ಜಿಲ್ಲಾಡಳಿತಕ್ಕೂ ನೀರಿನ ಸಮಸ್ಸೆಗೆ ಮನವಿ ಸಲ್ಲಿಸಿದ ಪಾಲಿಕೆ ಕಾಂಗೈ ಸದಸ್ಯರು
ಶಿವಮೊಗ್ಗ, ಮಾ.19:
ಶಿವಮೊಗ್ಗ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ನಿರ್ವಹಣಾ ವಿಭಾಗ ಮತ್ತು ಉಪವಿಭಾಗವು ದಿ: 20/03/2021 ರ ಭಾನುವಾರದಂದು 2021-22 ನೇ ಸಾಲಿನ ನೀರಿನ ಕಂದಾಯ ಮತ್ತು ಬಾಕಿ ಕಂದಾಯ ವಸೂಲಾತಿಗಾಗಿ “ಆರ್.ಎಂ.ಎಲ್.ನಗರ ಭಾರತೀಯ ಸಭಾಭವನದ ಎದುರು, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಆವರಣ ದ್ರೌಪದಮ್ಮ ವೃತ್ತ, ದೈವಜ್ಞ ಕಲ್ಯಾಣ ಮಂದಿರ ಜೈಲ್ ಸರ್ಕಲ್, ಪೊಲೀಸ್ ಚೌಕಿ ಸರ್ಕಲ್ ವಿನೋಬನಗರ, ಆರ್.ಎಂ.ಎಲ್.ಸರ್ಕಲ್ ಡಬ್ಬಲ್ ಟ್ಯಾಂಕ್ ಹತ್ತಿರ, ವಿದ್ಯಾಣಗರ ಮುಖ್ಯರಸ್ತೆ” ಗಳಲ್ಲಿ ವಿಶೇಷ ನೀರಿನ ಕಂದಾಯ ವಸೂಲಾತಿ ಕೌಂಟರ್ಗಳನ್ನು ತೆರೆಯಲಾಗಿದೆ.
ನೀರಿನ ಖಾತೆದಾರರು ಬಾಕಿ ಉಳಿಸಿಕೊಂಡಿರುವ ನೀರಿನ ಕಂದಾಯವನ್ನು ಪಾವತಿಸದಿದ್ದಲ್ಲಿ ನೀರಿನ ಸಂಪರ್ಕವನ್ನು ಕಡಿತಗೊಳಿಸುವುದು ಅನಿವಾರ್ಯವಾಗಲಿದೆ. ಸಾರ್ವಜನಿಕರು ಸಹಕರಿಸುವಂತೆ ಕರ್ನಾಟಕ ನಗರ ನೀರುಸರಬರಾಜು ಮತ್ತು ಒಳಚರಂಡಿ ಮಂಡಳಿಯ ಸಹಾಯಕ ಕಾರ್ಯಪಾಲಕ ಅಭಿಯಂತರರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


