ಅಚ್ಚರಿಯ ಭವಿಷ್ಯ ನುಡಿದ ಕೋಡಿಹಳ್ಳಿ ಶ್ರೀಗಳು
ಹಾವೇರಿ, ಡಿ.24:
ಹಾವೇರಿ ಜಿಲ್ಲೆಯ ರಾಣೆಬೆನ್ನೂರಿನಲ್ಲಿ ಕೋಡಿಹಳ್ಳಿ ಮಠದ ಶ್ರೀಗಳು ಅಚ್ಚರಿಯ ಭವಿಷ್ಯ ನುಡಿದಿದ್ದಾರೆ. ಜನವರಿಯ ತಿಂಗಳಲ್ಲಿ ರಾಜಕೀಯದಲ್ಲಿ ಬಹುದೊಡ್ಡ ಅವಘಡ ಸಂಭವಿಸಲಿದೆ, ಕಾದು ನೋಡಿ ಎಂದಿದ್ದಾರೆ.
ಆ ಮೂಲಕ ರಾಜಕೀಯ ವಲಯದಲ್ಲಿ ಸಂಚಲನ ಸೃಷ್ಠಿಸಿ, ಚರ್ಚೆ ಹುಟ್ಟುಹಾಕುವಂತೆ ಮಾಡಿದ್ದಾರೆ.
ನಾನು ಈ ಹಿಂದೆ ಹೇಳಿದಂತೆ ದೇಶದಲ್ಲಿ ದೊಡ್ಡ ದುರಂತ ಸಂಭವಿಸಲಿದೆ ಎಂಬ ಮಾತಿನಂತೆ, ಭಾರತೀಯ ಸೇನೆಯ ಮುಖ್ಯಸ್ಥರ ಹೆಲಿಕ್ಯಾಪ್ಟರ್ ಅವಘಡ ಸಂಭವಿದೆ ಎಂದಿದ್ದಾರೆ.
ಅಲ್ಲದೆ ಬರುವ ದಿನದಲ್ಲಿ ರೂಪಾಂತರಿ ವೈರಸ್ ಇಡೀ ಲೋಕವನ್ನೆ ತಲ್ಲಣಗೊಳಿಸಲಿದೆ. ಇಷ್ಟೇ ಅಲ್ಲ ಮಳೆರಾಯ ಮತ್ತೆ ಅಬ್ಬರಿಸುವ ಲಕ್ಷಣಗಳು ಕಾಣುತ್ತಿವೆ, ಹೆಚ್ಚಿನ ಮಳೆಯ ಸುರಿಯುವ ಲಕ್ಷಣ ಕಾಡುತ್ತಿದೆ ಎಂದಿದ್ದಾರೆ ಎಂದು ಬಿತ್ತರವಾಗಿರುವ ವರದಿ ಸಾಮಾಜಿಕ ಜಾಲತಾಣಗಳ ಮೂಲಕ ಹಬ್ಬಿ ಚರ್ಚೆಗೆ ಕಾರಣವಾಗಿದೆ.