ಶಿವಮೊಗ್ಗ, ಫೆ.16:
ಮುಖ್ಯಮಂತ್ರಿಗಳು 2024 25 ನೇ ಸಾಲಿನಲ್ಲಿ ಮಂಡಿಸಿದ ಆಯವ್ಯಯ ಕೇವಲ ಪಾಠ ಪ್ರವಚನದಂತಿತ್ತು, ಇದು ಮುಖ್ಯಮಂತ್ರಿಗಳ ವೈಫಲ್ಯವನ್ನು ಮುಚ್ಚಿಕೊಳ್ಳಲು ಪ್ರಯತ್ನಿಸಿರುವ ಬಜೆಟ್ ಎಂದು ಶಾಸಕ ಡಿಎಸ್ ಅರುಣ್ ಆರೋಪಿಸಿದ್ದಾರೆ.
ಯಾವುದೇ ಹೊಸ ಅಭಿವೃದ್ಧಿ ಯೋಜನೆಗಳ ಘೋಷಣೆ ಇರಲಿಲ್ಲ, ಉಚಿತ ಎಂಬ ಪದವನ್ನೇ ಬಜೆಟ್ ನ ಉದ್ದಕ್ಕೂ ಉಚಿತವಾಗಿ ಬಳಸಿದ್ದನ್ನು ಬಿಟ್ಟರೆ ಬೇರೇನು ಇಲ್ಲ, ಇದೊಂದು ದಿಕ್ಕು ದೆಸೆ ಇಲ್ಲದ ಬಜೆಟ್ ಎಂದಿದ್ದಾರೆ.
ಬಜೆಟ್ ನಲ್ಲಿ ಆರ್ಥಿಕ ಭದ್ರತೆ ವಿವಿಧ ವಲಯಗಳ ಪ್ರಗತಿ ಬಗ್ಗೆ ಏನು ಮಾಹಿತಿ ಇರಲಿಲ್ಲ

ಜನಸಾಮಾನ್ಯರ ಕಲ್ಯಾಣ ಕಾರ್ಯಗಳ ಬಗ್ಗೆ ಏನು ಪ್ರಸ್ತಾಪ ಮಾಡಲಿಲ್ಲ. ಸಾಮಾನ್ಯ ಜನರ ಆರ್ಥಿಕ ಶಕ್ತಿ ವೃದ್ಧಿಸುವ ಭರವಸೆ ಈ ಬಜೆಟ್ ನಲ್ಲಿ ಕಾಣಲಿಲ್ಲ,ಈ ವರ್ಷ ಬರಗಾಲ ಎದುರಿಸುತ್ತಿರುವ ಜನರಿಗೆ ಕನಿಷ್ಠ ಸೌಕರ್ಯಗಳ ಪ್ರಸ್ತಾಪ ಈ ಮುಂಗಡ ಪತ್ರದಲ್ಲಿಲ್ಲ, ರೈತರಿಗೆ ಈ ಬಜೆಟ್ ನಿಂದ ಯಾವುದೇ ಪ್ರಯೋಜನವಾಗುವುದಿಲ್ಲ, ರೈತರನ್ನು ಪರಿಗಣಿಸದ ಬಜೆಟ್ ಎಂದರೆ ತಪ್ಪಾಗಲಾರದು ಎಂದು ಅವರು ಹೇಳಿದ್ದಾರೆ.
ಕೇವಲ ಅಂಕಿ ಅಂಶಗಳ ಪ್ರಸ್ತಾಪ ಆಯಿತೇ ವಿನಃ ಯಾವುದೇ ಅನುಷ್ಠಾನದ ಕುರಿತಾದ ಸ್ಪಷ್ಟ ಭರವಸೆ ಇಲ್ಲ. ಮಹಿಳೆಯರು, ಮಕ್ಕಳ ಅಭಿವೃದ್ಧಿಯಾಗುವ ಯಾವ ಕಾರ್ಯಕ್ರಮಗಳು ಇಲ್ಲ
ಗ್ಯಾರಂಟಿಗಳನ್ನು ಹೊಂದಾಣಿಕೆ ಮಾಡುವುದಕ್ಕೆ ರೂಪಿಸಿರುವ ಬಜೆಟ್ ನಿಂದ ಎಲ್ಲಾ ಇಲಾಖೆಗಳ ಅಭಿವೃದ್ಧಿಗೆ ಕತ್ತರಿ ಯಾಕೆದಂತಾಗಿದೆ ಎಂದು ಅರುಣ್ ಹೇಳಿದ್ದಾರೆ.


ಇದು ಕೇವಲ ಅಂಕಿ ಅಂಶಗಳ ಮಂಡನೆಗೆ ತೆಗೆದುಕೊಂಡ ಕಾಲವಾಯಿತೇ ವಿನಹ, ಯಾವುದೇ ನಿರ್ದಿಷ್ಟ ಗುರಿ ಇಲ್ಲ ಎಂಬುದನ್ನು ಸರ್ಕಾರ ಮತ್ತೊಮ್ಮೆ ಸ್ಪಷ್ಟಪಡಿಸಿದೆ ಜನರ ಕಷ್ಟಗಳನ್ನು ಅರಿಯುವಲ್ಲಿ ಸರ್ಕಾರ ಸಂಪೂರ್ಣ ವಿಫಲವಾಗಿದೆ ಎಂದಿದ್ದಾರೆ.

L

By admin

ನಿಮ್ಮದೊಂದು ಉತ್ತರ

You missed

error: Content is protected !!