ಶಿವಮೊಗ್ಗ, ಮೇ.14 :
ಹುಟ್ಟು ಸಾವು ಎನ್ನುವುದು ಸ್ವಾಭಾವಿಕ. ಆದರೆ, ಅದರ ಮಧ್ಯದಲ್ಲಿ ಯಾವ ರೀತಿ ಬಾಳಿದರು ಎನ್ನುವುದು ಮುಖ್ಯವಾಗುತ್ತದೆ ಎಂದು ಆನಂದಪುರ ಬೆಕ್ಕಿನ ಕಲ್ಮಠದ ಡಾ. ಶ್ರೀ ಮಲ್ಲಿಕಾರ್ಜುನ ಮುರುಘರಾಜೇಂದ್ರ ಮಹಾಸ್ವಾಮೀಜಿ ಹೇಳಿದ್ದಾರೆ.


ಅವರು ಇಂದು ನಗರದ ಕುವೆಂಪು ರಂಗಮಂದಿರದಲ್ಲಿ ವಿದ್ಯುತ್ ಇಲಾಖೆ ವೀರಶೈವ ನೌಕರರ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಹಮ್ಮಿಕೊಂಡಿದ್ದ ಬಸವ ಸ್ಮರಣೆ ಹಾಗೂ ಶರಣರ ಸಮಾವೇಶ ಉದ್ಘಾಟಿಸಿ ಮಾತನಾಡಿದರು.


ಬಸವ ಜಯಂತಿ ಅಕ್ಷಯ ತದಿಗೆ ಯಿಂದ ಒಂದು ತಿಂಗಳ ಕಾಲ ಎಲ್ಲರೂ ಹಬ್ಬವನ್ನಾಗಿ ಆಚರಿಸುತ್ತಾರೆ. ವಿದ್ಯುತ್ ಇಲಾ ಖೆಯ ವೀರಶೈವ ನೌಕರರ ಕ್ಷೇಮಾಭಿವೃದ್ಧಿ ಸಂಘ ಕೂಡ ಬಸವ ಜಯಂತಿಯನ್ನು ಕಾಯಕ ದಾಸೋಹ ಹಾಗೂ ಸಾಮಾಜಿಕ ಚಟುವಟಿಕೆಗಳ ಮೂಲಕ ಆಚರಿಸಿಕೊಂಡು ಬಂದಿದೆ ಎಂದರು.


ಬಸವಣ್ಣನವರು ಹುಟ್ಟು ಸಾವಿನ ಮಧ್ಯದ ಬದುಕನ್ನು ಸಮಾಜಕ್ಕಾಗಿ ಮೀಸ ಲಿಟ್ಟು ಮಹಾಪುರುಷರಾದರು. ಆದರೆ, ಈಗಿನ ಜನರ ಬದುಕು ಹುಟ್ಟು ಸಾವಿನ ನಡುವೆ ಏನೂ ಮಾಡದೇ ಕಳೆದು ಹೋಗುತ್ತಿರುವುದು ದೊಡ್ಡ ದುರಂತ. ಅನೇಕರು ತಮ್ಮ ಅರ್ಧ ಆಯಸ್ಸನ್ನು ತಮ್ಮ ಹುಟ್ಟಿನ ಬಗ್ಗೆಯೇ ಯೋಚಿಸಿ ಕಳೆಯುತ್ತಾರೆ. ಕೆಲವರು ಸಾವಿನ ಬಗ್ಗೆ ಭಯದಿಂದ ಕಳೆಯು ತ್ತಾರೆ. ಇದರ ನಡುವಿನ ಬದುಕನ್ನು ಏನೂ ಮಾಡದೇ ಅಂತ್ಯವಾಗುತ್ತಾರೆ. ಆದರೆ, ಮಹಾಪುರುಷರಿಗೆ ಹುಟ್ಟು ಮತ್ತು ಸಾವು ಮುಖ್ಯವಲ್ಲ. ತಾವು ಬದುಕುಳಿದ ಅವಧಿ ಯಲ್ಲಿ ಸಮಾಜಕ್ಕಾಗಿಯೇ ತಮ್ಮ ಜೀವನ ಸಮರ್ಪಿಸುವುದರಿಂದ ಅವರನ್ನು ಜನ ನೆನಪಿಸಿಕೊಳ್ಳುತ್ತಾರೆ ಎಂದರು.


ನಮ್ಮ ಬದುಕಿನ ಕ್ಷಣಗಳನ್ನು ಅಲಕ್ಷಿಸ ಬಾರದರು. ಜೀವನದಲ್ಲಿ ಒಂದು ಶ್ರೇಷ್ಟವಾದ ಗುರಿಯನ್ನಿಟ್ಟುಕೊಂಡು ಅದನ್ನು ತಲುಪು ವುದು ಎಲ್ಲರ ಕರ್ತವ್ಯವಾಗಿದೆ. ಅಟ್ಟದ ಮೇಲೆ ಏರಲು ಏಣಿಯ ಸಹಾಯ ಬೇಕೇ ಬೇಕು. ಹತ್ತಿದ ಮೇಲೆ ಅದನ್ನು ತಳ್ಳಿದರೆ ಅದರ ಪರಿಣಾಮ ಆತ ಇಳಿಯಬೇಕಾಗಾ ದಾಕ ಅರಿವಾಗುತ್ತದೆ ಎಂದರು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಸಂಸದ ಬಿ.ವೈ. ರಾಘವೇಂದ್ರ, ೧೨ ನೇ ಶತಮಾನದಲ್ಲಿ ಅನುಭವ ಮಂಟಪದಲ್ಲಿ ಬಸವಣ್ಣನವರ ನೇತೃತ್ವದಲ್ಲಿ ಉಂಟಾದ ಚಿಂತನೆಗಳು ಎಲ್ಲ ಕಾಲಕ್ಕೂ ಪ್ರಸ್ತುತ. ಕಾಯ ಕವೇ ಕೈಲಾಸ ಎಂದು ಹೇಳಿ ಕಾಯಕದಲ್ಲೇ ದೇವರನ್ನು ಕಂಡ ಮಹಾಪುರುಷರು ಜೀವನ ದಲ್ಲಿ ಕೆಲವೊಂದಾದರೂ ಬಸವತತ್ವಗಳನ್ನು ಅಳವಡಿಸಿಕೊಳ್ಳಬೇಕು. ವಿದ್ಯುತ್ ಇಲಾಖೆಯ ವೀರಶೈವ ನೌಕರರ ಕ್ಷೇಮಾಭಿವೃದ್ಧಿ ಸಂಘ ತಮ್ಮ ನಿರಂತರ ಚಟುವಟಿಕೆಗಳಿಗೆ ಮತ್ತು ತರಬೇತಿ ಕೇಂದ್ರ ಸ್ಥಾಪನೆಗೆ ಸ್ಥಳದ ಬೇಡಿಕೆ ಇಟ್ಟಿದ್ದಾರೆ. ಅದನ್ನಿ ಈಡೇರಿಸುವುದಾಗಿ ಆಶ್ವಾಸನೆ ನೀಡಿದರು.


ಕಾರ್ಯಕ್ರಮದಲ್ಲಿ ಮೂಲೆಗದ್ದೆ ಸದಾನಂದ ಶಿವಯೋಗಾಶ್ರಮದ ಅಭಿನವ ಚನ್ನಬಸವ ಮಹಾಸ್ವಾಮಿಗಳು ಸಾನಿಧ್ಯ ವಹಿಸಿದ್ದರು. ಶಾಸಕರಾದ ಆಯನೂರು ಮಂ ಜುನಾಥ್, ಡಿ.ಎಸ್. ಅರುಣ್, ಕೆಪಿಟಿಸಿಎಲ್ ನಿವೃತ್ತ ನಿರ್ದೇಶಕ ಕೆ.ವಿ. ಶಿವಕುಮಾರ್, ಪ್ರಮುಖರಾದ ಎಸ್.ಪಿ. ದಿನೇಶ್, ಕತ್ತಿಗೆ ಚನ್ನಪ್ಪ, ಪಿ. ಚಂದ್ರಕಲಾ, ಮೋಹನ್ ಕುಮಾರ್, ಕುಮಾರಸ್ವಾಮಿ, ಪ್ರಕಾಶ್, ವಸಂತಕುಮಾರ್, ದ್ವಾರಾಕಾರಾಧ್ಯ ಮೊದಲಾದವರಿದ್ದರು.

By admin

ನಿಮ್ಮದೊಂದು ಉತ್ತರ

error: Content is protected !!