ಶಿವಮೊಗ್ಗ ಮಹಾನಗರ ಪಾಲಿಕೆಯು ಸೆ. ೨೪ ಮತ್ತು ೨೭ ರಂದು ಅಡುಗೆ ಸ್ಪರ್ಧೆ ಮತ್ತು ತಿನ್ನುವ ಸ್ಪರ್ಧೆ ಹಾಗೂ ಸೆ. ೨೬ ರಿಂದ ಅ.೦೫ ರವರೆಗೆ ಆಹಾರ ಮೇಳವನ್ನು ಆಯೋಜಿಸಲಾಗಿದ್ದು, ಆಸಕ್ತರಿಂದ ಅರ್ಜಿ ಆಹ್ವಾನಿಸಿದೆ.


ಸೆ: ೨೪ ರಂದು ನಗರದ ಶ್ರೀ ನಿಜಲಿಂಗಪ್ಪ ಸಮುದಾಯ ಭವನದಲ್ಲಿ ಮ ೨ ರಿಂದ ೩ ರವರೆಗೆ ಅತ್ತೆ ಸೊಸೆಯರಿಗೆ ಅಡುಗೆ ಮಾಡುವ ಸ್ಪರ್ಧೆ ಹಾಗೂ ಸಂಜೆ ೦೪ ರಿಂದ ೦೫ರವರೆಗೆ ಪದವಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿನಿಯರಿಗೆ ಅಡುಗೆ ಮಾಡುವ ಸ್ಪರ್ಧೆಯನ್ನು ಏರ್ಪಡಿಸಲಾಗಿದೆ.


ದಿ: ೨೭/೦೯/೨೦೨೨ ರಂದು ನಗರದ ಗಾಂಧಿ ಬಜಾರ್ ಶಿವಪ್ಪ ನಾಯಕ ವೃತ್ತದಲ್ಲಿ ಬೆಳಗ್ಗೆ ೧೦.೩೦ಕ್ಕೆ ಮಹಿಳಾ ಶಿಕ್ಷಕಿಯರಿಗೆ ಒಂದು ನಿಮಿಷದಲ್ಲಿ ಸೇಬುಹಣ್ಣು ತಿನ್ನುವ ಸ್ಪರ್ಧೆ ಹಾಗೂ ಮ. ೧೨.೦೦ಕ್ಕೆ ಪುರುಷರು ಮತ್ತು ಮಹಿಳೆಯರಿಗೆ ಒಂದು ನಿಮಿಷದಲ್ಲಿ ಮುದ್ದೆ, ಬಸ್ಸಾರು ತಿನ್ನು ಸ್ಪರ್ಧೆಯನ್ನು ಏರ್ಪಡಿಸಲಾಗಿದೆ.


ದಿ: ೨೬/೦೯/೨೦೨೨ರಿಂದ ದಿ: ೦೫/೧೦/೨೦೨೨ರ ವರೆಗೆ ವಿನೋಬನಗರದ ಫ್ರೀಡಂ ಪಾರ್ಕ್‌ನಲ್ಲಿ ವಿವಿಧ ಸ್ತ್ರೀಶಕ್ತಿ ಸಂಘಗಳ ಸಹಯೋಗದಲ್ಲಿ ೩೦ ಸ್ಟಾಲ್‌ಗಳಲ್ಲಿ ಸಂಪ್ರದಾಯಿಕ ವಿವಿಧ ರೀತಿಯ ವಿಶಿಷ್ಟ ಅಡುಗೆಗಳ ತಯಾರಿಕೆ ಮತ್ತು ತಿನಿಸು ಅಂಗಳಗಳ ಆಹಾರ ಮೇಳವನ್ನು ಆಯೋಜಿಸಲಾಗಿದೆ.


ಈ ಎಲ್ಲಾ ಸ್ಪರ್ಧೆ ಮತ್ತು ಆಹಾರ ಮೇಳಕ್ಕೆ ಭಾಗವಹಿಸಲು ಇಚ್ಛಿಸುವವರು ಮೊ. ನಂ.: ೯೯೦೨೬೭೬೨೭೧ ಮತ್ತು ೭೭೯೫೭೭೩೯೬೨ ನ್ನು ಸಂಪರ್ಕಿಸಿ ನೋಂದಣಿ ಮಾಡಿಕೊಳ್ಳುವಂತೆ ಪಾಲಿಕೆ ಆಹಾರ ದಸರಾ ಸಮಿತಿ ಅಧ್ಯಕ್ಷರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

By admin

ನಿಮ್ಮದೊಂದು ಉತ್ತರ

error: Content is protected !!