ದಸರಾ ಸಂಭ್ರಮವನ್ನು ನೋಡಬೇಕೆಂದರೆ ನಮ್ಮ ಶಿವಮೊಗ್ಗ ನಗರಪಾಲಿಕೆ ವ್ಯಾಪ್ತಿಯ ಗ್ರಾಮೀಣ ಭಾಗ ಎನಿಸುವಂತಹ ಶಿವಮೊಗ್ಗ ಹೊರವಲಯದ ತೇವರ ಚಟ್ನಳ್ಳಿ ಗ್ರಾಮದಲ್ಲಿ ನೋಡಬಹುದು. 

ನೂರಾರು ವರ್ಷಗಳ ಇತಿಹಾಸ ಹೊಂದಿರುವ ಶ್ರೀ ಹೊನ್ನತ್ತಮ್ಮ ದೇವಾಲಯ ಇಲ್ಲಿನ ದಸರಾ ಸಂಭ್ರಮಕ್ಕೆ ಕೇಂದ್ರಬಿಂದು.  ಇಲ್ಲಿ ಪ್ರತಿ ವರ್ಷ ದಸರಾ ನವರಾತ್ರಿಯ ಸಂಭ್ರಮ ಅತ್ಯಂತ ವಿಶೇಷವಾಗಿರುತ್ತದೆ. ದೇವಿ ಪಟ್ಟಕ್ಕೇರುವ ದಿನ ವಿಶೇಷ ಪೂಜೆಯೊಂದಿಗೆ ಅನ್ನಸಂತರ್ಪಣೆ ನಡೆಯುತ್ತದೆ. ಅದೇ ರೀತಿ ಪ್ರತಿ ದಿನ  ದೇವಿಯ ಅಲಂಕಾರಗಳು ಅತ್ಯಂತ ವಿಶೇಷವಾಗಿರುತ್ತವೆ. ಆಯುಧ ಪೂಜೆ ದಿನ ರಂಗೋಲಿ, ಹಾಡು ಮಣೆ ಆಟ, ಓಟ ಮತ್ತಿತರ ಆಟಗಳನ್ನು ಗ್ರಾಮದ ಎಲ್ಲಾ ಜನತೆ ಆಡಿ ಸಂಭ್ರಮಿಸುತ್ತಾರೆ. ಮಹಿಳೆಯರು ಹಾಗೂ ಮಕ್ಕಳ ಪಾಲಿಗೆ ಇದುವೇ ಸಂತಸದ ಹಬ್ಬ.

ಆಯುಧ ಪೂಜೆ ಮುಗಿದ ನಂತರ ಬರುವ ವಿಜಯದಶಮಿಯಂದು ಎಲ್ಲಾ ಜನ ಸೇರಿ ಪಾರ್ಕ್ ಆವರಣದಲ್ಲಿ ಬನ್ನಿ ಮುಡಿದು ಪರಸ್ಪರ ಸ್ನೇಹ ಸಂಬಂಧಗಳನ್ನು ವೃದ್ಧಿಸಿಕೊಳ್ಳುವ ಅಪರೂಪದ ಕ್ಷಣಗಳು  ಇಲ್ಲಿ ಅತ್ಯಂತ ವಿಶೇಷ. ಸೇವಾ ಸಮಿತಿ ಅಧ್ಯಕ್ಷ ಎ.ವಿ. ನಂಜುಂಡಪ್ಪ ಕಾರ್ಯದರ್ಶಿ ಎ.ವಿ. ನಾಗರಾಜ್ ಹಾಗೂ ಇತರ ಪದಾದಿಕಾರಿಗಳು, ಸದಸ್ಯರು ಹಾಗೂ ಗ್ರಾಮದ ಜನತೆ ಇದರ ಜವಾಬ್ದಾರಿ ಹೊತ್ತ  ಸಂಭ್ರಮದ ದಸರಾ ಆಚರಣೆ ಎಲ್ಲೆಡೆಗಿಂತ ಇಲ್ಲಿ ಅತ್ಯಂತ ವಿಶೇಷ.

By admin

ನಿಮ್ಮದೊಂದು ಉತ್ತರ

You missed

error: Content is protected !!