ಶಿವಮೊಗ್ಗ :

ನಿನ್ನೆ ಸಂಜೆ ಸೃಷ್ಟಿಯಾಗಿದ್ದ  ಕತ್ತಲ ಸಾಮ್ರಾಜ್ಯಕ್ಕೆ ಕಾರಣವೇನು?.  ಕಳೆದ ಒಂದೂವರೆ ಗಂಟೆಯಿಂದ ಶಿವಮೊಗ್ಗ ಹಾಗೂ ಭದ್ರಾವತಿ ನಗರದ ಅರ್ಧಕ್ಕೆ ಅರ್ಧ ಬಡಾವಣೆಗಳಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ.

ಶಿವಮೊಗ್ಗದ  ಸೋಮಿನಕೊಪ್ಪ, ಗೋಪಾಳ, ಗುಂಡಪ್ಪ ಶೆಡ್, ಇಲಿಯಾಜ್ ನಗರ ಆರ್ ಎಂಎಲ್ ನಗರ ಸೇರಿದಂತೆ ಅರ್ಧಕ್ಕೆ ಅರ್ಧ ಲೋಡ್ ಶೆಡ್ಡಿಂಗ್ ಆಗಿದ್ದು ಅರ್ಧಕ್ಕೆ ಅರ್ಧ ಶಿವಮೊಗ್ಗ ನಗರ ಕತ್ತಲಲ್ಲಿ ಮುಳುಗಿತ್ತು.

ಈ ದಿಡೀರ್ ವಿದ್ಯುತ್ ಅಭಾವಕ್ಕೆ ಕಾರಣವಿದೆ ಎಂದು ಮೆಸ್ಕಾಂ ಅಧಿಕಾರಿಗಳು ತಿಳಿಸಿದ್ದಾರೆ. ವಿದ್ಯುತ್ ಉತ್ಪಾದನೆ ಮತ್ತು ಅದರ ಬಳಕೆಯಲ್ಲಿ ವ್ಯತ್ಯಾಸವಾದಾಗ ಈ ಲೋಡ್  ಶೆಡ್ಡಿಂಗ್ ಸಂಭವಿಸಿದೆ ಎಂಬುದು ಇಲಾಖೆ ಸ್ಪಷ್ಟಪಡಿಸಿದೆ. ಇದು ಶಿವಮೊಗ್ಗದ ಸುತ್ತಮುತ್ತಲಿನ ಹಳ್ಳಿಯಲ್ಲೂ ಈ ವಿದ್ಯುತ್ ಅಭಾವಗೊಳ್ಳಲಿದೆ  ಎಂಬುದು ಅಧಿಕಾರಿಗಳ ಉತ್ತರವಾಗಿದೆ.


ಜಯನಗರ, ಬಸವನಗುಡಿ, ಹನುಮಂತ‌ನಗರ ಮೊದಲಾದ ಕೆಲ ಬಡಾವಣೆಗಳಲ್ಲಿ ವಿದ್ಯುತ್ ಇತ್ತು ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

By admin

ನಿಮ್ಮದೊಂದು ಉತ್ತರ

error: Content is protected !!