: ಕೇಂದ್ರ ಮತ್ತು ರಾಜ್ಯ ಸರ್ಕಾರದ ಸಾಧನೆ ಹಿಂದಿನೆಲ್ಲಾ ಸರ್ಕಾರಗಳ ದಾಖಲೆಯನ್ನು ಮುರಿದಿದ್ದು ಸರ್ವಸ್ಪರ್ಶಿ ಮತ್ತು ಸರ್ವವ್ಯಾಪಿ ಜನಹಿತ ಆಡಳಿತ ಡಬಲ್ ಇಂಜಿನ್ ಸರ್ಕಾರ ನೀಡಿದೆ ಎಂದು ಶಾಸಕ ಎಚ್.ಹಾಲಪ್ಪ ಹರತಾಳು ತಿಳಿಸಿದರು.
ಇಲ್ಲಿನ ಸಾಗರ ಹೋಟೆಲ್ ವೃತ್ತದಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರದ ಸಾಧನೆಯನ್ನು ಪ್ರಚಾರ ಪಡಿಸುವ ಪ್ರಗತಿ ರಥಯಾತ್ರೆಗೆ ಶುಕ್ರವಾರ ಚಾಲನೆ ನೀಡಿ ಅವರು ಮಾತನಾಡುತ್ತಿದ್ದರು.
ವಿಶ್ವದಲ್ಲಿಯೆ ಭಾರತ ಮೋದಿಯವರ ನೇತೃತ್ವದಲ್ಲಿ ಬಲಾಢ್ಯ ಆರ್ಥಿಕ ದೇಶವಾಗಿ ಹೊರಹೊಮ್ಮಿದೆ. ದೇಶವು ಸರ್ವಾಂಗೀಣ ಪ್ರಗತಿಯನ್ನು ಸಾಧಿಸಿದೆ. ಪ್ರಪಂಚದ ಮೂರನೇ ಆರ್ಥಿಕ ಮುಂದುವರೆದ ದೇಶವಾಗುವ ಸಾಲಿನಲ್ಲಿ ಸದ್ಯ ಭಾರತವಿದೆ. ಪ್ರಗತಿಯನ್ನು ಜನರ ಮನೆಮನೆಗೆ ತಲುಪಿಸುವ ಕೆಲಸ ಮಾಡಬೇಕು. ಪ್ರತಿಯೊಬ್ಬರೂ ಅಭಿವೃದ್ದಿಯ ಪಾಲು ಪಡೆಯಬೇಕು ಎಂದರು.
ಅಭಿವೃದ್ದಿಯಲ್ಲಿ ಸಾಗರ ಸಹ ಮುಂಚೂಣಿ ಕಾಯ್ದುಕೊಂಡಿದೆ. ನಗರವನ್ನು ಸಂಪರ್ಕಿಸುವ ಎಲ್ಲ ರಸ್ತೆಗಳು ಚತುಷ್ಪಥ ರಸ್ತೆಯಾಗಿ ರೂಪುಗೊಳ್ಳುತ್ತಿದೆ. ಸುಮಾರು ೪೫೦ ಕೋಟಿ ರೂ. ವೆಚ್ಚದಲ್ಲಿ ತುಮರಿ ಸೇತುವೆ ನಿರ್ಮಾಣ ಕಾರ್ಯ ಭರದಿಂದ ಸಾಗುತ್ತಿದೆ. ೩೫ ಕೋಟಿ ರೂ. ವೆಚ್ಚದಲ್ಲಿ ನಗರೋತ್ಥಾನ ಯೋಜನೆಯಡಿ ನಗರವ್ಯಾಪ್ತಿಯಲ್ಲಿ ರಸ್ತೆ ಅಭಿವೃದ್ದಿಗೊಳ್ಳುತ್ತಿದೆ. ಅಭಿವೃದ್ದಿಯ ಭಾಗವಾಗಿ ಶಿವಮೊಗ್ಗದಲ್ಲಿ ವಿಮಾನ ನಿಲ್ದಾಣ ಪ್ರಾರಂಭವಾಗಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರ ಎಲ್ಲ ಕ್ಷೇತ್ರಗಳನ್ನೂ ಗಮನದಲ್ಲಿ ಇರಿಸಿಕೊಂಡು ಅಭಿವೃದ್ದಿಪಡಿಸುತ್ತಿದೆ ಎಂದು ಹೇಳಿದರು.
ಬಿಜೆಪಿ ನಗರ ಅಧ್ಯಕ್ಷ ಕೆ.ಆರ್.ಗಣೇಶಪ್ರಸಾದ್ ಅಧ್ಯಕ್ಷತೆ ವಹಿಸಿ ಮಾತನಾಡಿದರು. ನಗರಸಭೆ ಅಧ್ಯಕ್ಷೆ ಮಧುರಾ ಶಿವಾನಂದ್, ಉಪಾಧ್ಯಕ್ಷ ವಿ.ಮಹೇಶ್, ಸ್ಥಾಯಿ ಸಮಿತಿ ಅಧ್ಯಕ್ಷ ಅರವಿಂದ ರಾಯ್ಕರ್, ಪ್ರಮುಖರಾದ ಶ್ರೀನಿವಾಸ್ ಮೇಸ್ತ್ರಿ, ಭಾವನಾ ಸಂತೋಷ್, ಮೈತ್ರಿ ಪಟೇಲ್, ಸವಿತಾ ವಾಸು, ಪ್ರಮುಖರಾದ ನಾಗರಾಜ್ ಪೈ, ಅರುಣ್ ಕುಗ್ವೆ, ಎಂ.ಆರ್.ಮಹೇಶ್, ರಾಜಣ್ಣ, ಜಾಹ್ನವಿ, ಸಂತೋಷ್ ಶೇಟ್, ಸತೀಶ್ ಕೆ., ಸರೋಜಮ್ಮ, ವಿನೋದ್ ರಾಜ್, ಆನಂದ್ ಜನ್ನೆಹಕ್ಲು, ಸುಧಾ ಉದಯ್ ಇನ್ನಿತರರು ಹಾಜರಿದ್ದರು