ಮಲೆನಾಡು ಮತ್ತು ಬಲುಸೀಮೆ ಭಾರದ ರೈತರ ಅಚ್ಚುಮೆಚ್ಚಿನ ಜನಪದ ಕ್ರೀಡೆ ಹೋರಿ ಬೆದರಿಸುವ ಹಬ್ಬವನ್ನು ತಾಲೂಕಿನ ಬೆಟ್ಟದಕೂರ್ಲಿ ಗ್ರಾಮದಲ್ಲಿ ಶ್ರೀ ವೀರಭದ್ರೇಶ್ವರ ಗ್ರಾಮ ಸಮಿತಿಯವರು ವಿಜೃಂಭಣೆಯಿಂದ ಆಚರಿಸಿದರು.


ತಾಲೂಕು ಸೇರಿದಂತೆ ನೆರೆಯ ಜಿಲ್ಲೆಗಳಿಂದ ಸುಮಾರು ೨೦೦ಕ್ಕೂ ಅಧಿಕ ಹೋರಿಗಳು ಆಗಮಿಸಿ ದ್ದವು. ಒಂದಕ್ಕಿಂದ ಓಂದು ಹೋರಿಗಳು ನಾವೇನು ಯಾರಿಗೂ ಕಮ್ಮಿ ಇಲ್ಲ ಎನ್ನುವ ಹಾಗೆ ಮಿಂಚಿನ ಓಟ ಮಾಡಿ ನೋಡುಗಳ ಗಮನ ಸೆಳೆದವು. ಅಖಾಡದಲ್ಲಿ ಹೋರಿಗಳು ಓಡುವುದನ್ನು

ನೋಡಲು ನೆರೆಯ ಗ್ರಾಮಗಳು ಸೇರಿದಂತೆ ನೆರೆಯ ತಾಲೂಕು ಹಾಗೂ ಜಿಲ್ಲೆಗಳಿಂದ ಸಾವಿರಾರು ಹೋರಿ ಅಭಿಮಾನಿಗಳು ಆಗಮಿಸಿದ್ದರು.
ಅಖಾಡದಲ್ಲಿ ಯಮನೂರು ಕುರುಕ್ಷೇತ್ರ, ಕುಬಟೂರು ಬ್ರಹ್ಮ, ಆನವಟ್ಟಿ ಅಭಿಮನ್ಯ, ಆನವಟ್ಟಿ ಪವರ್‌ಸ್ಟಾರ್, ಬ್ಯಾತನಾಳ ಕರ್ನಾಟಕ ಎಕ್ಸ್‌ಪ್ರೆಸ್, ಮಲೆನಾಡು ಚಿನ್ನ, ಶಿವಮೊಗ್ಗದ ಶಿವಲಿಂಗ, ಅಂಬಾರಗೊಪ್ಪದ ಯಜಮಾನ, ಸಮನವಳ್ಳಿ ಒಡೆಯ,

ಬೆಟ್ಟದಕೂರ್ಲಿಯ ಲಂಕಾಸುರ, ಬೆಟ್ಟದಹುಲಿ, ಸಾಹುಕಾರ, ವೀರಭದ್ರ, ವಿಕ್ರಂ, ಸಾರಂಗ, ಅಪ್ಪಾಜಿ, ಭೀಷ್ಮ, ಏಳುಕೋಟಿ ಸೇರಿದಂತೆ ವಿವಿಧ ಹೆಸರಿನ ಹೋರಿಗಳು ಓಡಿದವು.
ಹೋರಿ ಹಬ್ಬದ ಆಯೋಜಿಸಿದ್ದ ಬೆಟ್ಟದ ಕೂರ್ಲಿ ಗ್ರಾಮದಲ್ಲಿ ಶ್ರೀ ವೀರಭದ್ರೇಶ್ವರ ಗ್ರಾಮ ಸಮಿತಿಯವರು ಅಖಾಡದಲ್ಲಿ ಎರಡು ಬದಿಯಲ್ಲಿ ಸುರಕ್ಷತಾ ಕ್ರಮ ಕೈಗೊಂಡು, ಅಖಾಡದಲ್ಲಿ ಕ್ರಮವಾಗಿ ಒಂದೊಂದೆ ಹೋರಿಗಳನ್ನು ಓಡಿಸಿದರು. ಇದರಿಂದ ಯಾವುದೇ ಅಪಾಯಗಳು ಸಂಭವಿಸಲಿಲ್ಲ.

By admin

ನಿಮ್ಮದೊಂದು ಉತ್ತರ

You missed

error: Content is protected !!