ಶಿರಾಳಕೊಪ್ಪ, ಮಾ.೦೮:
ದೇಶದಲ್ಲಿ ದುಡ್ಡು ಕೊಟ್ಟರೂ ಅಕ್ಕಿ ಸಿಗುತ್ತಿಲ್ಲ. ಇಂತಹ ಸಂದಿಗ್ಧ ಪರಿಸ್ಥಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಬಡವರಿಗೆ ಅತ್ಯಂತ ಕಡಿಮೆ ಬೆಲೆಗೆ ಅಕ್ಕಿ ವಿತರಣೆ ಮಾಡುತ್ತಿರುವುದು ಶ್ಲಾಘ ನೀಯ ಎಂದು ಸಂಸದ ಬಿ.ವೈ.ರಾಘವೇಂದ್ರ ತಿಳಿಸಿದರು.


ಪಟ್ಟಣದ ಪುರಸಭೆ ಮುಂಭಾಗದಲ್ಲಿ ಭಾರತ್ ಅಕ್ಕಿ ವಿತರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.


’ಕೇವಲ ೨೯ಕ್ಕೆ ಒಂದು ಕೆ.ಜಿ ಅಕ್ಕಿ ನೀಡಲಾಗುತ್ತಿದೆ. ಬಿಜೆಪಿ ವಾಗ್ದಾನ ನೀಡಿದಂತೆ ಕೆಲಸ ಮಾಡುತ್ತಿದೆ. ಕಳೆದ ೧೦ ವರ್ಷಗಳಲ್ಲಿ ಯಾವುದೇ ಕಪ್ಪು ಚುಕ್ಕಿ ಇಲ್ಲದಂತೆ ನರೇಂದ್ರ ಮೋದಿ ಅವರು ಕೆಲಸ ಮಾಡಿದ್ದಾರೆ. ಅವರು ಮತ್ತೊಮ್ಮೆ ಪ್ರಧಾನಿ ಆಗಬೇಕು’ ಎಂದರು.


ಸಮೀಪದ ಹರಿಗಿ, ಗುಡ್ಡದ ಹೊಸಳ್ಳಿ, ಕಪ್ಪನಹಳ್ಳಿ ಸೇರಿ ವಿವಿಧ ಗ್ರಾಮಗಳಲ್ಲಿ ಭಾರತ್ ಅಕ್ಕಿ ವಿತರಿಸಲಾಯಿತು. ಟೌನ್ ಬಿಜೆಪಿ ಅಧ್ಯಕ್ಷ ಎ.ಸಿ.ಚನ್ನವೀರಪ್ಪ

, ಅರಣ್ಯ ನಿಗಮದ ಮಾಜಿ ಉಪಾದ್ಯಕ್ಷ ಕೆ.ರೇವಣಪ್ಪ, ತೊಗರ್ಸಿ ಹನುಂತಪ್ಪ, ಪುರಸಭೆ ಮಾಜಿ ಅಧ್ಯಕ್ಷ ಎಚ್.ಎಂ.ಚಂದ್ರ ಶೇಖರ್,

ಉಪಾಧ್ಯಕ್ಷ ಬಿ.ಎಲ್.ಮಂಜುನಾಯ್ಕ, ಅಬ್ದುಲ್ ನವೀದ್, ಬೆಲವಂತನಕೊಪ್ಪ ರಾಘವೇಂದ್ರ, ರೈತ ಮೋರ್ಚಾ ಉಪಾಧ್ಯಕ್ಷ ಇಂದೂಧರ್, ರಾಘು, ಯುವ ಮೊರ್ಚಾ ಅಧ್ಯಕ್ಷ ವೀರಣ್ಣ ಗೌಡ ಸೇರಿದಂತೆ ಇತರರಿದ್ದರು.

By admin

ನಿಮ್ಮದೊಂದು ಉತ್ತರ

You missed

error: Content is protected !!