ಶಿಕಾರಿಪುರ : ಕಳೆದ ವಿಧಾನಸಭೆ ಚುನಾವಣೆಯಲ್ಲಿ ನಮಗೆ ಮತ ಹಾಕದ ಬಿಜೆಪಿಯ ಕಾರ್ಯಕರ್ತರನ್ನೂ ಪ್ರೀತಿಯಿಂದ ಕಾಣಿರಿ ಅವರ ಕುಟುಂಬದವರು ಸಹ ಈಗ ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆಯ ಫಲಾನುಭವಿಗಳಾಗಿದ್ದಾರೆ ಎಂದು ಸಚಿವ ಮಧು ಬಂಗಾರಪ್ಪ ಹೇಳಿದರು.

 ಅವರು ಪಟ್ಟಣದ ಮುದಿಗೌಡರ ಬೀದಿಯಲ್ಲಿನ ಕಾಂಗ್ರೆಸ್ ಕಚೇರಿಯಲ್ಲಿ ಗ್ಯಾರಂಟಿ ಯೋಜನೆಗಳ ಹಬ್ಬವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು, ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವು ಗ್ಯಾರಂಟಿ ಯೋಜನೆಗಳನ್ನು  ಅನುಷ್ಠಾನ ಗೂಳಿಸುತ್ತದೆ ಎಂದು ಚುನಾವಣೆಯಲ್ಲಿ ಜಯವನ್ನು ಸಾಧಿಸಿದ್ದೆವು. 


ಅದರಂತೆ ನಮ್ಮ ಸರ್ಕಾರವು ನುಡಿದಂತೆ ನಡೆದು ಪ್ರಣಾಳಿಕೆಯಲ್ಲಿ ನೀಡಿದ ಕಾರ್ಯಕ್ರಮಗಳನ್ನು ಅನುಷ್ಠಾನಕ್ಕೆ ತಂದಿದ್ದೇವೆ, ಯೋಜನೆಗಳ ಫಲಾನುಭವಿಗಳು ಜಾತ್ಯಾತೀತವಾಗಿ ಪಕ್ಷಾತೀತವಾಗಿದ್ದಾರೆ, ಅವರುಗಳನ್ನು ಪಟ್ಟಿ ಮಾಡಿ ಯೋಜನೆಗಳ ಫಲಾನುಭವಿಗಳಾಗಿದ್ದೀರಿ ಈ ಬಾರಿ, ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪ್ರಣಾಳಿಕೆಯಲ್ಲಿನ ಗ್ಯಾರಂಟಿಗಳನ್ನು ಅವರಿಗೆ ಮನದಟ್ಟು ಮಾಡಿಕೊಟ್ಟು  ಕಾಂಗ್ರೆಸ್ಸಿಗೆ ಮತ ನೀಡಿ ಎಂದು ಅವರನ್ನು ಮನವೊಲಿಸುವ  ಜವಾಬ್ದಾರಿಯು  ಕಾರ್ಯಕರ್ತರದ್ದಾಗಿದೆ ಎಂದರು.


 ಈ ಬಾರಿ ಮತದಾರರು ಬದಲಾವಣೆಯನ್ನು ಬಯಸಿದ್ದು ಅತಿ ಹೆಚ್ಚು ಮತಗಳ ಅಂತರದಿಂದ ಗೀತಾ ಶಿವರಾಜ್ ಕುಮಾರ್ ಗೆಲ್ಲಲಿದ್ದು, ಈ ಬಾರಿ ಚುನಾವಣೆಯಲ್ಲಿ ಬಿಜೆಪಿ ಯವರು ಸುಳ್ಳು ಹೇಳಿ ಮತದಾರರನ್ನು ಮೋಸ ಮಾಡಲು ಸಾಧ್ಯವಿಲ್ಲ ಎಂದರು.     ಬಿಜೆಪಿ ಅಕ್ರಮಗಳನ್ನು ಈ ಚುನಾವಣೆ ನಂತರದಲ್ಲಿ ಬಯಲಿಗೆ ಎಳೆಯಲಿದ್ದೇವೆ.     ಪಕ್ಷವು ನಡೆಸಿದ ಸರ್ವೆಗಳಲ್ಲಿ ನನಗಿಂತ 
 ಗೀತಾ ಶಿವರಾಜ್ ಕುಮಾರ್ ಪರವಾಗಿ ಒಲವು ಹೆಚ್ಚಾಗಿ ಕಂಡುಬಂದ ಕಾರಣ ಪಕ್ಷವು ಗೀತಾ ಶಿವರಾಜಕುಮಾರ್ ರವರನ್ನೇ ಲೋಕಸಭಾ ಅಭ್ಯರ್ಥಿಯನ್ನಾಗಿ ಕಣಕ್ಕೆ  ಇಳಿಸಿದೆ ಎಂದರು. 



 ಪ್ರತಿಯೊಬ್ಬ ಕಾರ್ಯಕರ್ತರು ತಮಗೆ  ನಿಗದಿಪಡಿಸಿದ ಬೂತ್ ನಲ್ಲಿ ಕರ್ತವ್ಯ ನಿರ್ವಹಿಸಬೇಕು, ನಮ್ಮ ಭೂತ್ ನನ್ನ ಜವಾಬ್ದಾರಿ  ಎಂದು ಪಕ್ಷವು ಕೊಟ್ಟ ಜವಾಬ್ದಾರಿಯನ್ನು ಪ್ರತಿಯೊಬ್ಬರು ನಿಭಾಯಿಸಿದರೆ ಗೆಲುವು ನಿಶ್ಚಿತ ಎಂದರು.

  ಕಾರ್ಯಕ್ರಮದಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಆರ್ ಪ್ರಸನ್ನ ಕುಮಾರ್ , ರಾಜ್ಯ ಕಾಂಗ್ರೆಸ್ ಕಾರ್ಯದರ್ಶಿ ನಾಗರಾಜ್ ಗೌಡ, ಕಲಗೋಡು ರತ್ನಾಕರ,   ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಾರಿವಾಳದ ಶಿವರಾಂ 

  ,  ನಗರದ  ಮಹದೇವಪ್ಪ, ಗೋಣಿ ಮಾಲತೇಶ್, ಮಾರವಳ್ಳಿ ಉಮೇಶ್, ರಾಘವೇಂದ್ರ ನಾಯಕ್, ಶಿವು  ನಾಯಕ್ , ಉಳ್ಳಿ ದರ್ಶನ್, ಬಡಗಿ ಪಾಲಾಕ್ಷ, ನಗರದ ರವಿಕಿರಣ್, ಮುಂತಾದವರು ಪಾಲ್ಗೊಂಡಿದ್ದರು.

By admin

ನಿಮ್ಮದೊಂದು ಉತ್ತರ

error: Content is protected !!