ಶಿವಮೊಗ್ಗ ಸಮೀಪದ ಗಾಜನೂರಿನ ತುಂಗಾ ಜಲಾಶಯ ತುಂಬು ಸನಿಹದಲ್ಲಿದೆ.
ಶೃಂಗೇರಿ, ತೀರ್ಥಹಳ್ಳಿ ಭಾಗದಲ್ಲಿ ಸುರಿಯುತ್ತಿರುವ ಬಾರೀ   ಮಳೆಯಿಂದ ತುಂಗಾ ಜಲಾಶಯ ತುಂಬಲು ಕೇವಲ ಡ್ಯಾಂ ಭರ್ತಿಗೆ ಕೇವಲ ಒಂದೂವರೆ ಅಡಿ  ಬಾಕಿ ಇದೆ.
ಇಂದು ಲಭಿಸಿದ ಮಾಹಿತಿಯನುಸಾರ 588.24 ಮೀಟರ್ ನ ಗರಿಷ್ಡ ಅಳತೆಯ ತುಂಗೆಯ  ಅಂಗಳದಲ್ಲಿ ಇಂದಿನ ನೀರಿನ ಮಟ್ಟ 587.54 ಮೀಟರ್ ನಷ್ಟಾಗಿದೆ. ರಾತ್ರಿ ಸಹ ದಾರಾಕಾರ ಮಳೆಯಾಗಿದ್ದು .6 ರಷ್ಟು ಹೆಚ್ಚಿದೆ. ತುಂಗೆ ತುಂಬುವ ಸನಿಹದಲ್ಲಿದ್ದಾಳೆ.
ಈ ಬಾರಿ ಅವಧಿಗೂ ಮುನ್ನವೇ ತುಂಗಾ ಜಲಾಶಯ ಭರ್ತಿಯಾಗುತ್ತಿರುವುದು ಎಲ್ಲರ ಮೊಗದಲ್ಲಿ ಸಂತಸ ಉಂಟು ಮಾಡಿದೆ.
ಸರಾಸರಿ ಅಡಿಯ ಲೆಕ್ಕಾಚಾರದಲ್ಲಿ ಅವಲೋಕಿಸಿದಾಗ13.7 ಅಡಿಯ ತುಂಗಾ ಜಲಾಶಯದಲ್ಲಿ ನಿನ್ನೆ 11.6 ಅಡಿ ನೀರಿತ್ತು. ಇಲಾಖೆ ಈ ಬಗ್ಗೆ ಸೂಕ್ಷ್ಮವಾಗಿ ಗಮನಿಸುತ್ತಿದ್ದು, ತುಂಬುವ ಸಮಯದಲ್ಲಿ ಮಾಹಿತಿ ನೀಡಿ ನೀರು ಬಿಡಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮಳೆ ಪ್ರಮಾಣ: ಶಿವಮೊಗ್ಗ ತಾಲ್ಲೂಕಿನಲ್ಲಿ  5.2 ಮಿ.ಮೀ, ಭದ್ರಾವತಿ 6.4 ಮಿ.ಮೀ, ತೀರ್ಥಹಳ್ಳಿ 20.2ಮಿ.ಮೀ, ಸಾಗರ 13.4 ಮಿ.ಮೀ, ಸೊರಬ  7.4ಮಿ.ಮೀ, ಶಿಕಾರಿಪುರ 4.0ಮಿ.ಮೀ, ಹೊಸನಗರ 29.6ಮಿ.ಮೀ ತಾಲ್ಲೂಕುಗಳಲ್ಲಿ ಮಳೆಯಾಗಿದ್ದು , ಜೂನ್ ತಿಂಗಳಲ್ಲಿ ಉತ್ತಮ ಮಳೆಯಾಗುತ್ತಿರುವುದು ಕಂಡುಬರುತ್ತಿದೆ.
ಜಿಲ್ಲಾಡಳಿತ ಸಿದ್ದ: ಈಗಿನ ಜೂನ್ ಹಾಗೂ ಜುಲೈ ತಿಂಗಳಲ್ಲಿ ಭಾರೀ ಮಳೆಯಾಗುವ ನಿರೀಕ್ಷೆಯಿದ್ದು ಅದರಿಂದ ಉಂಟಾಗಬಹುದಾದ ಪ್ರವಾಹವನ್ನು ಗಮನದಲ್ಲಿಟ್ಟುಕೊಂಡು ಈ ಬಾರಿ ಜಿಲ್ಲಾಡಳಿತ ಪ್ರವಾಹ ಪರಿಸ್ಥಿತಿ ಎದುರಿಸಲು ಸಕಲ ಸಿದ್ಧತೆ ಮಾಡಿಕೊಂಡಿದೆ.
ಇಂದಿನ ಜಲಾಶಯ ವಿವರ
*:TUNGA DAM GAUGE:*    Date:14.06.2020
Dam level :  587.54  mtr
Storage Capacity:     
Gross :   2.848 TMC
Live :       2.019 TMC
Inflow :      1596 cuseca
Total Outflow 1214 Cusecs
a) River :           1179   
b) UTP canal :  Nil
c) LBC:               nil    
d) RBC:               nil                                   e) water supply : 35

Last year Level: 583.37 Mtr      
Storage  Capacity:
Gross :  1.134 TMC
Live  :      0.305 TMC
Inflow  :     Nil                          Total outflow :   35 Cusecs

By admin

ನಿಮ್ಮದೊಂದು ಉತ್ತರ

You missed

error: Content is protected !!