ಶಿವಮೊಗ್ಗ, ಜ.17

ಆರ್ಮಿ ಡೇ ಪ್ರಯುಕ್ತ ಶಿವಮೊಗ್ಗ ಅಣ್ಣಾ ನಗರ ಮುಖ್ಯರಸ್ತೆಯಲ್ಲಿನ ನಿವಾಸಿಗಳಾದ ನಿವೃತ್ತ ಸೈನಿಕರಾದ ತಂದೆ ಮಗನಿಗೆ ಜೆಸಿಐ ಶಿವಮೊಗ್ಗ ಭಾವನಾವು ಆತ್ಮೀಯವಾಗಿ ಸನ್ಮಾನಿಸಿತು.


76 ವರ್ಷದ ನೇಮೋಜಿ ಅವರು ಮಿಲಿಟರಿ ಪಡೆಯ ನಾಯಕ್ ಸಿಗ್ನಲ್ಸ್ ನಲ್ಲಿ 27 ವರ್ಷಗಳ ಕಾಲ ಜಮ್ಮು ಕಾಶ್ಮೀರ ಪಾಕಿಸ್ತಾನ, ಸಿಯಾಲ್ಕೋಟ್, ಜಾನ್ಸಿ, ಬಬಿನ, ಜಬಲ್ಪುರ್, ನಲ್ಲಿ ಕಾರ್ಯ ನಿರ್ವಹಿಸಿದ್ದರು.
ಹಾಗೂ ಇವರ ಮಗ
ಶ್ರೀಕಾಂತ್ ರಾವ್ ಸಿಂಧ್ಯಾ ಇವರು ಕೂಡ ಮಿಲಿಟರಿ ಪಡೆಯಲ್ಲಿ ಆರ್ಡನೆನ್ಸ್ MT Section ನಲ್ಲಿ 24 ವರ್ಷಗಳ ಕಾಲ ಹೈದ್ರಾಬಾದ್, ರಾಜಸ್ಥಾನ್, ಅಸ್ಸಾಂ, ಮಧ್ಯಪ್ರದೇಶ, ಮಹಾರಾಷ್ಟ್ರ, ಜಮ್ಮು ಕಾಶ್ಮೀರ್, ಪೂನಾ, ಹೀಗೆ ಹಲವಾರು ಕಡೆ ಕಾರ್ಯನಿರ್ವಹಿಸಿದ್ದು, ಕಳೆದ 21:3:2021 ರಂದು ನಿವೃತ್ತಿ ಹೊಂದಿರುತ್ತಾರೆ.
ಇವರ ಅಗಾಧವಾದ ದೇಶ ಸೇವೆಗೆ JCI ಭಾವನದ ವತಿಯಿಂದ ಗೌರವವನ್ನು ಸಲ್ಲಿಸಲಾಯಿತು.


ಅಧ್ಯಕ್ಷರಾದ JC HGF ಶಾರದಾ ಶೇಷಗಿರಿ ಗೌಡ ಅವರ ನೇತೃತ್ವದಲ್ಲಿ ನಡೆದ ಕಾರ್ಯ ಕ್ರಮದಲ್ಲಿ ಕಾರ್ಯದರ್ಶಿ Jc ಪೂರ್ಣಿಮಾ ಸುನಿಲ್, PP Jc ಮೃದುಲಾ ಮಂಜುನಾಥ್, Jc ಕವಿತಾ ಜೋಯಿಸ, Jc ಮಂಜುಳಾ
Jc ಭಾಗ್ಯ, Jc ಉಮಾ
ಇವರುಗಳು ಪಾಲ್ಗೊಂಡಿದ್ದರು.

By admin

ನಿಮ್ಮದೊಂದು ಉತ್ತರ

error: Content is protected !!