ಶಿವಮೊಗ್ಗ,ಆ.31:
ವಿಶ್ವ ಸಂಸ್ಥೆಯ ಅಂತರ್ ರಾಷ್ಟ್ರೀಯ ನಾಗರೀಕ ಸೇವೆಗೆ ಆಯ್ಕೆಯಾದ ಸಂಜನಾ ಮಹಳತ್ಕರ್ ಅವರಿಗೆ ಭಾವಸಾರ ಕ್ಷತ್ರಿಯ ಮಹಜನ ಸಮಾಜದ ವತಿಯಿಂದ ಸನ್ಮಾನಿಸಿ ಗೌರವಿಸಿತು.
ಇಲ್ಲಿನ ಶ್ರೀ ಪಾಂಡುರಂಗ ದೇವಾಲಯದಲ್ಲಿ, ಹಮ್ಮಿಕೊಳ್ಳಲಾಗಿದ್ದ ಸರಳ ಕಾರ್ಯಕ್ರಮದಲ್ಲಿ ಈ ಸನ್ಮಾ ಸಮಾರಂಭ ನಡೆಯಿತು.
ಸನ್ಮಾನಿಸಿದ ಸಮಾಜದ ಅಧ್ಯಕ್ಷ ಓಂ ಪ್ರಕಾಶ್ ತೇಲ್ಕರ್ ಇತ್ತೀಚಿನ ದಿನಗಳಲ್ಲಿ, ಭಾವಸಾರ ಕ್ಷತ್ರಿಯ ಸಮುದಾಯದ ಯುವ ಪೀಳಿಗೆಯು ಉನ್ನತ ಮಟ್ಟದ ಸಾಧನೆ ತೋರುತ್ತಿದ್ದು, ಅಂತರ ರಾಷ್ಟ್ರೀಯ ಮಟ್ಟದಲ್ಲಿ ತಮ್ಮ ಸಾಮರ್ಥ್ಯದಿಂದ ಸಾಧನೆ ಮಾಡುತ್ತಿರುವುದು ಪ್ರಶಂಸನೀಯ ಎಂದು ಅಭಿನಂಧಿಸಿದರು.

ಭಾವಸಾರ ಕ್ಷತ್ರಿಯ ಮಹಜನ ಸಮಾಜದ ವತಿಯಿಂದ ಸನ್ಮಾನ


ಇತ್ತೀಚಿಗೆ ರಷ್ಯಾದಿಂದ ಭಾರತಕ್ಕೆ ತರಲಾದಂತಹ ರಫೇಲ್ ಯುದ್ಧ ವಿಮಾನದ ಪೈಲಟ್ ಗಳಲ್ಲಿ, ಬಿಜಾಪುರ ಜಿಲ್ಲೆಯ ಭಾವಸಾರ ಕ್ಷತ್ರಿಯ ಸಮುದಾಯದವರೇ ಆಗಿರುವುದು ನಮಗೆಲ್ಲಾ ಗೌರವದ ವಿಚಾರವಾಗಿದೆ. ಇದೇ ರೀತಿ ಯುವ ಜನರು ಓದಿನತ್ತ ಹೆಚ್ಚು ಗಮನಹರಿಸಬೇಕು. ಅಲ್ಲದೇ, ಪ್ರಸ್ತುತ ಪ್ರಪಂಚ ತಂತ್ರಜ್ಞಾನ ಕ್ಷೇತ್ರದಲ್ಲಿ ಅದ್ವಿತಿಯ ಸಾಧನೆ ಮಾಡಿದ್ದು, ಇದೇ ಹಾದಿಯಲ್ಲಿ ಸಂಜನಾ ಮಹಳತ್ಕರ್ ಅವರು ಕೂಡ ತಂತ್ರಜ್ಞಾನ ವಿಚಾರದಲ್ಲಿ, ದೂರದ ಆಸ್ಟ್ರೀಯಾದಲ್ಲಿನ ಕರ್ತವ್ಯ ನಿರ್ವಹಿಸಲು ತೆರಳುತ್ತಿದ್ದಾರೆ. ಇದು ಇಡೀ ಭಾವಸಾರ ಸಮಾಜಕ್ಕೆ ಹೆಮ್ಮೆಯ ವಿಷಯ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ, ಅಂತರರಾಷ್ಟ್ರೀಯ ನಾಗರೀಕ ಸೇವೆಗೆ ಆಯ್ಕೆಯಾದ ಸಂಜನಾ ಮಹಳತ್ಕರ್ ಮಾತನಾಡಿ ನಾನು ಮತ್ತು ನನ್ನ ಸಹೋದರ ಪ್ರಾಥಮಿಕ ಹಂತದಿಂದಲೂ ಉತ್ತಮ ಶ್ರೇಣಿಯಲ್ಲಿಯೇ ಸರ್ಕಾರಿ ಶಾಲೆಯಲ್ಲಿ ವಿದ್ಯಾಭ್ಯಾಸವನ್ನು ಮಾಡಿದ್ದು, ಇದಕ್ಕೆ ನಮ್ಮ ಪೋಷಕರು ಬೆನ್ನೆಲುಬಾಗಿ ಪ್ರೋತ್ಸಾಹಿಸಿದ್ದಾರೆ. ನನ್ನಂತಹ ಹಲವಾರು ಪ್ರತಿಭೆಗಳು ಸಮಾಜದಲ್ಲಿದ್ದು, ಅಂತವರಿಗೆ ಗುರುತಿಸಿ ಪ್ರೋತ್ಸಾಹಿಸಿ ಎಂದು ಮನವಿ ಮಾಡಿದರು. ನಾನು ಕಠಿಣ ಪರಿಶ್ರಮದಿಂದ, ಅಂತರ್ ರಾಷ್ಟ್ರೀಯ ನಾಗರೀಕ ಸೇವೆಗೆ ಆಯ್ಕೆಯಾಗಿದ್ದು, ಮುಂದಿನ ತಿಂಗಳು ನನ್ನ ಕರ್ತವ್ಯಕ್ಕೆ ತೆರಳುತ್ತಿದ್ದೆನೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ, ಭಾವಸಾರ ಕ್ಷತ್ರೀಯ ಮಹಜನ ಸಮಾಜದ ಉಪಾಧ್ಯಕ್ಷ ಗಜೇಂದ್ರನಾಥ್ ಮಾಳೋದೆ ಸ್ವಾಗತಿಸಿದರು. ಸಮಾಜದ ಪ್ರಧಾನ ಕಾರ್ಯದರ್ಶಿ ಸಂತೋಷ್ ಸಾಕ್ರೆ ವಂದಿಸಿದರು. ಈ ವೇಳೆ, ಖಜಾಂಚಿ ಗಿರೀಶ್ ಎನ್ ಎಸ್, ನಿರ್ದೇಶಕರಾದ ಎಂ ಆರ್ ವೆಂಕಟೇಶ್, ನವೀನ್ ಸಾಕ್ರೆ, ಗೋ.ವ. ಮೋಹನಕೃಷ್ಣ, ನಟರಾಜ್ ಡಿ.ಆರ್, ರಾಜ್ ಬಾಬು ಮಹಳತ್ಕರ್, ಸತೀಶ್ ಬಾಬು ಹಾಗೂ ಬಿವಿಐ ಗವರ್ನರ್ ಸಚಿನ್ ಸಾಕ್ರೆ, ಎಐಬಿಕೆ ಯುವ ಪರಿಷತ್ ಪ್ರಚಾರ ಸಮಿತಿ ಆಧ್ಯಕ್ಷ ವಿನಯ್ ಡೋಯಿಜೋಡೆ ಮತ್ತು ತರೀಕೆರೆ ಸಮಾಜದ ಶಂಕರಮೂರ್ತಿ ಮಹೇಂದ್ರಕರ್ ಸೇರಿದಂತೆ ಹಲವರಿದ್ದರು.

By admin

ನಿಮ್ಮದೊಂದು ಉತ್ತರ

error: Content is protected !!