ಶಿವಮೊಗ್ಗ: ಸ್ವಾಮಿ ವಿವೇಕಾನಂದ ಬಡಾವಣೆಯ ಏಳನೇ ಮುಖ್ಯರಸ್ತೆಯ ೬ನೇ ತಿರುವಿನ ‘ಸಿ’ ಬ್ಲಾಕ್‌ನಲ್ಲಿರುವ ಮಾತೃಛಾಯಾ ಸರ್ವಧರ್ಮದ ಅನಾಥಾಶ್ರಮಕ್ಕೆ ಕಳೆದ ೬ ತಿಂಗಳುಗಳಿಂದ ಕುಡಿಯುವ ನೀರಿನ ಸರಬರಾಜು ಮಾಡುತ್ತಿಲ್ಲ.

ಈ ಪ್ರದೇಶದಲ್ಲಿ ೨೪*೭ ನೀರಿನ ಸೌಲಭ್ಯವಿದ್ದರೂ ನೀರು ಬರುತ್ತಿಲ್ಲ ಎಂದು ಆಶ್ರಮದ ಸಂಚಾಲಕರು ನೀರು ಸರಬರಾಜು ಮಂಡಳಿಯ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸಂಸ್ಥೆಯ ಸಹನಾ ಜೆ. ರಾವ್ ಈ ಬಗ್ಗೆ ಮಾಧ್ಯಮಗಳಿಗೆ ಮಾಹಿತಿ ನೀಡಿ ನಮ್ಮ ಆಶ್ರಮದಲ್ಲಿ ಅನಾಥರು ವೃದ್ಧರು ಮಹಿಳೆಯರು ವಾಸವಾಗಿದ್ದು, ಹಲವಾರು ವರ್ಷಗಳಿಂದ ಸೇವೆ ಸಲ್ಲಿಸುತ್ತಾ ಬಂದಿದ್ದೇವೆ. ನಮ್ಮ ಆಶ್ರಮ ಇರುವ ಪ್ರದೇಶದಲ್ಲಿ ೬ ತಿಂಗಳಿಂದ ನೀರಿನ ಸಮಸ್ಯೆ ಇದೆ.

ಈ ಬಗ್ಗೆ ಸ್ಥಳೀಯ ಕಾರ್ಪೋರೇಟ್ ಲತಾ ಗಣೇಶ್, ಪಾಲಿಕೆ ಆಯುಕ್ತರು, ವಾಟರ್ ಬೋರ್ಡ್ ಅಧಿಕಾರಿಗಳು, ಹಿಂದಿನ ಶಾಸಕರು, ಜಿಲ್ಲಾಧಿಕಾರಿಗಳು ಎಲ್ಲರಿಗೂ ಹಲವಾರು ಬಾರಿ ದೂರು ನೀಡಿದ್ದೇವೆ. ಆದರೂ ಕೂಡ ಮೂಲಭೂತ ಸೌಲಭ್ಯವಾದ ಕುಡಿಯುವ ನೀರನ್ನು ಕೊಡಲು ಅಧಿಕಾರಿಗಳು ವಿಫಲರಾಗಿದ್ದಾರೆ.


ಕೂಡಲೇ ಮಹಾನಗರ ಪಾಲಿಕೆ ಮತ್ತು ನಗರ ನೀರು ಸರಬರಾಜು ಮಂಡಳಿ ಶಾಶ್ವತವಾದ ನೀರಿನ ವ್ಯವಸ್ಥೆ ಮಾಡಬೇಕೆಂದು ಅನಾಥಾಶ್ರಮದ ವತಿಯಿಂದ ಕೋರಲಾಗಿದೆ.

By admin

ನಿಮ್ಮದೊಂದು ಉತ್ತರ

error: Content is protected !!