ಜ್ಞಾನಾರ್ಜನೆಗೆ ಅನೇಕ ಸಂಪನ್ಮೂಲಗಳು ಲಭ್ಯವಿರುವ ಹೊತ್ತಿನಲ್ಲಿ ಕಲಿಕೆಯೆಂಬ ನಿರಂತರ ಪ್ರಕ್ರಿಯೆಯಲ್ಲಿ ಸಕ್ರಿಯರಾಗಿ ಎಂದು ರಾಷ್ಟ್ರೀಯ ಶಿಕ್ಷಣ ಸಮಿತಿ ಕಾರ್ಯದರ್ಶಿಗಳಾದ ಎಸ್.ಎನ್.ನಾಗರಾಜ ಕಿವಿಮಾತು ಹೇಳಿದರು.


ರಾಷ್ಟ್ರೀಯ ಶಿಕ್ಷಣ ಸಮಿತಿಯ ವತಿಯಿಂದ ರಾಷ್ಟ್ರೀಯ ಶಿಕ್ಷಣ ಮಹಾವಿದ್ಯಾಲಯ ಕಾಲೇಜಿನ ಸಭಾಂಗಣದಲ್ಲಿ ಎನ್‌ಇಎಸ್ ಸಂಸ್ಥೆಯ ಸೇವಾ ನಿರತ ಪ್ರೌಢಶಾಲಾ ಶಿಕ್ಷಕರಿಗಾಗಿ ಏರ್ಪಡಿಸಿದ್ದ ವಿಷಯಗಳ ಪುಷ್ಟಿಕರಣ ಮತ್ತು ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.
ಮೇಷ್ಟ್ರು ಹೇಳಿದ್ದೆ ಸತ್ಯವೆಂಬ ಕಾಲ ಮರೆಯಾಗಿದೆ. ಗ್ರಹಿಸಿದ ಎಲ್ಲಾ ವಿಷಯಗಳನ್ನು ಪುನರ್ ವ್ಯಾಖ್ಯಾನಿ ಸುವ ಅವಕಾಶವನ್ನು ಇಂದಿನ ತಾಂತ್ರಿಕ ಸಂಪನ್ಮೂಲ ಗಳು ಮಾಡಿಕೊಟ್ಟಿದೆ. ಹಾಗಾಗಿಯೇ ಕಲಿಕೆಯೆಂಬ ಪ್ರಕ್ರಿಯೆ ನಿರಂತರತೆಯನ್ನು ಪಡೆಯಲಿ.


ಪ್ರೌಢಶಾಲೆ ಎಂಬುದು ಮಕ್ಕಳ್ಳನ್ನು ಹೊಸತನ ದೆಡೆಗೆ ಸನ್ನದ್ಧಗೊಳಿಸುವ ಪ್ರಮುಖ ಘಟ್ಟ. ವೈದ್ಯ ಮತ್ತು ಶಿಕ್ಷಕ ವೃತ್ತಿ ಹೊಟ್ಟೆಪಾಡಿನ ಕೆಲಸವಲ್ಲ. ಕೇವಲ ಹೊಟ್ಟೆ ಪಾಡಿಗಾಗಿಯೇ ಈ ವೃತ್ತಿಗಳನ್ನು ಆಯ್ದುಕೊಳ್ಳುವು ದಾದರೇ, ಅದು ಇಡೀ ಪೀಳಿಗೆಯನ್ನೇ ಹಾಳು ಮಾಡಿಬಿಡುತ್ತದೆ ಎಂದು ಹೇಳಿದರು.


ಎನ್‌ಇಎಸ್ ಶೈಕ್ಷಣಿಕ ಆಡಳಿತಾಧಿಕಾರಿ ಡಾ.ಎ. ಎನ್.ರಾಮಚಂದ್ರ ಮಾತನಾಡಿ, ಶಿಕ್ಷಕರ ಕಾರ್ಯಕ್ಷ ಮತೆ ನಿಜವಾಗಿಯೂ ತಿಳಿಯುವುದು ವಿದ್ಯಾರ್ಥಿಯ ಪರೀಕ್ಷಾ ಫಲಿತಾಂಶದ ಮೂಲಕ. ಪ್ರಶ್ನೆ ಕೇಳಲು ಹಿಂಜರಿಯುವ, ಭಾಗವಹಿಸಲು ಭಯಪಡುವ ವಿದ್ಯಾರ್ಥಿಗಳನ್ನು ಹೆಚ್ಚು ಕೇಂದ್ರೀಕರಿಸುವ ಅವಶ್ಯಕತೆಯಿದೆ. ಇದರಿಂದ ಮಾತ್ರ ಗುಣಾತ್ಮಕ ಫಲಿತಾಂಶ ಪಡೆಯಲು ಸಾಧ್ಯ ಎಂದು ಹೇಳಿದರು.
ಮುಖ್ಯ ಅತಿಥಿಗಳಾಗಿ ರಾಷ್ಟ್ರೀಯ ಶಿಕ್ಷಣ ಸಮಿತಿ ನಿರ್ದೇಶಕರಾದ ಎಂ.ಆರ್.ಸೀತಾಲಕ್ಷ್ಮೀ ಉಪಸ್ಥಿತರಿ ದ್ದರು. ರಾಷ್ಟ್ರೀಯ ಶಿಕ್ಷಣ ಮಹಾವಿದ್ಯಾಲಯದ ಪ್ರಾಂಶುಪಾಲರಾದ ಡಾ.ಎನ್.ಕೆ.ಚಿದಾನಂದ ಅಧ್ಯಕ್ಷತೆ ವಹಿಸಿದ್ದರು.

By admin

ನಿಮ್ಮದೊಂದು ಉತ್ತರ

error: Content is protected !!