ಶಿವಮೊಗ್ಗ, ಮೇ.09:
ಶಿವಮೊಗ್ಗ ನಗರದಲ್ಲಿ ನಿರಂತರವಾಗಿ ಹಗಲು ರಾತ್ರಿ, ಬಿಸಿಲು ಮಳೆ ಎನ್ನದೇ ನಡೆಯುತ್ತಿರುವ ಸ್ಮಾರ್ಟ್ ಸಿಟಿ ಕಾಮಗಾರಿಯ ಇನ್ನೊಂದು ದುರಂತದ ಘಟನೆ ಇಲ್ಲಿದೆ ನೋಡಿ.


ಇದು ವಿನೋಬನಗರ ನೂರು ಅಡಿ ರಸ್ತೆಯ ಕಾಮಗಾರಿ. ಈ ಮಾರ್ಗ ಹಿಂದಿನಿಂದಲೂ ಡಿವೈಡರ್ ಹೊಂದಿತ್ತು. ಮದ್ಯ ಭಾಗದ ಮರಗಳಿಗೆ ಭದ್ರತೆ ಒದಗಿಸುವ ಸ್ಲ್ಯಾಬ್ ಅಳವಡಿಸಲಾಗಿತ್ತು. ಉಷಾ ನರ್ಸಿಂಗ್ ಹೊಂ ನಿಂದ ಆಲ್ಕೊಳ ಸರ್ಕಲ್ ವರೆಗೆ ಹಿಂದಿನಿಂದಲೂ ಸ್ಲ್ಯಾಬ್ ಅಳವಡಿಸಲಾಗತ್ತು. ಇಷ್ಟು ದೂರದಲ್ಲಿ ಸುಮಾರು ಹತ್ತರಿಂದ ಹದಿನೈದು ಸ್ಲ್ಯಾಬ್ ಹಾಳಾಗಿದ್ದವೆನ್ನಲಾಗಿದೆ.
ಈ ಪೀಠಿಕೆ ನೀಡಲು ಕಾರಣ ಇದೆ ನೋಡಿ. ಹಳೆಯ ಎಲ್ಲಾ ಸ್ಲ್ಯಾಬ್ ಕಿತ್ತು ಎಲ್ಲೆಲ್ಲಿಗೂ ಸಾಗಿಸಿದ ಸ್ಮಾರ್ಟ್ ಸಿಟಿ ಇಂಜಿನಿಯರ್ ಗಳು ಶೇ 50 ರಷ್ಟು ಹಳೆಯವಕ್ಕೆ ರೀ ಪಾಲಿಶ್ ಮಾಡಿ ಹೊಸವನ್ಬು ಸೇರಿಸಿ ಮತ್ತೆ ಅದೇ ತರ ಕಟ್ಟಿದ್ದಾರೆ. ಅವುಗಳಿಗೆ ಹೊಸತನವೆಂದು ಬಿಂಬಿಸಲು ಈಗ ಬಣ್ಷ ಹಚ್ಚತೊಡಗಿದ್ದಾರೆ. ಚಂದಗಿರೋದಕ್ಕೆ ಲಕ್ಷಾಂತರ ಲೆಕ್ಕ ತೋರಿಸಿ ಬಣ್ಣ ಹೊಡೆಯೋದು ಸ್ಮಾರ್ಟ್ ಸಿಟಿ ಕಾಮಗಾರಿನಾ ಎಂದು ಜನ ತಲೆ ಚಚ್ಚಿಕೊಳ್ತಿದ್ದಾರೆ.

By admin

ನಿಮ್ಮದೊಂದು ಉತ್ತರ

error: Content is protected !!