ಶಿವಮೊಗ್ಗದಲ್ಲಿ ಈಶ್ವರಪ್ಪ ಅವರಿಗೆ ತಮಿಳು ಸಮಾಜ ಬಾಂಧವರ ಮತ ಕೇಳುವ ಯಾವುದೇ ನೈತಿಕ ಹಕ್ಕಿಲ್ಲ. ತಮ್ಮ ಸ್ವಾರ್ಥಕ್ಕೋಸ್ಕರ ಮಗನ ಟಿಕೆಟ್ ಗೋಸ್ಕರ ಪಕ್ಷೇತರವಾಗಿ ನಿಂತಿದ್ದಾರೆ. ಅಂತೆಯೇ ಈ ಬಾರಿ ವಿಧಾನಸಭಾ ಚುನಾವಣೆಯಲ್ಲಿ ಅವರಿಗೆ ಟಿಕೆಟ್ ಸಿಗಲಿಲ್ಲ ಎಂಬ ಕಾರಣಕ್ಕೆ ಓಂ ಶಕ್ತಿ ಪ್ರವಾಸವನ್ನೇ ರದ್ದು ಮಾಡಿದ್ದೇಕೆ?

ಸಂಸದ ಬಿ ವೈ ರಾಘವೇಂದ್ರ ಅವರು ಆ ಕೆಲಸ ಓಂ ಶಕ್ತಿ ಪ್ರವಾಸಿ ಕಾರ್ಯಕ್ಕೆ ಸಂಪೂರ್ಣ ಸಹಕಾರ ನೀಡಿ ಭಕ್ತಾದಿಗಳಿಗೆ ಓಂ ಶಕ್ತಿ ಯಾತ್ರೆಗೆ ಕಳಿಸಿಕೊಟ್ಟದ್ದು ಗೊತ್ತಿಲ್ಲವೇ? ಈಶ್ವರಪ್ಪ ಅವರು ನಮ್ಮ ಸಮಾಜಕ್ಕೆ ಅವರು ಏನನ್ನು ಕೊಡುಗೆಯಾಗಿ ನೀಡಿದ್ದಾರೆ. ನಾವು ನಮ್ಮ ಸಮಾಜದ ಹಿತ ಬಯಸುವ ರಾಘವೇಂದ್ರ ಅವರನ್ನು ಬೆಂಬಲಿಸುತ್ತೇವೆ. ಪ್ರತಿ ಬೀದಿ ಬೀದಿಗಳಲ್ಲಿ ಜನರಿಗೆ ಸಮಾಜ ಬಾಂಧವರಿಗೆ ರಾಘವೇಂದ್ರ ಹಾಗೂ ಯಡಿಯೂರಪ್ಪ ಅವರ ಸಾಧನೆಯ ಕಾರ್ಯಗಳ ಬಗ್ಗೆ ಮನವರಿಕೆ ಮಾಡಿಕೊಟ್ಟು ಮತ ಕೇಳುತ್ತೇವೆ. ಕನಿಷ್ಠ ಮೂರು ಲಕ್ಷ ಮತಗಳ ಅಂತರದಿಂದ ರಾಘವೇಂದ್ರ ಗೆದ್ದೇ ಗೆಲ್ಲುತ್ತಾರೆ.
ಎಂಪಿ ಗಣೇಶ್, ತಮಿಳು ಯುವಕರ ಸಂಘದ ಅಧ್ಯಕ್ಷರು, ಶಿವಮೊಗ್ಗ.

By admin

ನಿಮ್ಮದೊಂದು ಉತ್ತರ

You missed

error: Content is protected !!