ಶಿವಮೊಗ್ಗ,ಫೆ.23:
ಭಜರಂಗದಳದ ಕಾರ್ಯಕರ್ತ ಹರ್ಷನ ಹತ್ಯೆ ಪ್ರಕರಣ ಈಗ ಹೊಸ ತಿರುವು ಕಂಡಿದೆ ಎಂದು ಹೇಳಲಾಗುತ್ತಿದೆ. ಹರ್ಷನ ಹತ್ಯೆಗೆ ಸಂಬಂಧಿಸಿದಂತೆ ಹುಡುಗಿಯರಿಬ್ಬರ ಕರೆ ಹಾಗೂ ಆತನ ಮೊಬೈಲ್ ನಾಪತ್ತೆ ಹಿಂದೆ ನೂರೆಂಟು ಘಟನೆಗಳಿರುವುದನ್ನು ಪೊಲೀಸರ ವಿಚಾರಣೆಯಲ್ಲಿ ಆತನ ಸ್ನೇಹಿತನೋರ್ವ ನೀಡಿದ್ದಾನೆಂಬುದು ಪೊಲೀಸರ ವಿಚಾರಣಾ ದಿಕ್ಕಿಗೆ ಬಿಗ್ ಟ್ವಿಸ್ಟ್ ನೀಡಿದೆ ಎನ್ನಲಾಗಿದೆ.
ಹರ್ಷನ ಕೊಲೆ ನಡೆದ ದಿನ ಕೊನೆ ಕ್ಷಣದಲ್ಲಿ ನಡೆದ ಘಟನೆಯೊಂದನ್ನು ಸ್ನೇಹಿತ ಬಹಿರಂಗಪಡಿಸಿದ್ದಾನೆ ಎನ್ನಲಾಗಿದ್ದು, ಘಟನೆ ನಡೆದ ಹರ್ಷನಿಗೆ ಇಬ್ಬರು ಹುಡುಗಿಯರು ಕರೆ ಮಾಡಿದ್ದಾರೆ ಎನ್ನುವ ಮಾಹಿತಿಯ್ನು ಸ್ನೇಹಿತ ಹೇಳಿದ್ದಾನೆ.
ಕೊಲೆಯಾಗುವುದಕ್ಕೂ ಮೊದಲು ಪದೇ ಪದೇ ಕರೆ ಮಾಡುತ್ತಿದ್ದ ಇಬ್ಬರು ಹುಡುಗಿಯರು ನಾನು ನಿಮ್ಮ ಸ್ನೇಹಿತರು ಎನ್ನುತ್ತಿದ್ದರು. ಈ ವೇಳೆ ನನ್ನಿಂದ ಏನಾಗಬೇಕು ಎಂದು ಹರ್ಷ ಕೇಳಿದ್ದಾನೆ. ಇವರು ಯಾರು ಎಂದು ಸ್ನೇಹಿತರಿಗೆ ಕೇಳಿದ್ದಾನೆ. ಇದಾದ ಬಳಿಕ ಸ್ನೇಹಿತರ ಜೊತೆ ತೆರಳಿದ್ದ. ಇದಾದ ಕೆಲವೇ ಕ್ಷಣಗಳಲ್ಲಿ ಹರ್ಷನ ಕೊಲೆ ನಡೆದು ಹೋಗಿತ್ತು ಎಂದು ಸ್ನೇಹಿತ ಹೇಳಿಕೊಂಡಿದ್ದಾನಂತೆ.
ಕೊಲೆಯ ಬಳಿಕ ಹರ್ಷನ ಮೊಬೈಲ್ ನಾಪತ್ತೆಗಿದೆ. ಮೊಬೈಲ್ ಎಲ್ಲಿದೆ ಎನ್ನುವುದು ಇನ್ನೂ ಪತ್ತೆಯಾಗಿಲ್ಲ. ಮೊಬೈಲ್ ಎಲ್ಲಿದೆ? ಆರೋಪಿಗಳು ಹುಡುಗಿಯರನ್ನು ಕೊಲೆಗೆ ಬಳಸಿಕೊಂಡರೇ? ಅವರು ಯಾರು? ಸಹಾಯ ಕೇಳುವ ನೆಪದಲ್ಲಿ ಹುಡುಗಿಯರಿಂದ ಕರೆ ಮಾಡಿಸಿ ಬಲೆ ಬೀಸಿದ್ದಾರೆಯೇ ಎಂಬಿತ್ಯಾದಿ ಪ್ರಶ್ನೆಗಳು ಇದೀಗ ಜನರಿಗೆ ಮೂಡಿದೆ.