ಶಿವಮೊಗ್ಗ, ನ.೨೯:
ಜಿಲ್ಲೆಯ ವಿವಿಧೆಡೆ ನಿನ್ನೆ ರಾತ್ರಿಯಿಡೀ ಮಳೆ ಸುರಿದಿದ್ದು, ಸಿಡಿಲಿಗೆ ಭದ್ರಾವತಿಯ ಇಬ್ಬರು ಸಹೋದರರು ಬಲಿಯಾಗಿದ್ದಾರೆ.


ಭದ್ರಾವತಿಯ ಹುಣಸೆಕಟ್ಟೆ ಜಂಕ್ಷನ್ ನ ಬಳಿಯ ಗದ್ದೆಯಲ್ಲಿ ಕಟಾವು ಆಗಿದ್ದ ಭತ್ತ ಕಾಯಲು ತೆರಳಿದ್ದ ಹುಣ ಸೆಕಟ್ಟೆ ಜಂಕ್ಷನ್ ನಿವಾಸಿಗಳಾದ ಎಸ್.ಬೀರೇಶ (ಬೀರು) (೩೨), ಎಸ್. ಸುರೇಶ (೩೦) ಸಿಡಿಲ ಅಘಾತಕ್ಕೆ ಬಲಿಯಾಗಿದ್ದಾರೆ.


ರಾತ್ರಿ ಗದ್ದೆಗೆ ಹೋಗಿದ್ದವರು ಬೆಳಿಗ್ಗೆ ಮನೆಗೆ ಬಾರದ ಕಾರಣ, ಫೋನ್ ತೆಗೆಯದ ಕಾರಣ ಮನೆಯವರು ಗದ್ದೆಗೆ ಬಂದು ನೋಡಿದಾಗ ಸಹೋದರರಿಬ್ಬರೂ ಗದ್ದೆಯಲ್ಲೇ

ಸಾವಿಗೀಡಾಗಿರುವುದು ಗೊತ್ತಾಗಿದೆ.
ಭದ್ರಾವತಿ ಸರ್ಕಾರಿ ಆಸ್ಪತ್ರೆಯ ಶವಗಾರಕ್ಕೆ ಮೃತದೇಹಗಳ ರವಾನೆಯಾಗಿದ್ದು, ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು.


ಭದ್ರಾವತಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

By admin

ನಿಮ್ಮದೊಂದು ಉತ್ತರ

error: Content is protected !!