ಶಿವಮೊಗ್ಗ,
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹೆಚ್.ಎಸ್. ಸುಂದರೇಶ್ ಅವರ ಹುಟ್ಟುಹಬ್ಬದ ಅಂಗವಾಗಿ ನಗರದ ಪ್ರತಿಷ್ಠಿತ ಆಸ್ಪತ್ರೆಗಳ ವೈದ್ಯರ ತಂಡದಿಂದ ಸೆ. ೧೭ ರಂದು ಬೆಳಗ್ಗೆ ೯ ಗಂಟೆಯಿಂದ ಸಂಜೆ ೪ ರವರೆಗೆ ಕುವೆಂಪು ರಸ್ತೆಯ ಆದಿಚುಂಚನಗಿರಿ ಶಾಲೆಯಲ್ಲಿ ಬೃಹತ್ ಉಚಿತ ಆರೋಗ್ಯ ಶಿಬಿರ ಆರೋಜಿಸಲಾಗಿದೆ ಎಂದು ಜಿಲ್ಲಾ ಕಾಂಗ್ರೆಸ್ ವಕ್ತಾರ ರಮೇಶ್ ಶಂಕರಘಟ್ಟ ತಿಳಿಸಿದ್ದಾರೆ.
ಉಚಿತ ಆರೋಗ್ಯ ಶಿಬಿರದಲ್ಲಿ ರಕ್ತಾದನ ಶಿಬಿರ, ಹೃದಯ ತಪಾಸಣೆ, ಕಣ್ಣಿನ ತಪಾಸಣೆ, ಮೂತ್ರಪಿಂಡ, ದಂತ, ಮೂಳೆ, ಚರ್ಮ, ಸ್ತ್ರೀ ರೋಗ, ಬಿಪಿ, ಮಧುಮೇಹ ಮುಂತಾದ ಕಾಯಿಲೆಗಳ ತಪಾಸಣೆ, ಇಸಿಜಿ, ಎಕೋ ಪರೀಕ್ಷೆ ಮಾಡಲಾಗುವುದು.
ಇದಲ್ಲದೇ, ಆಸ್ಪತ್ರೆಗಳಲ್ಲಿ ಔಷಧದ ಮೇಲೆ ಶೇ. ೨೫ ರಷ್ಟು, ವಿವಿಧ ಪರೀಕ್ಷೆಗಳಿಗೆ ಶೇ. ೬೦ ರಷ್ಟು ರಿಯಾಯಿತಿ ನೀಡಲಾಗುವುದು. ವೆಂಟಿಲೇಟರ್ ಗೆ ೧೫೦೦ ರೂ. ನಿಂದ ೨೦೦೦ ರೂ. ಒಳಗೆ ನೀಡಲಿದ್ದು, ಸಾರ್ವಜನಿಕರು ಇದರ ಪ್ರಯೋಜನ ಪಡೆಯಬೇಕೆಂದು ಅವರು ತಿಳಿಸಿದ್ದಾರೆ.