ಕೈಗಾರಿಕಾ ವಲಯಕ್ಕೆ ಆಗುತ್ತಿರುವ ತೊಂದರೆ ನಿವಾರಿಸಲು ಸಂಸದರಿಗೆ ಕೈಗಾರಿಕೋದ್ಯಮಿಗಳ ಮನವಿ

ಶಿವಮೊಗ್ಗ ಫೆ.15:
ಮಾಚೇನಹಳ್ಳಿಯಲ್ಲಿರುವ ಶಾಹಿ ಎಕ್ಸ್ಪೋರ್ಟ್ ಸಂಸ್ಥೆಯಿಂದ ಸುತ್ತಮುತ್ತಲ ಪ್ರದೇಶಗಳಿಗೆ ಮತ್ತು ಮಾಚೇನಹಳ್ಳಿ ಕೈಗಾರಿಕಾ ಪ್ರದೇಶಕ್ಕೆ ತುಂಬಾ ತೊಂದರೆಯಾಗುತ್ತಿದೆ ಎಂದು ಎಂದು ಮಾಚೇನಹಳ್ಳಿ ಮತ್ತು ನಿಧಿಗೆ ಕೈಗಾರಿಕಾ ವಸಹಾತುಗಳ ಸಂಘ ಹಾಗೂ ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘ ಶಿವಮೊಗ್ಗ ಸಂಸದ ಬಿ.ವೈ ರಾಘವೇಂದ್ರರವರಿಗೆ ದೂರು ಮನವಿಯನ್ನು ಸಲ್ಲಿಸಿದರು.
ಇದರಿಂದ ಕಪ್ಪು ಬಣ್ಣದ ದೂಳು, ಹೊಗೆ ಕೈಗಾರಿಕಾ ಘಟಕಗಳ ಒಳಗೆ ಬರುತಿದ್ದು, ಕೈಗಾರಿಕಾ ಯಂತ್ರೋಪಕರಣಗಳು ಹಾಗೂ ಘಟಕಗಳ ಛಾವಣಿಗಳು ಕಪ್ಪು ದೂಳಿನಿಂದ ತುಕ್ಕು ಹಿಡಿದು ಹಾಳಾಗುತ್ತಿವೆ, ಗಾಳಿಯಲ್ಲಿ ಬರುವುದರಿಂದ ಪರಿಸರ ಹಾಗೂ ನೀರು ಆಹಾರಗಳಿಗೂ ಮಿಶ್ರಿತವಾಗುತ್ತಿದೆ ಎಂದು ಆರೋಪಿಸಿದರು.
ಶಾಹಿ ಕಂಪನಿಗೆ ಪ್ರತ್ಯೇಕ ರಸ್ತೆ ಇದ್ದರೂ ಸಹ ಬಾರೀ ಸರಕು ವಾಹನಗಳು ನಿಧಿಗೆ ಕೈಗಾರಿಕಾ ಪ್ರದೇಶದ ರಸ್ತೆ ಮುಖಾಂತರ ಹಾಗು ಹೋಗುತ್ತಿದ್ದು ರಸ್ತೆ ತುಂಬಾ ಹಾಳಾಗಿದ್ದು ಕಾರ್ಮಿಕರಿಗೆ ಅಪಘಾತಗಳು ಸಂಭವಿಸಿರುವುದಾಗಿ, ಹಾಗೂ ಶಾಹಿ ಎಕ್ಸ್ಪೋರ್ಟ್ ಕಂಪೆನಿ ಸಂಸ್ಕರಣದ ನಂತರ ಹೊರಬರುತ್ತಿರುವ ರಾಸಾಯನಿಕ ಮಿಶ್ರಿತ ನೀರನ್ನು ಅಲ್ಲಿಯೇ ಇರುವ ಕೆರೆಗೆ ನೇರವಾಗಿ ಬಿಡುತ್ತಿದು , ಇದರಿಂದ ಸುತ್ತಮುತ್ತಲಿನ ಜಮೀನುದಾರರು ಹಾಗೂ ಇತರೆ ಕೈಗಾರಿಕಾ ಘಟಕಗಳಿಗೆ ಕೆಟ್ಟ ವಾಸನೆ ಬರುತ್ತಿದ್ದು ಅಂತರ್ಜಲಕ್ಕೂ ಕೂಡಾ ಹಾನಿಕಾರವಾಗುತ್ತಿದೆ ಎಂದರು.
ಈ ಬಗ್ಗೆ ಹಲವಾರು ಬಾರಿ ಸಂಸ್ಥೆಗೂ ಸಂಬಂಧಪಟ್ಟ ಇಲಾಖೆಗೆ ದೂರನ್ನು ನೀಡಿದರೂ ಯಾವುದೇ ಪ್ರಯೋಜನವಾಗಿರುವುದಿಲ್ಲ ಎಂದು ಮನವಿಯಲ್ಲಿ ತಿಳಿಸಿದ್ದಾರೆ.


ಮನವಿಗೆ ಪೂರಕವಾಗಿ ಸ್ಪಂದಿಸಿದ ಸಂಸದರು, ಸದರಿ ಕಂಪನಿಯು ಸ್ಥಳೀಯ ಸಾವಿರಾರು ಜನರಿಗೆ ಉದ್ಯೋಗಾವಕಾಶವನ್ನು ನೀಡಿದೆ. ಇದರಿಂದ ಆಗುತ್ತಿರುವ ತೊಂದರೆಯನ್ನು ವೈಜ್ಞಾನಿಕವಾಗಿ ಸರಿಪಡಿಸುವ ನಿಟ್ಟಿನಲ್ಲಿ ಯೋಚಿಸಿ ಆಗುತ್ತಿರುವ ತೊಂದರೆಯನ್ನು ಸಂಬಂಧಿಸಿದವರಿಗೆ ಸೂಚಿಸಿ ಸರಿಪಡಿಸಲು ನಿರ್ದೇಶನ ನೀಡುವುದಾಗಿ ಮನವಿದಾರರಿಗೆ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷ ಎನ್. ಗೋಪಿನಾಥ್ ಹಾಗೂ ಪದಾಧಿಕಾರಿಗಳು, ಮಾಚೇನಹಳ್ಳಿ ಕೈಗಾರಿಕಾ ಸಂಘದ ಅಧ್ಯಕ್ಷ ಎಂ,ಎ ರಮೇಶ್ ಹೆಗಡೆ ಮತ್ತು ಪದಾಧಿಕಾರಿಗಳು ಉಪಸ್ಥಿತರಿದ್ದರು.

By admin

ನಿಮ್ಮದೊಂದು ಉತ್ತರ

error: Content is protected !!