ಬೆಂಗಳೂರು : ಸರ್ಕಾರ ಮತ್ತು ನ್ಯಾಯಾಲಯದ ನಡುವಿನ ಹಗ್ಗ ಜಗ್ಗಾಟದ ನಡುವೆಯೇ 5, 8 ಮತ್ತು 9 ನೇ ತರಗತಿಗೆ ಬೋರ್ಡ್‌ ಪರೀಕ್ಷೆ (Board Exam) ನಡೆಸಲಾಗಿದೆ . ಈ ನಡುವೆ ಮೂರೂ ತರಗತಿಗಳ ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ

ಬರೆದ 1 ಕೋಟಿಗೂ ಹೆಚ್ಚು ಉತ್ತರ ಪತ್ರಿಕೆಗಳ ಮೌಲ್ಯಮಾಪನಕ್ಕೆ (Paper valuation) ಕೇವಲ 3 ದಿನ ಕಾಲಾವಕಾಶ ನೀಡುವ ಮೂಲಕ ಶಿಕ್ಷಣ ಇಲಾಖೆ (Education Department) ತನ್ನ ಗುಣಮಟ್ಟವನ್ನು ಜಗಜ್ಜಾಹೀರುಗೊಳಿಸಿದೆ.


ಮೂರು ದಿನಗಳಲ್ಲಿ ಮೌಲ್ಯಮಾಪನ ಮುಗಿಸಿ SATS ನಲ್ಲಿ ಅಪ್‌ಲೋಡ್‌ ಮಾಡುವಂತೆ ಶಿಕ್ಷಣ ಇಲಾಖೆಯು ಹೊರಡಿಸಿರುವ ಆದೇಶಕ್ಕೆ‌ ಶಿಕ್ಷಕರು ಮತ್ತು ಖಾಸಗಿ ಶಾಲಾ ಮಂಡಳಿಗಳಿಂದ ಭಾರೀ ವಿರೋಧ ವ್ಯಕ್ತವಾಗಿದೆ.


ಈ ನಿರ್ಧಾರವನ್ನು ಹಿಂತೆಗೆದುಕೊಳ್ಳುವಂತೆ ಖಾಸಗಿ ಶಾಲೆಗಳ ಒಕ್ಕೂಟದ ಅಧ್ಯಕ್ಷ ಲೋಕೇಶ್‌ ತಾಳಿಕಟ್ಟೆ ಸರ್ಕಾರಕ್ಕೆ ಆಗ್ರಹಿಸಿದ್ದಾರೆ. ಶಿಕ್ಷಕರಿಗೆ ಈ ಮೌಲ್ಯಮಾಪನಕ್ಕೆ ಯಾವುದೇ ಸಂಭಾವನೆಯನ್ನೂ ನೀಡುತ್ತಿಲ್ಲ.

ಜೊತೆಗೆ ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ಒತ್ತಡದಲ್ಲಿರುವ ಶಿಕ್ಷಕರ ಮೇಲೆ ವೃಥಾ ಈ ಹೊಣೆಗಾರಿಕೆ ಹೇರಲಾಗಿದೆ ಎಂದು ಲೋಕೇಶ್‌ ತಾಳಿಕಟ್ಟೆ ವಾಗ್ದಾಳಿ ನಡೆಸಿದ್ದಾರೆ.

By admin

ನಿಮ್ಮದೊಂದು ಉತ್ತರ

error: Content is protected !!