ಶಿವಮೊಗ್ಗ,
ವೀರಶೈವ ಲಿಂಗಾಯತ ಸಂಘಟನೆ ವೇದಿಕೆ ವತಿಯಿಂದ ಸೆ.೫ ರಂದು ವೀರಭ ದ್ರೇಶ್ವರ ಜಯಂತೋತ್ಸವ-೨೦೨೨ವನ್ನು ಅತ್ಯಂತ ಸಂಭ್ರಮದಿಂದ ಆಯೋಜಿಸಲಾ ಗಿದೆ ಎಂದು ವೇದಿಕೆಯ ಕೋಶಾಧ್ಯಕ್ಷ ಎಸ್.ಎಸ್.ಜ್ಯೋತಿ ಪ್ರಕಾಶ್ ಹೇಳಿದರು.
ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ವೀರಶೈವ ಸಮಾಜದವರು ಮತ್ತು ವಿವಿಧ ವೇದಿಕೆಗಳ ಸಂಯುಕ್ತಾಶ್ರ ಯದಲ್ಲಿ ಚೌಕಿ ಮಠದ ಶ್ರೀ ವೀರಭದ್ರೇಶ್ವರ ದೇವಸ್ಥಾನದ ಆವರಣದಲ್ಲಿ ಈ ಜಯಂತೋತ್ಸವ ಬೆಳಿಗ್ಗಿ ನಿಂದ ಸಂಜೆಯವರೆಗೆ ನಡೆಯುತ್ತದೆ. ಇದರ ಅಂಗವಾಗಿ ಬೆಳಿಗ್ಗೆ ೮ಕ್ಕೆ ಇಷ್ಟಲಿಂಗ ಪೂಜೆ, ೧೧.೩೦ಕ್ಕೆ ಧರ್ಮಸಭೆ ಇದರ ಜೊತೆಗೆ ಉಚಿತ ಆರೋಗ್ಯ ತಪಾಸಣಾ ಶಿಬಿರ ನಡೆಯಲಿದೆ ಎಂದರು.
ಧರ್ಮಸಭೆಯ ಕಾರ್ಯಕ್ರಮದಲ್ಲಿ ಬಾಳೆಹೊನ್ನೂರಿನ ರಂಭಾಪುರಿ ಶ್ರೀಗಳಾದ ಡಾ. ವೀರಸೋಮೇಶ್ವರ ರಾಜ ದೇಶೀ ಕೇಂದ್ರ ಶಿವಾಚಾರ್ಯ ಸ್ವಾಮೀಜಿಗಳು, ಮಳಲಿ ಮಠದ ಡಾ. ಗುರುನಾಗಭೂಷಣ ಶಿವಾಚಾರ್ಯ ಸ್ವಾಮೀಜಿಗಳು, ಜಡೆ ಮಠದ ಮಹಂತ ಸ್ವಾಮಿಗಳು, ತೋಗರ್ಸಿಯ ಚನ್ನವೀರ ದೇಶೀ ಕೇಂದ್ರ ಸ್ವಾಮೀಗಳು ಭಾಗವಹಿಸಲಿದ್ದಾರೆ ಎಂದರು.
ಕಾರ್ಯಕ್ರಮವನ್ನು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಉದ್ಘಾಟಿಸುವರು. ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ರಾಷ್ಟ್ರೀಯ ಅಧ್ಯಕ್ಷ ಶಾಮನೂರು ಶಿವಶಂಕರಪ್ಪ ಅಧ್ಯಕ್ಷತೆ ವಹಿಸಲಿರುವ ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಸಂಸದ ಬಿ.ವೈ.ರಾಘವೇಂದ್ರ, ಶಾಸಕರುಗಳಾದ ಎಸ್.ರುದ್ರೇಗೌಡ, ಆಯನೂರು ಮಂಜುನಾಥ್, ಮಾಜಿ ಶಾಸಕ ಹೆಚ್.ಎಂ.ಚಂದ್ರಶೇಖರಪ್ಪ, ಪ್ರಮುಖರಾದ ಪ್ರದೀಪ್ ಕಂಕಣವಾಡಿ, ಬಿ.ವೈ.ಅರುಣಾದೇವಿ ಸೇರಿದಂತೆ ಹಲವರು ಭಾಗವಹಿಸಲಿದ್ದಾರೆ ಎಂದರು.
ಉಚಿತ ಆರೋಗ್ಯ ಶಿಬಿರ ಸಹ ಅಂದು ನಡೆಯಲಿದ್ದು, ಡಾ.ಧನಂಜಯ ಸರ್ಜಿ ಸೇರಿದಂತೆ ೧೫ ವೈದ್ಯರ ತಂಡ ಭಾಗವಹಿಸಲಿದೆ. ವೀರಶೈವ ಸಮಾಜದ ಎಲ್ಲಾ ವಿವಿಧ ಸಹ ಸಘಟನೆಗಳು ಇದಕ್ಕೆ ಕೈ ಜೋಡಿಸಲಿವೆ. ಅಲ್ಲದೆ ವೀರಶೈವ ಸಮಾಜದ ಜನರಲ್ಲದೆ ಇತರೆ ಸಮಾಜದ ಮುಖಂಡರು ಕೂಡ ಭಾಗವಹಿಸಲಿದ್ದಾರೆ. ಶಾಸಕ ಕೆ.ಎಸ್.ಈಶ್ವರಪ್ಪ ಸೇರಿದಂತೆ ಹಲವು ಗಣ್ಯರನ್ನು ಆಮಂತ್ರಿಸಲಾಗಿದೆ ಎಂದರು.
ವಕ್ತಾರ ಕೆ.ಆರ್. ಸೋಮನಾಥ್ ಮಾತನಾಡಿ, ವೀರಶೈವ ಸಂಘಟನೆಯ ವೇದಿಕೆಯು ಪ್ರಥಮ ಬಾರಿಗೆ ಶ್ರೀ ವೀರಭದ್ರೇಶ್ವರ ಜಯಂತ್ರೋತ್ಸವವನ್ನು ಹಮ್ಮಿಕೊಂಡಿದ್ದು, ಕಾರ್ಯಕ್ರಮದಲ್ಲಿ ಸಾವಿರಾರೂ ಜನರು ಭಾಗವಹಿಸಲಿದ್ದಾರೆ. ವಾಹನಗಳ ನಿಲುಗಡೆಗಾಗಿ ಎನ್‌ಡಿವಿ ಹಾಸ್ಟಲ್ ಆವರಣವನ್ನು ನಿಗದಿಪಡಿಸಲಾಗಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ವೇದಿಕೆಯ ಅಧ್ಯಕ್ಷ ಸಿ.ಪಿ.ಈರೇಶ್‌ಗೌಡ, ಪದಾಧಿಕಾರಿಗಳಾದ ಬಂದುಕುಮಾರ್, ಶಿವರಾಜ್, ಉಮೇಶ್ ಹಿರೇಮಠ, ಕೆ.ಬಿ.ಉಮೇಶ್, ಧನರಾಜ್, ಗಂಗಾಧರ್ ಮತ್ತಿತರರು ಇದ್ದರು.