ಶಿವಮೊಗ್ಗ,
ಶಿವಮೊಗ್ಗ ಗ್ರಾಮಾಂತರ ಶಾಸಕ ಕೆ.ಬಿ ಅಶೋಕ ನಾಯ್ಕ ರವರು ಶಿವಮೊಗ್ಗ ಗ್ರಾಮಾಂತರದ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಕುಂಚೇನಹಳ್ಳಿ ಗ್ರಾಮದಲ್ಲಿ ಮಳೆಯಿಂದ ಕೆರೆ ಕೊಡಿಹೊಡೆದು ಹಾನಿಗೊಳಗಾದ
ಸುತ್ತ ಮುತ್ತಲಿನ ಪ್ರದೇಶಗಳಿಗೆ ಅಧಿಕಾರಿಗಳೊಂದಿಗೆ ಮನೆಗಳನ್ನು ಭೇಟಿ ನೀಡಿ ವೀಕ್ಷಿಸಿ ಸೂಕ್ತ ವ್ಯವಸ್ಥೆ ಕೈಗೊಂಡು ಅಲ್ಲಿನ ನಾಳೆ ನಾಡಿದ್ದು ಮಳೆ ಹೆಚ್ಚುವ ಸಂಭವವಿದ್ದು ಇದರ ಬಗ್ಗೆ ಹೆಚ್ಚರ ವಹಿಸಿ ಯಾವುದೇ ರೀತಿಯ ಅನಾಹುತ ಅಗದಂತೆ ಮುನ್ನೆಚ್ಚರಿಕ ಕ್ರಮ ವಹಿಸುಂತೆ ತಿಳಿಸಿದರು.
ಈ ಸಂದರ್ಭದಲ್ಲಿ ಮಹಾಶಕ್ತಿ ಕೇಂದ್ರ ಅಧ್ಯಕ್ಷ ರಮೇಶ್, ಮುಖಂಡರಾದ ಭೋಜ್ಯಾನಾಯ್ಕ, ಶಿವಾಜಿ ನಾಯ್ಕ, ವಾಸುದೇವ ನಾಯ್ಕ, ಹಂಚಿ ನಾಯ್ಕ, ಲೋಕಾನಾಯ್ಕ,
ಸಣ್ಣ ನೀರಾವರಿ ಇಲಾಖೆ ಸಹಾಯಕ ಅಭಿಯಂತರ ಮಂಜು ನಾಥ್, ಪೋಲಿಸ್ ವೃತ್ತ ನೀರಿಕ್ಷಕ ಸಂಜೀವ್ ಕುಮಾರ್, ಕಂದಾಯ ಇಲಾಖೆ ಅಧಿಕಾರಿಗಳು,ಹಾಗೂ ಪ್ರಮುಖರು ಉಪಸ್ಥಿತರಿದ್ದರು.