ಶಿವಮೊಗ್ಗ: ತ್ಯಾವರೆಕೊಪ್ಪದಲ್ಲಿರುವ ಭಿಕ್ಷುಕರ ಪುನರ್ವಸತಿ ಕೇಂದ್ರಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಅವರು ತಮ್ಮ ತಂದೆ ಬಂಗಾರಪ್ಪನವರ ಹುಟ್ಟಿದ ಹಬ್ಬದ ಅಂಗವಾಗಿ ಮಿನಿ ಹೋಂ ಥಿಯೇಟರ್ ನಿರಾಶ್ರಿತರಿಗೆ ಪಾದರಕ್ಷೆಯನ್ನು ನೀಡಲಾಯಿತು.


ಮಧು ಬಂಗಾರಪ್ಪನವರು ಅಕ್ಟೋಬರ್ ೨೬ರಂದು ತಮ್ಮ ತಂದೆ ಬಂಗಾರಪ್ಪನವರ ಜನ್ಮದಿನಾಚರಣೆಯನ್ನು ಭಿಕ್ಷುಕರ ಪುನರ್ವಸತಿ ಕೇಂದ್ರಕ್ಕೆ ಭೇಟಿ ನೀಡಿ ಕೇಕ್ ಕತ್ತರಿಸಿ, ಬೆಡ್‌ಶೀಟ್ ವಿತರಿಸಿ ಮೇಲ್ಕಂಡ ವಸ್ತುಗಳನ್ನು ನೀಡುವುದಾಗಿ ಭರವಸೆ ನೀಡಿದ್ದರು.


ಅದರಂತೆ ನಿನ್ನೆ ಸಂಜೆ ಎಸ್. ಬಂಗಾರಪ್ಪ ಫೌಂಡೇಷನ್ ಹಾಗೂ ಎಸ್. ಬಂಗಾರಪ್ಪ ಅಭಿಮಾನಿ ಬಳಗದ ಪರವಾಗಿ ಸದಸ್ಯರು ಹಾಗೂ ಎನ್‌ಎಸ್‌ಯುಐ ಕಾರ್ಯಕರ್ತರು ಕೇಂದ್ರಕ್ಕೆ ಭೇಟಿ ನೀಡಿ ಮಧುಬಂಗಾರಪ್ಪನವರು ನೀಡಿದ ೬೫ ಇಂಚಿನ ಮಿನಿ ಹೋಂ ಥಿಯೇಟರ್ ಹಾಗೂ ಎಲ್ಲಾ ೨೩೦ ನಿರಾಶ್ರಿತರಿಗೂ ಪಾದರಕ್ಷೆಗಳನ್ನು ಹಸ್ತಾಂತರಿಸಿದರು.


ಈ ಸಂದರ್ಭದಲ್ಲಿ ಪ್ರಮುಖರಾದ ಜಿ.ಡಿ. ಮಂಜುನಾಥ್, ಮುಕ್ತಿಯಾರ್ ಅಹ್ಮದ್, ಮಹಿಬುಲ್ಲಾ ಖಾನ್, ಜಿತೇಂದ್ರ ಗೌಡ, ಮಧುಸೂದನ್, ವಿಜಯಕುಮಾರ್, ಎಂ.ಬಿ. ರವಿಕುಮಾರ್, ಜ್ಯೋತಿ ಅರಳಪ್ಪ, ಟಿ. ಮಂಜಪ್ಪ, ಜಿ. ರವಿ ಮುಂತಾದವರು ಇದ್ದರು.

By admin

ನಿಮ್ಮದೊಂದು ಉತ್ತರ

You missed

error: Content is protected !!