ಶಿವಮೊಗ್ಗ: ಇಂದು ನಗರದ ಅಂಬೇಡ್ಕರ್ ವೃತ್ತ (ಜೈಲ್ ವೃತ್ತ)ದಲ್ಲಿರುವ ಕನ್ನಡ ಧ್ವಜ ಸ್ತಂಭವನ್ನು ಸ್ಮಾರ್ಟ್ ಸಿಟಿ ಅಧಿಕಾರಿಗಳು ಅಭಿವೃದ್ಧಿ ದೃಷ್ಟಿಯಿಂದ ತೆರವುಗೊಳಿಸುವ ಸಂದರ್ಭದಲ್ಲಿ ಕನ್ನಡ ಪರ ಸಂಘಟನೆಗಳು ಪ್ರತಿಭಟನೆ ನಡೆಸಿ, ಟೈರ್‌ಗೆ ಬೆಂಕಿ ಹಚ್ಚಿ ಧರಣಿ ಕುಳಿತ ಘಟನೆ ನಡೆಯಿತು.
ಜೈಲ್ ವೃತ್ತದಲ್ಲಿ ಸ್ಮಾರ್ಟ್ ಸಿಟಿ ಯೋಜನೆಯಡಿ ಸುಂದರವಾದ ಯೋಗಮುದ್ರೆಯ ಕಲಾಕೃತಿ ರಚಿಸಿ ಆ ಸ್ಥಳದಲ್ಲಿ ಹಸಿರು ವೃತ್ತವನ್ನು ನಿರ್ಮಿಸುವ ಉದ್ದೇಶದಿಂದ ಪಕ್ಕದಲ್ಲಿದ್ದ ಕನ್ನಡ ಧ್ವಜ ಸ್ತಂಭ ತೆರವುಗೊಳಿಸಿ ಸ್ಥಳಾಂತರಿಸಲು ಮುಂದಾದಾಗ ಈ ಘಟನೆ ನಡೆದಿದೆ.
ಸ್ಮಾರ್ಟ್ ಸಿಟಿ ಅಧಿಕಾರಿಗಳ ಪ್ರಕಾರ ಧ್ವಜ ಸ್ತಂಭಕ್ಕೆ ಪಕ್ಕದಲ್ಲೇ ವ್ಯವಸ್ಥೆ ಮಾಡಲಾಗಿದೆ.
ಈಗಾಗಲೇ ನಾಲ್ಕು ತಿಂಗಳ ಹಿಂದೆ ಜ್ವಾಲಾಮುಖಿ ಕನ್ನಡ ಸಂಘದ ಅಧ್ಯಕ್ಷರಾದ ಮೂರ್ತಿಯವರೊಂದಿಗೆ ಚರ್ಚಿಸಿ ಅವರಿಗೆ ವಿಷಯ ತಿಳಿಸಿ ಒಪ್ಪಿಗೆ ಪಡೆಯಲಾಗಿದೆ. ಧ್ವಜಸ್ತಂಭ ಉದ್ದವಿದ್ದು, ಅದನ್ನು ತಗ್ಗಿಸಿ ಪಕ್ಕದಲ್ಲೇ ಸುಂದರ ಕಟ್ಟೆಯನ್ನು ಮಾಢುವಂತೆ
ಅವರ ಕೋರಿಗೆ ಮೇರೆಗೆ ಸಿದ್ಧತೆಯನ್ನು ಮಾಡಲಾಗಿದೆ. ಯೋಗಮುದ್ರೆಯ ರಚನೆಯನ್ನು ಆ ಸ್ಥಳದಲ್ಲಿ ನಿರ್ಮಾಣ ಮಾಡಲು ತೀರ್ಮಾನಿಸಿದ್ದು,
ಇಂದು ಹಯ ಕನ್ನಡ ಧ್ವಜದ ಕಟ್ಟಯನ್ನು ಜೆಸಿಬಿಯಿಂದ ತೆರವುಗೊಳಿಸಲು ಅಧಿಕಾರಿಗಳು ಮಂದಾದಾಗ ಇನ್ನಿತರ ಸಂಘಟನೆಗಳು ಹಾಗೂ ಸ್ಥಳಿಯ ಪಾಲಿಕೆ ಸದಸ್ಯರಾದ ರೇಖಾ ರಂಗನಾಥ್ ನಮ್ಮ ಗಮನಕ್ಕೆ ತಾರದೆ ಏಕಾಏಕಿ ನೀವು ಕನ್ನಡ ಧ್ವಜ ಹಾರಾಡುತ್ತಿರುವಾಗಲೇ ಧ್ವಜ ಕಟ್ಟೆಯನ್ನು ಧ್ವಂಸಗೊಳಿಸಿದ್ದು ಸರಿಯಲ್ಲ ಎಂದು ಪ್ರತಿಭಟಿಸಿದರು.