ಎರಡು ಮೃತದೇಹಗಳು ಪತ್ತೆಯ ಸುತ್ತ ಅನುಮಾನಗಳ ಹುತ್ತ
ಭದ್ರಾವತಿ

ಅಕ್ರಮ ಚಟುವಟಿಗಳ ತಾಣವಾಗಿತ್ತೆನ್ನಲಾದ ಭದ್ರಾವತಿ ಸಿದ್ಧರೂಢ ಬಡಾವಣೆಯ ನಗರಸಭೆ ಯುಜಿಡಿ ಶುದ್ಧೀಕರಣ ಘಟಕದಲ್ಲಿ ಎರಡು ಮೃತದೇಹಗಳು ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿರುವುದು ನಾನಾ ಅನುಮಾನಗಳನ್ನು ಹುಟ್ಟಿಸಿದೆ.
ಓರ್ವ ಪುರುಷ ಹಾಗೂ ಓರ್ವ ಮಹಿಳೆಯ ಮೃತ ದೇಹಗಳು ಈ ಯುಜಿಡಿಯ ಬಾವಿಯಲ್ಲಿ ಪತ್ತೆಯಾಗಿದ್ದು, ಮಹಿಳೆಯ ಮೃತದೇಹವನ್ನ ಗುರುತಿಸಲಾಗಿದೆ. ಹಳೆನಗರ ನಿವಾಸಿ ಎಂದು ಹೇಳಲಾಗುತ್ತಿದೆ. ಆದರೆ ಪುರುಷನ ದೇಹವಿನ್ನೂ ಪತ್ತೆಯಾಗಿಲ್ಲ. ಪ್ರಕರಣ ಹಳೇನಗರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.
ಶೃಂಗೇರಿ ಶಂಕರ ಮಠದ ಹಿಂಬಾಗದಲ್ಲಿರುವ ಈ ಯುಜಿಡಿ ಶುದ್ಧೀಕರಣ ಘಟಕದಲ್ಲಿ ಕಾನೂನು ಬಾಹಿರ ಚಟುವಟಿಕೆಗಳು ನಡೆಯುತ್ತಿದ್ದವೆಂಬ ಆರೋಪ ಕೇಳಿ ಬಂದಿದೆ.
ಈ ಎರಡೂ ಮೃತ ದೇಹಗಳು ಪತ್ತೆಯಾಗಿರುವ ಹಿಂದೆ ಯಾವುದೇ ಕೊಲೆಯ ಶಂಕೆಗಳು ಕೇಳಿಬರುತ್ತಿಲ್ಲ. ಆದರೆ, ಅವರೇಕೆ ಇಲ್ಲಿಗೆ ಬಂದರು ಎಂಬ ಪ್ರಶ್ನೆ ಹುಟ್ಟಿದೆ. ಈ ಯುಜಿಡಿ ಶುದ್ಧೀಕರಣ ಘಟಕದಲ್ಲಿ ಕಾನೂನು ಬಾಹಿರ ಚಟುವಟಿಕೆಗಳು ನಡೆದಿರುವ ಬಗ್ಗೆ ಶಂಕೆ ವ್ಯಕ್ತವಾಗುತ್ತಿದೆ.

ಅನೈತಿಕ ಚಟುವಟಿಕೆ, ಕುಡಿತ ಹಾಗೂ ಇತರೆ ಕಾನೂನು ಬಾಹಿರ ಚಟುವಟಿಕೆಗಳು ಈ ಯುಜಿಡಿ ಶುದ್ಧೀಕರಣ ಘಟಕದಲ್ಲಿ ಕೇಳಿಬರುತ್ತಿದೆ. ಇಲ್ಲಿ ದೊರೆತ ಎರಡು ಮೃತದೇಹ ಸಾವನ್ನಪ್ಪಿ ಸುಮಾರು ನಾಲ್ಕೈದು ದಿನಗಳು ಕಳೆದಿದ್ದು ನಿನ್ನೆ ರಾತ್ರಿ ಪತ್ತೆಯಾಗಿವೆ.

ಶಿವಮೊಗ್ಗದಲ್ಲಿ ಪತ್ತೆಯಾದ ಯುವತಿ: ಬುದ್ದಿ ಹೇಳಿ ಮನೆಗೆ ಕಳಿಸಿದ ಪೊಲೀಸರು
ಶಿವಮೊಗ್ಗ
ಅನ್ಯ ಕೋಮಿನ ಯುವಕನೊಂದಿಗೆ ನಾಪತ್ತೆಯಾಗಿದ್ದ ಯುವತಿಯು ಶಿವಮೊಗ್ಗದಲ್ಲಿ ಪತ್ತೆಯಾಗಿದ್ದು, ಚುರುಕು ಕಾರ್ಯಾಚರಣೆ ನಡೆಸಿದ ಮಲ್ಪೆ ಪೊಲೀಸರು ಬುದ್ದಿ ಹೇಳಿ ಮನೆಗೆ ಕಳಿಸಿರುವ ಘಟನೆ ವರದಿಯಾಗಿದೆ.
ಬ್ರಹ್ಮಾವರದ ಹದಿನೆಂಟು ವರುಷದ ಯುವತಿ ಉಡುಪಿಗೆ ಕಾಲೇಜಿಗೆ ಹೋಗಿ ಬರುವಾಗ ಅನ್ಯ ಕೋಮಿನ ಯುವಕನೊಂದಿಗೆ ಪ್ರೇಮಿಸಿ ಮದುವೆಯಾಗಲು ಮುಂದಾಗಿದ್ದರು. ಅದಕ್ಕೆ ಯುವತಿಯ ಕುಟುಂಬ ಹಾಗೂ ಹಲವು ಸಂಘಟನೆಗಳು ತೀವ್ರ ಆಕ್ಷೇಪಿಸಿದ್ದರು.
ಈ ಹಿಂದೆಯೇ ಬುದ್ದಿ ಹೇಳಿದ್ದ ಕುಟುಂಬದ ಮಾತಿಗೆ ತಕ್ಕದಾಗಿದ್ದ ಯುವತಿ, ಮತ್ತೆ ಮನೆಯಿಂದಯುವಕನೊಂದಿಗೆ ತಪ್ಪಿಸಿಕೊಂಡಿದ್ದಳು.
ಈ ಬಗ್ಗೆ ಚುರುಕು ಕಾರ್ಯಾಚರಣೆ ನಡೆಸಿದ ಪೊಲೀಸರು, ಯುವತಿಯನ್ನು ಪತ್ತೆ ಹಚ್ಚಿ ಎರಡೂ ಕುಟುಂಬದವರನ್ನ ಕರೆದು ಮುಚ್ಚಳಿಕೆ ಬರೆಸಿಕೊಂಡು ಹಾಗೂ ಯುವತಿಗೆ ಬುದ್ದ ಹೇಳಿ ಮನೆಗೆ ಕಳಿಸಿದ್ದಾರೆ.

By admin

ನಿಮ್ಮದೊಂದು ಉತ್ತರ

You missed

error: Content is protected !!