ಶಿವಮೊಗ್ಗ: ಮುಖಾಮುಖಿ ಎಸ್.ಟಿ. ರಂಗತಂಡ, ಕಾಮನ್‌ಮ್ಯಾನ್ ಸಂಸ್ಥೆ ವತಿಯಿಂದ ಜೂ. ೧೭ ರಂದು ಸಂಜೆ ೬.೩೦ಕ್ಕೆ ಕುವೆಂಪು ರಂಗಮಂದಿರದಲ್ಲಿ ಡಾ. ಬೇಲೂರು ರಘುನಂದನ್ ರವರ ನಿರ್ದೇಶನದ ಶ್ರೀಮಾತಾ ಡಾ. ಮಂಜಮ್ಮ ಜೋಗತಿ ಜೀವನಾಧಾರಿತ ಅರುಣ್‌ಕುಮಾರ್ ಅಭಿನಯದ ಮಾತಾ ನಾಟಕ ಪ್ರದರ್ಶನ ಹಮ್ಮಿಕೊಳ್ಳಲಾಗಿದೆ.
ವಿಶೇಷ ಆಹ್ವಾನಿತರಾಗಿ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರಾದ ಡಾ. ಬಿ. ಮಂಜಮ್ಮ ಜೋಗತಿ ಹಾಗೂ ಡಾ. ತುಳಸಿಗೌಡರವರು ಆಗಮಿಸಲಿದ್ದಾರೆ. ಎಂದು ಕಾಮಾನ್‌ಮ್ಯಾನ್ ಸಂಸ್ಥೆ ಅಧ್ಯಕ್ಷರಾದ ಗಣೇಶ್ ಬಿಳಿಗಿ ತಿಳಿಸಿದ್ದಾರೆ. ಈ ಕಾರ್ಯಕ್ರಮದ ಉದ್ಘಾಟನೆಯನ್ನು ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಣ ಸಚಿವ ಮಧು ಬಂಗಾರಪ್ಪ ನೆರವೇರಿಸಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಮುಖ್ಯ ಅತಿಥಿಗಳಾಗಿ ಡಾ. ಧನಂಜಯ ಸರ್ಜಿ, ಅರೇಕಾ ಟೀ ನಿವೇದನ್ ನೆಂಪೆ, ಕಾಮಿಡಿ ಕಿಲಾಡಿ ಕಲಾವಿದ ಸದಾನಂದ ಕಾಳೆ, ಕನ್ನಡ ಮತ್ತು ಸಂಸ್ಕೃತ ಇಲಾಖೆ ಸಹಾಯಕ ನಿರ್ದೇಕರಾದ ಉಮೇಶ್ ಹಾಲಡಿ, ಪರಿಕ್ರಮ ಎಜ್ಯುಕೇಷನಲ್ ಚಾರಿಟಬಲ್ ಟ್ರಸ್ಟ್‌ನ ಗಾಯತ್ರಿ ಬಿ.ಎಂ. ಸೂರ್ಯ ನರ್ಸಿಂಗ್ ಕಾಲೇಜು ಛೇರ‍್ಮನ್ ಶ್ರೀಮತಿ ನೇತ್ರಾವತಿ,
ವಾಲ್ಯು ಪ್ರಾಡೆಕ್ಟ್ ಮ್ಯಾನೆಜಿಂಗ್ ಡೈರೆಕ್ಟರ್ ಡಾ. ಶ್ರೀನಿವಾಸ ಮೂರ್ತಿ, ವಕೀಲ ಕೆ.ಪಿ. ಶ್ರೀಪಾಲ್, ಕಾಮಾನ್‌ಮ್ಯಾನ್ ಸಂಸ್ಥೆ ಗೌರವಾಧ್ಯಕ್ಷ ಡಾ. ಕೆ.ಜಿ. ವೆಂಕಟೇಶ್, ನಿರ್ದೇಶಕರಾದ ಮಂಜುನಾಥ್ ಎಸ್.ಆರ್., ಲಕ್ಷ್ಮೀ ಟ್ರಾನ್ಸ್‌ಪೋರ್ಟ್ ಆರ್. ಜಗನ್ನಾಥ್, ಮಹೇಂದ್ರ, ಸನ್ನದು ಲೆಕ್ಕಪರಿಶೋಧಕರು ಭಾಗವಹಿಸಲಿದ್ದಾರೆ. ಅಧ್ಯಕ್ಷತೆಯನ್ನು ಮುಖಾಮುಖಿ ಸಂಸ್ಥೆಯ ಅಧ್ಯಕ್ಷರಾದ ಮಂಜು ರಂಗಾಯಣ ವಹಿಸಲಿದ್ದಾರೆ.
ಈ ನಾಟಕಕ್ಕೆ ತಾವುಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಬೇಕಾಗಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕಾಗಿ ಕೋರುತ್ತೇವೆ. ಹೆಚ್ಚಿನ ಮಾಹಿತಿಗಾಗಿ ೯೭೩೯೯೬೪೭೨೬, ೯೪೮೨೦೨೧೦೭೪ ಸಂಪರ್ಕಿಸಿ.