ಶಿವಮೊಗ್ಗ, ಜು.24:
ಕೊಲೆಗಡುಕರ ಜಿಲ್ಲೆ ಎಂದು ನಮ್ಮ ಜಿಲ್ಲೆಯ ಮಾನ ಮರ್ಯಾದೆ ಹರಾಜು ಮಾಡಿದ ಮಾಜಿ ಶಾಸಕ ಬೇಳೂರು ಗೋಪಾಲಕೃಷ್ಣ ಅವರ ಹೇಳಿಕೆಗೆ ಸಾರ್ವಜನಿಕರ ಪರವಾಗಿ ಶಿವಮೊಗ್ಗ ವಿನೋಬನಗರದ ಸುಭ್ರಮಣ್ಯ ಹಾಗೂ ಗಾಂಧಿಬಜಾರ್ ನ ವಿಜಯೇಂದ್ರ ಅವರು ತೀವ್ರ ಖಂಡನೆ ವ್ಯಕ್ತಪಡಿಸಿದ್ದಾರೆ.

ಡೀ ರಾಜ್ಯದಲ್ಲಿ ಅತ್ಯಂತ ಮಹತ್ವದ ಸ್ಥಾನ ಪಡೆದಿರುವ ಶಿವಮೊಗ್ಗ ಜಿಲ್ಲೆ ಸಾಹಿತ್ಯ, ಸಂಸ್ಕೃತಿ, ಕಲೆ, ಪ್ರವಾಸೋದ್ಯಮ, ವ್ಯವಸಾಯ ಕ್ಷೇತ್ರ ಸೇರಿದಂತೆ ಎಲ್ಲಾ ರಂಗಗಳಲ್ಲಿ ತನ್ನದೇ ಛಾಪು ಮೂಡಿಸಿದೆ. ಈ ತಿಳುವಳಿಕೆ ಇಲ್ಲದ ಮಾಜಿ ಶಾಸಕರು ತಮ್ಮ ರಾಜಕೀಯ ಬೇಳೆಕಾಳು ಬೇಯಿಸಿ ಕೊಳ್ಳಲು ಇಡೀ ಜಿಲ್ಲೆಯ ವ್ಯಕ್ತಿತ್ವಕ್ಕೆ ದಕ್ಕೆ ತರುವಂತೆ ಮಾತನಾಡಿದ್ದಾರೆ ಎಂದು ಆಕ್ಷೇಪಿಸಿದ್ದಾರೆ.
ನಾವು ರಾಜಕೀಯ ಪಕ್ಷಗಳ ಏಜೆಂಟರೇನಲ್ಲ. ಶಿವಮೊಗ್ಗ ಜಿಲ್ಲೆಯಲ್ಲಿ ಪ್ರಭಲವಾಗಿ ಶಾಂತಿ ಹಾಗೂ ಸುವ್ಯವಸ್ಥೆ ಕಾಪಾಡುವ ಎಸ್ಪಿ, ಡಿವೈಎಸ್ಪಿ ಅವರುಗಳ ಬಲಿಷ್ಟ ತಂಡ ನಮಗೆ ನೆಮ್ಮದಿ ಬದುಕನ್ನು ಕಟ್ಟಿಕೊಟ್ಟಿದೆ. ಏಕಾಏಕೀ ಕೊಲೆಗಡುಕರ ಜಿಲ್ಲೆ ಎಂದರೆ ಹೇಗೆ? ಕೊಲೆ ಎಂಬ ಪದ ಶ್ರೀ ಸಾಮಾನ್ಯರಾದ ನಮಗೆ ಅನಗತ್ಯ ಅಂಶ. ಅಂತಹುದರಲ್ಲಿ ಇಂತಹ ಮಾತು ಅವರ ಸ್ವಾರ್ಥಕ್ಕೆ ಬಳಸಿಕೊಂಡಿದ್ದಾರೆ ಎಂದಿದ್ದಾರೆ.


ಶಿವಮೊಗ್ಗ ಜಿಲ್ಲೆ ಕನ್ನಡ ಭಾಷೆಯ ಜೊತೆ ಸಂಸ್ಕೃತಿ ಸಾರುವ ಸಂಸ್ಕೃತದೊಂದಿಗೆ ಅನ್ಯ ಭಾಷೆಗಳನ್ನೂ ಪ್ರೀತಿಸುವ ಜನರನ್ನು ಹೊಂದಿದೆ. ಇಲ್ಲಿರುವ ಸೊಬಗಿನ, ಪ್ರಕೃತಿ ಪರಿಸರದ ಪ್ರವಾಸಿ ತಾಣಗಳು ದೇಶ ವಿದೇಶದಲ್ಲಿ ಮಾನ್ಯತೆ ಪಡೆದಿವೆ. ಇಲ್ಲಿ ಇಂತಹ ಹೇಳಿಕೆ ನೀಡಿದರೆ ಹೊರಗಿನವರು ಹೇಗೆ ತಾನೇ ಶಿವಮೊಗ್ಗ ಜಿಲ್ಲೆಯನ್ನು ಇಷ್ಟಪಡುತ್ತಾರೆ. ಇಲ್ಲಿಗೆ ಬಂದು ಹೋಗುತ್ತಾರೆ ಎಂದು ಪ್ರಶ್ನಿಸಿದ್ದಾರೆ.
ಮಾಜಿ ಶಾಸಕರು ತಮ್ಮ ವೈಯುಕ್ತಿಕ ರಾಜಕಾರಣಕ್ಕೆ ಮಾತನಾಡುವುದಿದ್ದರೆ ಅವರ ಪರ್ಸನಲ್ ವಿಚಾರ ಮಾತನಾಡಬೇಕಿತ್ತು. ಇಡೀ ಜಿಲ್ಲೆಗೆ ಕಳಂಕ ತರುವಂತಹ ಮಾತನಾಡಬಾರದಿತ್ತು. ಅವರು ಹೇಳಿಕೆಯನ್ನು ವಾಪಾಸ್ ಪಡೆದು ಜಿಲ್ಲೆಯ ಜನರ ಕ್ಷಮೆ ಕೇಳಬೇಕು ಇಲ್ಲದಿರೆ ಅವರನ್ನು ನಮ್ಮ ಜಿಲ್ಲೆಯಿಂದ ಗಡಿಪಾರು ಮಾಡುವಂತೆ ಈ ಮೂಲಕ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ರಕ್ಷಷಾಧಿಕಾರಿಗಳಿಗೆ ಸಾರ್ವಜನಿಕರ ಪರವಾಗಿ ಒತ್ತಾಯಿಸಿದ್ದಾರೆ.

By admin

ನಿಮ್ಮದೊಂದು ಉತ್ತರ

error: Content is protected !!