![Untitled-3 copy](https://tungataranga.com/wp-content/uploads/2023/08/Untitled-3-copy-2.jpg)
ಶಿವಮೊಗ್ಗ: ಭದ್ರಾವತಿಯ ಶರತ್ ದುರಂತ ಮಾಸುವ ಮುನ್ನವೇ ಮತ್ತೊಂದು ಅವಘಡ ಸಂಭವಿಸಿದೆ. ತುಂಗಾ ಜಲಾಶಯ ಬಳಿ ಯುವಕ ನೀರು ಪಾಲಾಗಿದ್ದಾನೆ.
![](http://tungataranga.com/wp-content/uploads/2023/04/Screenshot_2023_0226_070755-1.jpg)
ಶಿವಮೊಗ್ಗ ತಾಲೂಕಿನ ಗಾಜನೂರು ಜಲಾಶಯದ ಬಳಿ ನಿನ್ನೆ ಪ್ರವಾಸಕ್ಕೆ ಬಂದಿದ್ದ ವೇಳೆ ಘಟನೆ ನಡೆದಿದೆ. ಮಿಳ್ಳಘಟ್ಟದ ಹರೀಶ್(22) ನೀರು ಪಾಲಾದ ಯುವಕ ಎಂದು ಹೇಳಲಾಗಿದೆ.
![](http://tungataranga.com/wp-content/uploads/2023/05/Screenshot_2023_0520_152938.jpg)
ಅಗ್ನಿಶಾಮಕ ದಳದ ಸಿಬ್ಬಂದಿಯಿಂದ ಯುವಕನಿಗಾಗಿ ಹುಡುಕಾಟ ನಡೆಸಲಾಗಿದೆ. ಯಾಂತ್ರಿಕ ಬೋಟ್ನಲ್ಲಿ ಯುವಕನಿಗಾಗಿ ಹುಡುಕಾಟ ನಡೆದಿದ್ದು, ಸ್ಥಳೀಯ ಮೀನುಗಾರರು, ಈಜುಗಾರರು ಕಾರ್ಯಾಚರಣೆಗೆ ಸಾಥ್ ನೀಡಿದ್ದಾರೆ.
![](http://tungataranga.com/wp-content/uploads/2023/08/2023-add.jpg)
ಡ್ಯಾಂ ಪ್ರವೇಶಕ್ಕೆ ನಿಷೇಧ ಹಿನ್ನೆಲೆ ಚಾನಲ್ ಪಕ್ಕದ ದಾರಿಯಲ್ಲಿ ಸ್ನೇಹಿತರು ಹೋಗಿದ್ದು, ಅಲ್ಲಿನ ಕಾಮಗಾರಿ ನಡೆಯುತ್ತಿರುವ ಸೇತುವೆ ಬಳಿ ಹೋಗಿದ್ದ ವೇಳೆ ಹರೀಶ್ ನೀರು ಪಾಲಾಗಿದ್ದಾನೆ ಎನ್ನಲಾಗಿದೆ. ತುಂಗಾನಗರ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.