ಶಿವಮೊಗ್ಗ,
ಕ.ರಾ.ರ.ಸಾ.ನಿಗಮದಿಂದ ವಿತರಿಸಲಾಗುತ್ತಿರುವ ರಿಯಾಯಿತಿ ಪಾಸ್ ಆಧಾರಿತ ಪ್ರಯಾಣದ ಅವಧಿಯನ್ನು ಆ:-೨೨ ರಿಂದ ಅ:-೨೨ ರ ಅಂತ್ಯದವರೆಗೆ ವಿಸ್ತರಿಸಲಾಗಿದ್ದು, ವಿದ್ಯಾರ್ಥಿಗಳಿಂದ

ನಿಗಧಿತ ಮೊತ್ತವನ್ನು ಪಡೆದುಕೊಂಡು ರಶೀದಿ ನೀಡಿ ವಿದ್ಯಾರ್ಥಿಗಳು ರಶೀದಿ ಮತ್ತು ಹಳೆಯ ಪಾಸ್ ಎರಡನ್ನು ತೋರಿಸಿ ಅಕ್ಟೋಬರ್-೨೨ರ ವರೆಗೆ ಪ್ರಯಾಣಿಸಲು ಅವಕಾಸ ನೀಡಲಾಗಿದೆ.

ಇನ್ನುಳಿದ ಇತರೆ ತರಗತಿ/ಸೆಮಿಸ್ಟರ್ನ ವಿದ್ಯಾರ್ಥಿಗಳು ಸೇವಾ ಸಿಂಧು ಪೊರ್ಟಲ್ನಲ್ಲಿ ಅರ್ಜಿ ಸಲ್ಲಿಸಿ ಹೊಸ ಪಾಸ್ಗಳನ್ನು ಶಿವ ಮೊಗ್ಗ ವಿಭಾಗದ ಬಸ್ ನಿಲ್ದಾಣಗಳ ಬಸ್ಪಾಸ್ ವಿತರಣಾ ಕೌಂಟರ್ಗಳಲ್ಲಿ ಪಡೆಯಬಹುದಾಗಿದೆ ಎಂದು ವಿಭಾಗೀಯ ನಿಯಂತ್ರಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.