ಶಿವಮೊಗ್ಗ, ಮೇ.೦೯:
ವಿಶ್ವಕ್ಕೇ ಪ್ರಸಿದ್ಧವಾದ ನಮ್ಮ ಜಾನಪದ ಕಲೆ ಉಳಿಸುವ ಜವಾಬ್ದಾರಿ ಎಲ್ಲರ ಮೇಲಿದೆ’ ಎಂದು ಶಾಸಕ ಬಿ.ಕೆ. ಸಂಗಮೇಶ್ವರ ಅಭಿಪ್ರಾಯಪಟ್ಟರು.
ಶಿವಮೊಗ್ಗ ಜಿಲ್ಲಾ ಕರ್ನಾಟಕ ಜಾನಪದ ಪರಿಷತ್ತು ಹಾಗೂ ಭದ್ರಾವತಿಯ ಗೋಣಿ ಬೀಡಿನ ಶೀಲ ಸಂಪಾದನಾ ಮಠ ಸ್ವಿರಿಚ್ಯು ಯಲ್ ಫೌಂಡೇಶನ್ ವತಿಯಿಂದ ಏರ್ಪಡಿಸಿದ್ದ ೮೮೯ನೇ ಬಸವ ಜಯಂತ್ಯುತ್ಸವ ಮತ್ತು ೩ನೇ ಜಾನಪದ ಸಮ್ಮೇಳನದಲ್ಲಿ ಮಾತನಾಡಿದರು.


ಶೀಲ ಸಂಪಾದನಾ ಮಠದ ಸಿದ್ದಲಿಂಗ ಸ್ವಾಮೀಜಿ ಮಾತನಾಡಿ, ’ಸಹಾನುಭೂತಿ ಕಡಿಮೆಯಾಗುತ್ತಿರುವ ಇಂದಿನ ದಿನಮಾನ ದಲ್ಲಿ ಜನಪದ ಸಾಹಿತ್ಯ ಮಾರ್ಗದರ್ಶಕವಾ ಗಿದೆ. ಜನಪದ ಸಾಹಿತ್ಯದಲ್ಲಿ ಜೀವನದ ಮೌಲ್ಯಗಳು ಅಡಕವಾಗಿವೆ. ಅದು ನಮ್ಮ ಯುವ ಸಮೂಹಕ್ಕೆ ಬದುಕುವ ದಾರಿಯನ್ನು ತೋರಿಸುತ್ತದೆ’ ಎಂದು ತಿಳಿಸಿದರು.


ಸಮ್ಮೇಳನಾಧ್ಯಕ್ಷ ಜೆ.ಸಿ. ಮಂಜಪ್ಪ ಮಾತನಾಡಿ, ’ಜನಪದ ಕಲಾ ಪ್ರಕಾರಗಳಿಗೆ ಸರ್ಕಾರದ ನೀಡುತ್ತಿರುವ ಅವಕಾಶ ಕಡಿಮೆಯಾ ಗಿದೆ. ಇಂತಹ ಸಂದರ್ಭದಲ್ಲಿ ಡಾ.ಎಚ್. ಎಲ್ ನಾಗೇಗೌಡ ಅವರ ಜನಪದ ಬಗೆಗಿನ ಕಾಳಜಿ ಎಲ್ಲರಿಗೂ ಮಾರ್ಗದರ್ಶಕ. ಜನಪದ ಮಹಾ ಕಲಾಪೋಷಕರಾಗಿ ಅವರ ಸೇವೆ ಅವಿಸ್ಮರಣೀಯ’ ಎಂದು ಹೇಳಿದರು


ಜೆಡಿಎಸ್ ಜಿಲ್ಲಾ ಘಟಕದ ಅಧ್ಯಕ್ಷ ಎಂ. ಶ್ರೀಕಾಂತ್ ಕಾರ್ಯಕ್ರಮ ಉದ್ಘಾಟಿಸಿದರು. ಶಿವಮೊಗ್ಗ ಜಿಲ್ಲಾ ಕರ್ನಾಟಕ ಜಾನಪದ ಪರಿಷತ್ತಿನ ಅಧ್ಯಕ್ಷ ಡಿ. ಮಂಜುನಾಥ ಪ್ರಾಸ್ತಾವಿಕವಾಗಿ ಮಾತನಾಡಿದರು.
ಹಿಂದಿನ ಸಮ್ಮೇಳನಾಧ್ಯಕ್ಷ ಡೊಳ್ಳಿನ ಹುಚ್ಚಪ್ಪ, ನಿವೃತ್ತ ಐಎಎಸ್ ಅಧಿಕಾರಿ ದಯಾಶಂಕರ್, ಜೆಡಿಎಸ್ ಮುಖಂಡರಾದ ಶಾರದಾ ಅಪ್ಪಾಜಿಗೌಡ, ಉಪನ್ಯಾಸಕ ಚನ್ನೇಶ್ ಹೊನ್ನಾಳಿ, ಭದ್ರಾವತಿ ತಾಲ್ಲೂಕು ಕಜಾಪ ಅಧ್ಯಕ್ಷ ಕೋಗಲೂರು ಯಜ್ಞಯ್ಯ, ಸತ್ಯನಾರಾಯಣ ಸಿರಿವಂತೆ, ವಿ.ಟಿ. ಸ್ವಾಮಿ, ಎಂ. ರಮೇಶ್, ಗೊಂದಿ ಜಯರಾಮ್ ಇದ್ದರು.

By admin

ನಿಮ್ಮದೊಂದು ಉತ್ತರ

error: Content is protected !!