ಶಿವಮೊಗ್ಗ ನವೆಂಬರ್ 28; : ನ.30 ರಂದು ಬೆಳಗ್ಗೆ 11.30ಕ್ಕೆ ಮಹಾನಗರ ಪಾಲಿಕೆ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಶಿವಮೊಗ್ಗ ಮಹಾನಗರ ಪಾಲಿಕೆಯ 2025-26ನೇ ಸಾಲಿನ ಆಯ-ವ್ಯಯವನ್ನು

ತಯಾರಿಸುವ ಬಗ್ಗೆ ಸಾರ್ವಜನಿಕರ ಹಾಗೂ ಸಂಘ-ಸಂಸ್ಥೆಗಳ

ಮೊದಲನೇ ಹಂತದ ಪೂರ್ವಭಾವಿ ಸಮಾಲೋಚನಾ ಸಭೆಯನ್ನು ಕಾರಣಾಂತರದಿಂದ

ಡಿ.04ರಂದು ಬೆಳಗ್ಗೆ 11.30ಕ್ಕೆ ಮುಂದೂಡಲಾಗಿದ್ದು, ನಗರದ ನಾಗರಿಕರು ಹಾಗೂ ಸಂಘ-ಸಂಸ್ಥೆಯವರು ಸಭೆಗೆ ಹಾಜರಾಗಿ ತಮ್ಮ ಸಲಹೆ ಸೂಚನೆಗಳನ್ನು ನೀಡುವಂತೆ ಪಾಲಿಕೆ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

ನ. 29 ರಂದು ವಿದ್ಯುತ್ ವ್ಯತ್ಯಯ ಶಿವಮೊಗ್ಗ, ನವೆಂಬರ್ 28; : ಶಿವಮೊಗ್ಗ ನಗರ ಉಪವಿಭಾಗ-1ರ ಘಟಕ-3ರ ವ್ಯಾಪ್ತಿಯಲ್ಲಿ ತ್ಯಾವರೆಚಟ್ನಹಳ್ಳಿ, ಈಶ್ವರ್ ರೈಸ್ ಮಿಲ್ ಹತ್ತಿರ ಎಲ್.ಟಿ. ವಿದ್ಯುತ್ ಮಾರ್ಗ ಬದಲಾಯಿಸುವ ಕಾಮಗರಿ ಇರುವುದರಿಂದ ನ.29 ರಂದು ಬೆಳಗ್ಗೆ 10.00 ರಿಂದ ಸಂಜೆ 6.00ರವರೆಗೆ ತ್ಯಾವರೆಚಟ್ನಹಳ್ಳಿ, ವಿಜಯಲಕ್ಷ್ಮೀ ರೈಸ್ ಮಿಲ್, ಈಶ್ವರ್ ರೈಸ್ ಮಿಲ್, ತರಳಬಾಳು ಬಡಾವಣೆ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದ್ದು, ಸಾರ್ವಜನಿಕರು ಸಹಕರಿಸುವಂತೆ ಮೆಸ್ಕಾಂ ಪ್ರಕಟಣೆ ತಿಳಿಸಿದೆ.

By admin

ನಿಮ್ಮದೊಂದು ಉತ್ತರ

You missed

error: Content is protected !!