ಸಚಿವ ಆರಗ ಹರುಷ, ಸಂಸದ ರಾಘವೇಂದ್ರರಿಗೆ ಅಭಿನಂದನೆ

ಭಾರತೀಪುರ ತಿರುವು ತಪ್ಪಿಸಲು ಅತ್ಯಾಧುನಿಕ ಮೇಲ್ಸೇತುವೆ ನಿರ್ಮಾಣ: ಗೃಹ ಸಚಿವ ಆರಗ ಜ್ಞಾನೇಂದ್ರ

ಬೆಂಗಳೂರು, ಮಾ.28:
ನಿತ್ಯ ಹತ್ತು ಹಲವು ಅಪಘಾತಗಳಿಗೆ ಹಾಗೂ ಸಾವು ನೋವುಗಳಿಗೆ ಕಾರಣವಾಗಿದ್ದ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ-ಶಿವಮೊಗ್ಗ ರಾಷ್ಟೀಯ ಹೆದ್ದಾರಿ ಯಲ್ಲಿ ಬರುವ ಭಾರತೀಪುರ ಹೇರ್ ಪಿನ್ ತಿರುವನ್ನು ತಪ್ಪಿಸಿ, ಅತ್ಯಾಧುನಿಕ ಮೇಲ್ಸುತೇವೆ ನಿರ್ಮಾಣ ಕಾಮಗಾರಿಗೆ , ಕೇಂದ್ರ ಸರಕಾರದ ಹೆದ್ದಾರಿ ಮಂತ್ರಾಲಯ, ಅನುಮತಿ ನೀಡಿದ್ದು, 58 ಕೋಟಿ ರೂಪಾಯಿಗಳ ವೆಚ್ಚದ ಕಾಮಗಾರಿ ನಡೆಸಲಿದೆ ಎಂದು ಕರ್ನಾಟಕ ಗೃಹ ಸಚಿವ ಆರಗ ಜ್ಞಾನೇಂದ್ರ ತಿಳಿಸಿದ್ದಾರೆ.


ಮೇಲ್ಸೇತುವೆ ನಿರ್ಮಾಣದ ಅಗತ್ಯದ ಕುರಿತು, ಈ ಹಿಂದೆ ಸಲ್ಲಿಸಿದ ಮನವಿಗೆ ಸ್ಪಂದಿಸಿ ಅನುದಾನ ಬಿಡುಗಡೆಯಾಗಿದ್ದು, ಶಿವಮೊಗ್ಗ ಲೋಕಸಭಾ ಸದಸ್ಯ ಬಿ ವೈ ರಾಘವೇಂದ್ರ ಅವರು ಮೇಲ್ಸೇತುವೆ ಅಗತ್ಯದ ಬಗ್ಗೆ ಕೇಂದ್ರ ಸಚಿವರ ಜತೆ ಸಮಾಲೋಚಿಸಿದ್ದರು. ಈ ಯೋಜನೆಯನ್ನು ಕಾರ್ಯಗತಗೊಳಿಸಲು ಕೋರಿದ್ದರು ಎಂದು ಗೃಹ ಸಚಿವರು ಹೇಳಿದ್ದಾರೆ.
ಭಾರತೀಪುರ ಮೇಲ್ಸೇತುವೆ ನಿರ್ಮಾಣ ಕಾಮಗಾರಿ, ಅಲ್ಲದೆ, ಕೇಂದ್ರ ಹೆದ್ದಾರಿ ಮಂತ್ರಾಲಯ, ತೀರ್ಥಹಳ್ಳಿ ತಾಲೂಕು ಮೇಗರವಳ್ಳಿಯಿಂದ, ಆಗುಂಬೆ ವರೆಗೆ 14.77 ಕಿಲೊಮೀಟರ್ ರಾಷ್ಟ್ರೀಯ ಹೆದ್ದಾರಿ 169-A ಗೆ ದ್ವಿಪಥ ಪಿ ಎಸ, (10 ಮೀಟರ್) ರಸ್ತೆಯನ್ನಾಗಿ ಅಭಿವೃದ್ಧಿ ಪಡಿಸಲು ರೂ 96.20 ಕೋಟಿ ಗೆ ಅನುಮೋದನೆ ಸಹ ನೀಡಲಾಗಿದ್ದು, ಕಾಮಗಾರಿ ಚುರುಕಿಗೆ, ಸಹಾಯವಾಗುವುದೆಂದು ಹೇಳಿದರು.


ಸುದ್ದಿಗಾರರಿಗೆ ಮಾಹಿತಿ ನೀಡಿದ ಸಚಿವರು ಈ ಎರಡೂ ಕಾಮಗಾರಿಗಳಿಗೆ ಅನುಮತಿ ನೀಡಿ ಅನುದಾನ ಬಿಡುಗಡೆ ಮಾಡಿರುವ ಪ್ರಧಾನಮಂತ್ರಿ ನರೇಂದ್ರ ಮೋದಿ, ಕೇಂದ್ರ ಹೆದ್ದಾರಿ ಸಚಿವ ನಿತಿನ್ ಗಡ್ಕರಿ, ಹಾಗೂ ಶಿವಮೊಗ್ಗ ಲೋಕಸಭಾ ಸದಸ್ಯ, ಬಿ ವೈ ರಾಘವೇಂದ್ರ, ಅವರಿಗೆ ಧನ್ಯವಾದ ತಿಳಿಸಿದ್ದಾರೆ.

By admin

ನಿಮ್ಮದೊಂದು ಉತ್ತರ

You missed

error: Content is protected !!