ಶಿವಮೊಗ್ಗ ಮೇ 28:
ಅಂಗವಿಕಲ ವ್ಯಕ್ತಿಗಳ ಹಕ್ಕುಗಳ ಅಧಿನಿಯಮ 2016 ಹಾಗೂ ಕೇಂದ್ರ ಸರ್ಕಾರದ ಸೂಚನೆಯಂತೆ ಈಗಾಗಲೇ ಗುರುತಿನ ಚೀಟಿ ಪಡೆದಿರುವ ಎಲ್ಲ ವಿಕಲಚೇತನರು ಹಾಗೂ ಹೊಸದಾಗಿ ಗುರುತಿನ ಚೀಟಿ ಪಡೆಯಲು ಎಲ್ಲ ವಿಕಲಚೇತನರು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಿ ವಿಶಿಷ್ಟ ವಿಕಲಚೇತನರ ಗುರುತಿನ ಚೀಟಿ(ಯುಡಿಐಡಿ) ಸ್ಮಾರ್ಟ್ಕಾರ್ಡ್ ಸೌಲಭ್ಯ ಪಡೆಯುವುದು ಕಡ್ಡಾಯವಾಗಿರುತ್ತದೆ.
ವಿಶಿಷ್ಟ ಅಂಗವಿಕಲ ಗುರುತಿನ ಚೀಟಿಯನ್ನು (ಯುಡಿಐಡಿ ಸ್ಮಾರ್ಟ್ಕಾರ್ಡ್) ಹೊಂದದೇ ಇರುವ ಅಂಗವಿಕಲರು ಕೇಂದ್ರ, ರಾಜ್ಯ ಸರ್ಕಾರದಿಂದ ಪಡೆಯಲಾಗುತ್ತಿರುವ ಯೋಜನೆಗಳನ್ನು ಶೀಘ್ರದಲ್ಲಿ ಸ್ಥಗಿತಗೊಳಿಸಲಾಗುತ್ತದೆ. ಆದ್ದರಿಂದ ಜಿಲ್ಲೆಯ ಎಲ್ಲ ವಿಕಲಚೇತನರು www.swavalambacard.gov.in ವೆಬ್ಸೈಟ್ನಲ್ಲಿ ನೋಂದಾಯಿಸಿಕೊಂಡು ವೈದ್ಯಕೀಯ ಪ್ರಾಧಿಕಾರಗಳಿಂದ ತಪಾಸಣೆಯನ್ನು ಮಾಡಿಕೊಳ್ಳುವ ಮೂಲಕ ಯುಡಿಐಡಿ ಕಾರ್ಡ್ ಪಡೆಯಬೇಕು. ಹೆಚ್ಚಿನ ಮಾಹಿತಿಗೆ ಕಚೇರಿ ದೂರವಾಣಿ ಸಂಖ್ಯೆ ಹಾಗೂ ಆಯಾ ತಾಲ್ಲೂಕುಗಳ ತಾಲ್ಲೂಕು ಪಂಚಾಯ್ತಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಎಂ.ಆರ್.ಡಬ್ಲ್ಯುಗಳಿಗೆ ದೂರವಾಣಿ ಕರೆ ಮಾಡುವುದು.
ಮಲ್ಲಿಕಾರ್ಜುನ ಶಿವಮೊಗ್ಗ ಮೊ.ಸಂ:9980150110, ದಿನೇಶ್ ಭದ್ರಾವತಿ 7899137243, ಹುಚ್ಚರಾಯಪ್ಪ ಶಿಕಾರಿಪುರ 9741161346, ದಿವಾಕರ ತೀರ್ಥಹಳ್ಳಿ 9480767638, ಶ್ಯಾಮ್ಸುಂದರ್ ಸಾಗರ 9535247757/9480068244, ಭರತ್ಕುಮಾರ್ ಸೊರಬ 9110493122, ರವಿಕುಮಾರ್ ಹೊಸನಗರ 9731922693 ನ್ನು ಸಂಪರ್ಕಿಸಬಹುದೆಂದು ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ಶಿಲ್ಪಾ ಎಂ ದೊಡ್ಡಮನಿ ತಿಳಿಸಿದ್ದಾರೆ.