ಶಿವಮೊಗ್ಗ : ನಗರದ ಹೊರವಲಯದಲ್ಲಿರುವ ಸೋಮಿನಕೊಪ್ಪ ಶ್ರೀ ಪಂಚಮುಖಿ ಆಂಜನೇಯ ಸ್ವಾಮಿ ಹಾಗೂ ಶ್ರೀ ಬನಶಂಕರಿ ದೇವಸ್ಥಾನದಲ್ಲಿ ಮೇ 14 ರಿಂದ 16 ರವರೆಗೆ “ಶ್ರೀ ಲಕ್ಷ್ಮೀ ನೃಸಿಂಹ ಜಯಂತಿ”ಯನ್ನು ಹಮ್ಮಿಕೊಳ್ಳಲಾಗಿದೆ ಎಂದು ಉಭಯ ದೇವಳಗಳ ಪ್ರಧಾನ ಅರ್ಚಕ ವೇ.ಬ್ರ.ಶ್ರೀ. ರವೀಂದ್ರ ಭಟ್ ತಿಳಿಸಿದ್ದಾರೆ.

ಈ ಕುರಿತು ಮಾಹಿತಿ ನೀಡಿದ ಅವರು, ಶ್ರೀ ಲಕ್ಷ್ಮೀ ನೃಸಿಂಹ ಜಯಂತಿ ಅಂಗವಾಗಿ ಮೇ 14 ಶನಿವಾರ ಸಂಜೆ 5-00 ಗಂಟೆಯಿಂದ ಶ್ರೀ ನೃಸಿಂಹ ಸ್ವಾಮಿಗೆ ಶತವಾರ ರುದ್ರಾಭಿಷೇಕ, ಮಹಾಮಂಗಳಾರತಿ ಹಾಗೂ ತೀರ್ಥ ಪ್ರಸಾದ ವಿನಿಯೋಗ ಏರ್ಪಡಿಸಲಾಗಿದೆ ಎಂದರು.

ಮೇ 15 ರ ಭಾನುವಾರ ಬೆಳಿಗ್ಗೆ 9-00 ಗಂಟೆಯಿಂದ ಶ್ರೀ ನೃಸಿಂಹ ಹೋಮ, ಅನ್ನ ಪ್ರಸಾದ ವಿನಿಯೋಗ ನಡೆಯಲಿದೆ ಎಂದ ಅವರು, ಮೇ 16 ರ ಸೋಮವಾರ ಬೆಳಿಗ್ಗೆ 9-00 ಯಿಂದ ಶ್ರೀ ಲಕ್ಷ್ಮೀ ನೃಸಿಂಹ ಸ್ವಾಮಿಗೆ ಪವಮಾನ ಅಭಿಷೇಕ, ಪ್ರಸಾದ ವಿನಿಯೋಗ ಹಾಗೂ ಸಂಜೆ 6-30 ರಿಂದ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ, ನಂತರ ಪ್ರಸಾದ ವಿನಿಯೋಗ ನಡೆಯಲಿದೆ ಎಂದು ತಿಳಿಸಿದರು.

ಭಕ್ತಾದಿಗಳು ಈ ಧಾರ್ಮಿಕ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಶ್ರೀ ಲಕ್ಷ್ಮೀ ನೃಸಿಂಹ ಸ್ವಾಮಿ ಕೃಪೆಗೆ ಪಾತ್ರರಾಗಬೇಕಾಗಿ ಅವರು ಕೋರಿದರು.

ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ : 9448126803 ಕ್ಕೆ ಸಂಪರ್ಕಿಸಬಹುದು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ..

By admin

ನಿಮ್ಮದೊಂದು ಉತ್ತರ

error: Content is protected !!