ತಾ ಭಾರತೀಯ ಜನತಾ ಪಕ್ಷದ ರಾಷ್ಟ್ರ, ರಾಜ್ಯ ಪ್ರಮುಖರು ವಿಶೇಷವಾಗಿ ಜಿಲ್ಲಾ ಸಮಿತಿಯ ಜವಾಬ್ದಾರಿ ಹೊತ್ತ ಹಾಲಿ ಹಾಗೂ ಮಾಜಿ ಶಾಸಕರು, ಕಟ್ಟ ಕಡೆಯ ಕಾರ್ಯಕರ್ತನಿಂದ ಹಿಡಿದು ರಾಷ್ಟ್ರ ನಾಯಕರು ಪಕ್ಷವನ್ನು ಗೆಲ್ಲಿಸಲು ಸಾಕಷ್ಟು ಶ್ರಮಿಸಿದ್ದಾರೆ. ಜನರ ಬೆಂಬಲ ನಮ್ಮೆಡೆ ಅಪಾರವಾಗಿದೆ ಹಾಗಾಗಿ ಗೆಲ್ಲುವುದು ಶತಸಿದ್ದ ಎಂದು ಹೇಳಿದರು.


ಇಡೀ ಚುನಾವಣಾ ಪ್ರಕ್ರಿಯೆಗೆ ಸಂಬಂಧಪಟ್ಟಂತೆ 75ಕ್ಕೂ ಹೆಚ್ಚು ಬಾರಿ ಬಹಿರಂಗ ಸಭೆ ಸೇರಿದಂತೆ 1,560 ಸಣ್ಣ ಹಾಗೂ ದೊಡ್ಡ ಪ್ರಮಾಣದ ಸಭೆಗಳನ್ನು ನಡೆಸಿದ್ದೇವೆ. ವಿಶೇಷವಾಗಿ ಮಹಾಶಕ್ತಿ ಕೇಂದ್ರ, ಅಂತೆಯೇ ಪರಿವಾರದ ಶಕ್ತಿ ಸಂಪೂರ್ಣವಾಗಿ ನಮ್ಮ ಪರವಾಗಿ ಕೆಲಸ ಮಾಡಿದೆ ಎಂದರು.


ಕಳೆದ ಬಾರಿ ಸುಮಾರು ಎರಡುವರೆ ಲಕ್ಷ ಮತಗಳ ಅಂತರದಿಂದ ಜಯಗಳಿಸಿದ್ದ ನಾನು ಈ ಬಾರಿಯ ಅತಿ ಹೆಚ್ಚು ಮತದಾನದ ಪ್ರಕ್ರಿಯೆ ಹಿನ್ನೆಲೆಯಲ್ಲಿ ಅದಕ್ಕಿಂತಲೂ ಹೆಚ್ಚು ಅಂತರದ ವಿಜಯ ನನಗೆ ಸಾಧ್ಯವಾಗುತ್ತದೆ ಇದಕ್ಕೆ ಕಾರಣರಾದ ಸರ್ವರಿಗೂ

ಅಭಿನಂದನೆಗಳು ಎಂದರು.
ಕಾಂಗ್ರೆಸ್ ಪಕ್ಷದ ಗ್ಯಾರಂಟಿಗಳು ಯಾವುದೇ ವರ್ಕೌಟ್ ಆಗುವುದಿಲ್ಲ. ದೇಶದ ರಕ್ಷಣೆಯನ್ನು ಮಾಡುವ ಮೋದಿಯವರ ಗ್ಯಾರಂಟಿಯೇ ಎಲ್ಲ ಮತದಾರರ ಮನದಲ್ಲಿ ಅಚ್ಚಳಿಯದೆ ಉಳಿದಿದೆ. ಮೋದಿ ಎನ್ನುವ ದೊಡ್ಡ ಶಕ್ತಿ ಹಾಗೂ ಪಕ್ಷದ ಸಂಘಟನೆಯ ಹೆಚ್ಚಿನ ಸ್ಪಂದನೆ ಕರ್ನಾಟಕ ರಾಜ್ಯದ 28 ಕಡೆ ಪಕ್ಷವನ್ನು ಈ ಬಾರಿ ಚುನಾವಣೆಯಲ್ಲಿ ಗೆಲ್ಲಿಸುತ್ತದೆ ಎಂದರು.

By admin

ನಿಮ್ಮದೊಂದು ಉತ್ತರ

error: Content is protected !!