ಎಂ.ಎ. ಪತ್ರಿಕೋದ್ಯಮ ಸೀಟುಗಳಿಗೆ ವಾಕ್‌ಇನ್ ಪ್ರವೇಶಾತಿ

ಶಂಕರಘಟ್ಟ, ಡಿ. 04: ಕುವೆಂಪು ವಿಶ್ವವಿದ್ಯಾಲಯದ ಸ್ನಾತಕೋತ್ತರ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಷಯದಲ್ಲಿ ಸುಮಾರು 10 ಮೆರಿಟ್ ಸೀಟುಗಳು ಲಭ್ಯವಿದ್ದು, ಡಿ. 05ರೊಳಗೆ ನೇರ ಪ್ರವೇಶಾತಿ ಪಡೆಯಲು ಅವಕಾಶ ನೀಡಲಾಗಿದೆ.
ಕುವೆಂಪು ವಿವಿಯ ಎಲ್ಲ ಸ್ನಾತಕೋತ್ತರ ಘಟಕಗಳು, ಕೇಂದ್ರಗಳು ಮತ್ತು ವಿಭಾಗಗಳಿಗೆ ನ. 27ರಿಂದ 29ರವರೆಗೆ ಪ್ರವೇಶಾತಿ ಪ್ರಕ್ರಿಯೆ ನಡೆಸಲಾಯಿತು.
ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ, ಗ್ರಂಥಾಲಯ ಮತ್ತು ಮಾಹಿತಿ ವಿಜ್ಞಾನ, ವನ್ಯಜೀವಿ ನಿರ್ವಹಣೆ, ಎಲೆಕ್ಟ್ರಾನಿಕ್ಸ್, ಶಿಕ್ಷಣ, ಸಮಾಜಶಾಸ್ತ್ರ ವಿಷಯಗಳಲ್ಲಿ  ಕೆಲವೇ ಮೆರಿಟ್ ಸೀಟುಗಳು ಬಾಕಿ ಉಳಿದಿವೆ. ಇವುಗಳನ್ನು ಆಸಕ್ತ ಅರ್ಹರಿಗೆ ಒದಗಿಸಲು ವಿವಿ ಕ್ರಮ ಕೈಗೊಂಡಿದೆ.
ಪತ್ರಿಕೋದ್ಯಮ ಸ್ನಾತಕೋತ್ತರ ಪದವಿ (ಎಂ.ಎ.) ಪಡೆಯಲು ಬಯಸುವವರಿಗೆ ಇದೊಂದು ಉತ್ತಮ ಅವಕಾಶವಾಗಿದ್ದು, ಡಿ.05ರವರೆಗೆ ಮೊದಲು ಬಂದವರಿಗೆ ಮೊದಲ ಆದ್ಯತೆ ಮೇಲೆ ಅಡ್ಮಿಷನ್ ನೀಡಲು ನಿರ್ಧರಿಸಲಾಗಿದೆ. ಪತ್ರಿಕೋದ್ಯಮ ಸ್ನಾತಕೋತ್ತರ ಪದವಿಗೆ ಪ್ರವೇಶ ಪಡೆಯಲು ಸ್ನಾತಕ ಪದವಿ (ಡಿಗ್ರಿ)ಯಲ್ಲಿ  ಬಿ.ಎ., ಬಿ.ಎಸ್ಸಿ. ಅಥವಾ ಬಿ.ಕಾಂ., ಪದವಿ ಪಡೆದ ಅಭ್ಯರ್ಥಿಗಳು ಅರ್ಹರಾಗಿರುತ್ತಾರೆ. ಉಳಿಕೆ ಮೆರಿಟ್ ಸೀಟುಗಳ ಭರ್ತಿಗೆ ವಿಶೇಷ ಅವಕಾಶ ನೀಡಲಾಗಿದ್ದು, ಆದ್ಯತೆ ಅನುಗುಣವಾಗಿ ಪ್ರವೇಶಾತಿ ನೀಡಲಾಗುವುದು. ಪ್ರವೇಶಾತಿ ಕುರಿತ ಹೆಚ್ಚಿನ ಮಾಹಿತಿಗಾಗಿ ವಿಭಾಗದ ಅಧ್ಯಕ್ಷರನ್ನು ಅಥವಾ ಮೊ. 9886836660, 9141215169 ಸಂಪರ್ಕಿಸಬಹುದು.

By admin

ನಿಮ್ಮದೊಂದು ಉತ್ತರ

You missed

error: Content is protected !!