ಶಿವಮೊಗ್ಗ, ಮಾ.೨೧:
ನಗರದ ಸವಾರ್ಲೈನ್ ರಸ್ತೆಯಲ್ಲಿರುವ ಬಾರ್ವೊಂದರಲ್ಲಿ ಆಟೋ ಚಾಲಕನೊಬ್ಬನಿಗೆ ಬಿಯರ್ ಬಾಟಲಿಯಿಂದ ತಲೆಗೆ ಹೊಡೆದು ಪರಾರಿಯಾಗಿರುವ ಘಟನೆ ಇಂದು ವರದಿಯಾಗಿದೆ.
ಬೊಮ್ಮನಕಟ್ಟೆಯ ನಿವಾಸಿ ಆಟೋಚಾಲಕ ಗಾಯಗೊಂಡಿರುವ ಆಟೋಚಾಲಕ ಪ್ರದೀಪ್ (೫೭) ಎಂದು ಗುರುತಿಸಲಾಗಿದೆ.
ಪ್ರಕರಣದ ಹಿನ್ನೆಲೆ
ಈತ ಸ್ನೇಹಿತ ಪ್ರದೀಪ್ ಎಂಬಾತನೊಂದಿಗೆ ಬಾರ್ ಗೆ ಹೋಗಿದ್ದಾನೆ. ಪ್ರದೀಪ್ ಹೊರಗಡೆ ಹೋದಾಗ ಯಾವುದೋ ವ್ಯಕ್ತಿಯೊಬ್ಬ ಬಂದು ನಿಮ್ಮ ಸಮಯವಾಗಿದೆ ಹೊರಗಡೆ ನಡೆಯಿರಿ ಎಂದು ಹೇಳಿದ್ದಾನೆ. ನನ್ನ ಸ್ನೇಹಿತ ಬಂದ ಬಳಿಕ ಹೋಗುತ್ತೇವೆ ಎಂದು ವೇಣುಗೋಪಾಲ್ ತಿಳಿಸಿದ್ದಾನೆ. ಇಷ್ಟೇ ಕಾರಣಕ್ಕೆ ಬಿಯರ್ ಬಾಟಲಿಯಿಂದ ತಲೆಗೆ ಹೊಡೆದು ಹಲ್ಲೆ ಮಾಡಲಾಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ವೇಣುಗೋಪಾಲನ ಮೇಲೆ ಹಲ್ಲೆ ಮಾಡಿದ ತಕ್ಷಣ ಸ್ನೇಹಿತ ಕೂಡ ಬಂದಿದ್ದಾನೆ. ಆತನನ್ನು ನೋಡಿ ಹಲ್ಲೆ ಮಾಡಿದ ವ್ಯಕ್ತಿ ಪರಾರಿಯಾಗಿದ್ದಾನೆ. ಗಾಯಾಳುವನ್ನು ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

