ಆಗಸದಲ್ಲಿ ಅಮೆರಿಕದ ೫೨ ಪುಟಾಣಿ ಉಪಗ್ರಹಗಳ ಗೋಚರ: ಕೌತುಕ ಕಂಡು ಚಕಿತರಾದ ಜನತೆ


(ಟಿವಿ 18 ಸಂಗ್ರಹ)
ಕರ್ನಾಟಕದ ಉಡುಪಿ, ದಕ್ಷಿಣ ಕನ್ನಡ, ಶಿವಮೊಗ್ಗ, ಬಾಗಲಕೋಟೆ, ಉತ್ತರ ಕನ್ನಡ ಮತ್ತು ಚಿಕ್ಕಮಗಳೂರು ಭಾಗದಲ್ಲಿ ಅಮೆರಿಕದ ೫೨ ಉಪಗ್ರಹಗಳು ಗೋಚರಿಸಿವೆ. ಆಗಸದಲ್ಲಿಯ ಕೌತುಕ ಕಂಡು ಜನರು ಚಕಿತರಾಗಿದ್ದು, ಈ ದೃಶ್ಯವನ್ನು ಮೊಬೈಲ್‌ಗಳಲ್ಲಿ ಸೆರೆ ಹಿಡಿದುಕೊಂಡಿದ್ದಾರೆ.


ಡಿಸೆಂಬರ್ ೧೮ರಂದು ಅಮೆರಿಕ ಕ್ಯಾಲಿಫೋರ್ನಿಯಾದಲ್ಲಿ ಉದ್ಯಮಿ ಎಲನ್ ಮಸ್ಕ್ ಒಡೆತನದ ಸ್ಟಾರ್ ಲಿಂಕ್ ಕಂಪನಿ ೫೨ ಉಪಗ್ರಹಗಳನ್ನು ಏಕಕಾಲದಲ್ಲಿ ಉಡಾವಣೆ ಮಾಡಲಾಗಿತ್ತು. ನಿನ್ನೆ ಈ ಅಚ್ಚರಿ ದೃಶ್ಯ ಬರಿಗಣ್ಣಿಗೆ ಕಾಣಿಸಿದೆ.


ಡಿಸೆಂಬರ್ ೧೮ರಂದು ಅಮೆರಿಕ ಕ್ಯಾಲಿಫೋರ್ನಿಯಾದಲ್ಲಿ ಉದ್ಯಮಿ ಎಲನ್ ಮಸ್ಕ್ ಒಡೆತನದ ಸ್ಟಾರ್ ಲಿಂಕ್ ಕಂಪನಿ ೫೨ ಉಪಗ್ರಹಗಳನ್ನು ಏಕಕಾಲದಲ್ಲಿ ಉಡಾವಣೆ ಮಾಡಲಾಗಿತ್ತು. ನಿನ್ನೆ ಈ ಅಚ್ಚರಿ ದೃಶ್ಯ ಬರಿಗಣ್ಣಿಗೆ ಕಾಣಿಸಿದೆ.
ಈ ಉಪಗ್ರಹಗಳ ಒಂದೇ ಕಕ್ಷೆಯಲ್ಲಿದ್ದು, ಭೂಮಿಯಿಂದ ಒಂದೇ ಎತ್ತರದಲ್ಲಿವೆ. ಈ ಉಪಗ್ರಹಗಳು ಯಾವ ದೇಶದ ಮೇಲೆ ಹಾದು ಹೋಗುತ್ತವೆಯೋ ಅಲ್ಲಿ ಈ ದೃಶ್ಯ ಕಾಣಬಹುದು. ಈ ೫೨ ಉಪಗ್ರಹಗಳು ಭೂಮಿಯಿಂದ ಸುಮಾರು ೫೪೦ ಕಿಲೋ ಮೀಟರ್ ದೂರದಲ್ಲಿವೆ ಎಂದು ಖಗೋಳ ತಜ್ಱರು ಹೇಳುತ್ತಾರೆ.
ಉಪಗ್ರಹದ ಮೇಲೆ ಅಳವಡಿಸಿದ್ದ ಸೌರ ಫಲಕಗಳು ದೀಪಗಳಂತೆ ಗೋಚರಿಸಿದ್ದರಿಂದ ಜನರು ಮೊದಲಿಗೆ ನಕ್ಷತ್ರಗಳು ಎಂದು ತಿಳಿದಿದ್ದರು.
ಅಮೆರಿಕ ಮುಂದೆ ಸುಮಾರು ೧೮೦೦ ಇಂಟರ್‌ನೆಟ್ ಉಪಗ್ರಹಗಳನ್ನು ಗಗನಕ್ಕೆ ಕಳುಹಿಸುವ ತಯಾರಿ ನಡೆಸಿದೆ. ಈ ಉಪಗ್ರಹಗಳ ಮೂಲಕ ಇಂಟರ್ ನೆಟ್ ಸೇವೆ ಒದಗಿಸುವ ನಿಟ್ಟಿನಲ್ಲಿ ಇವುಗಳನ್ನು ಏಕಕಾಲದಲ್ಲಿ ಉಡಾವಣೆ ಮಾಡಲಾಗಿದೆ.
ಈ ಉಪಗ್ರಹಗಳಿಂದಲೇ ಮುಂದಿನ ಉಚಿತ ಇಂಟರ್ ನೆಟ್ ಸಿಗಲಿದೆ ಎಂದು ಹೇಳಲಾಗುತ್ತಿದೆ. ಜೊತೆಗೆ ಇಂಟರ್ ನೆಟ್ ವೇಗವೂ ಹೆಚ್ಚಾಗಲಿದೆ. ಇಂದು ಸಹ ಸಂಜೆ ಏಳು ಗಂಟೆ ನಂತರ ಈ ಉಪಗ್ರಹಗಳು ಗೋಚರಿಸಲಿವೆ. ಆದ್ರೆ ಇಷ್ಟೊಂದು ಪ್ರಜ್ವಲವಾಗಿ ಕಾಣಿಸಿಕೊಳ್ಳೋದು ಕಡಿಮೆ ಎಂದು ಎನ್ನಲಾಗುತ್ತಿದೆ.

ಆಕಾಶದಲ್ಲಿ ಇಂದು ಸಂಜೆ ಮತ್ತೆ ಸರಣಿ ಬೆಳಕು ಕಾಣಲಿದೆ: ಕಾರಣ ಇಲ್ಲಿದೆ ನೋಡಿ


(ಟಿವಿ 9 ಶಿವಮೊಗ್ಗ ವರದಿ)

ಆಕಾಶದಲ್ಲಿ ನಿನ್ನೆ ಗೋಚರವಾದಂತೆ ಇಂದೂ ಕೂಡ ಸರಣಿ ಬೆಳಕು ಕಾಣಲಿದೆಯಂತೆ. ಇಂದು ಸಂಜೆ 7.15ಕ್ಕೆ ಬೆಳಕು ಗೋಚರವಾಗಲಿದೆಯಂತೆ. ಸ್ಟಾರ್ ಲಿಂಕ್ ಜಗತ್ತಿನಲ್ಲಿ ಉಪಗ್ರಹ ಆಧಾರಿತ ಇಂಟರ್ನೆಟ್ ಸೌಲಭ್ಯ ಒದಗಿಸಲು ಮುಂದಾಗಿದೆ.
ನಿನ್ನೆ (ಡಿಸೆಂಬರ್ ೨೦) ಸಂಜೆ 7.30ರ ಸುಮಾರಿಗೆ ಆಕಾಶದಲ್ಲಿ ನಕ್ಷತ್ರಗಳು ಒಂದರ ಹಿಂದೆ ಒಂದಂತೆ ಚಲಿಸುವ ಹಾಗೆ ಅಪರೂಪದ ಸನ್ನಿವೇಶವೊಂದು ಗೋಚರಿಸಿತ್ತು. ಸರಪಳಿಯಂತೆ ಬೆಳಕಿನ ಸರವೊಂದು ಸಾಗುತ್ತಿದ್ದುದನ್ನು ಕಂಡು ಜನ ಆಶ್ವರ್ಯ ಪಟ್ಟಿದ್ದಾರೆ. ಜನರು ತಮ್ಮ ತಮ್ಮ ಮೊಬೈಲ್ನಲ್ಲಿ ಆ ದೃಶ್ಯವನ್ನು ಸೆರೆ ಹಿಡಿದು ಏಲಿಯನ್ ಇರಬಹುದು ಅಂತ ಭಯ ಪಟ್ಟಿದ್ದರು. ಆದರೆ ಜನರು ಈ ಬಗ್ಗೆ ಭಯಪಡುವ ಅಗತ್ಯವಿಲ್ಲ. ಇದು ಅಮೇರಿಕದ ಸ್ಪೇಸ್ ಎಕ್ಸ್ ಕಂಪನಿಯ ಕೃತಕ ಉಪಗ್ರಹಗಳು ಅಂತ ತಿಳಿದುಬಂದಿದೆ.


ಆಕಾಶದಲ್ಲಿ ನಿನ್ನೆ ಗೋಚರವಾದಂತೆ ಇಂದೂ ಕೂಡ ಸರಣಿ ಬೆಳಕು ಕಾಣಲಿದೆಯಂತೆ. ಇಂದು ಸಂಜೆ ೭.೧೫ಕ್ಕೆ ಬೆಳಕು ಗೋಚರವಾಗಲಿದೆಯಂತೆ. ಸ್ಟಾರ್ ಲಿಂಕ್ ಜಗತ್ತಿನಲ್ಲಿ ಉಪಗ್ರಹ ಆಧಾರಿತ ಇಂಟರ್ನೆಟ್ ಸೌಲಭ್ಯ ಒದಗಿಸಲು ಮುಂದಾಗಿದೆ. ಡಿ.೧೮ರಂದು ಅಮೆರಿಕದ ಕ್ಯಾಲಿಫೋರ್ನಿಯದಿಂದ ೫೨ ಉಪಗ್ರಹಗಳನ್ನು ಹಾರಿಬಿಡಲಾಗಿತ್ತು. ಈ ಉಪಗ್ರಹಗಳು ತೀರಾ ಕೆಳಗೆ ಸುತ್ತುತ್ತಿರುತ್ತವೆ. ಈ ಹಿನ್ನಲೆ ಭೂಮಿಗೆ ಸುಲಭವಾಗಿ ಗೋಚರಿಸುತ್ತವೆ.
ಎಲಾನ್ ಮಸ್ಕ್ ಮಾಲೀಕತ್ವದ ಬಾಹ್ಯಾಕಾಶ ಸಂಸ್ಥೆ ಅಮೆರಿಕದ ಸ್ಪೇಸ್ ಎಕ್ಸ್ ಉಡಾವಣೆ ಮಾಡಿದ ಸರಣಿ ಉಪಗ್ರಹಗಳ ಮಾಲೆಯಿದು. ಸ್ಟಾರ್ ಲಿಂಕ್ ಎಂಬ ಯೋಜನೆಯಡಿ ೧,೮೦೦ಕ್ಕೂ ಅಧಿಕ ಉಪಗ್ರಹಗಳನ್ನು ಈಗಾಗಲೇ ಉಡಾವಣೆ ಮಾಡಲಾಗಿದೆ. ಅವುಗಳಲ್ಲಿ ೧,೭೩೨ ಉಪಗ್ರಹಗಳು ತಮ್ಮ ನಿಗದಿತ ಕಕ್ಷೆಯಲ್ಲಿ ಭೂಮಿಯನ್ನು ಸುತ್ತುತ್ತಿವೆ. ೨೦೧೮ರ ಫೆ.೨೨ರಂದು ಆರಂಭವಾದ ಈ ಯೋಜನೆಯಲ್ಲಿ ಬೇರೆ ಬೇರೆ ಹಂತಗಳಲ್ಲಿ ಉಪಗ್ರಹಗಳನ್ನು ಉಡಾವಣೆ ಮಾಡಲಾಗುತ್ತಿದೆ.
ಸ್ಟಾರ್ ಲಿಂಕ್‌ನ ರಾಕೆಟ್‌ಗಳು ಉಪಗ್ರಹಗಳನ್ನು ಕಕ್ಷೆಗೆ ಸೇರಿಸುವಲ್ಲಿ ಯಶಸ್ವಿಯಾಗಿವೆ. ಇದು ಸ್ಟಾರ್‌ಲಿಂಕ್? ಕಂಪನಿಯ ೩೪ನೇ ಉಡಾವಣೆಯಾಗಿದ್ದು, ಭೂಮಿಯ ಕೆಳಹಂತದ ಕಕ್ಷೆಗೆ ೨,೦೦೦ ಉಪಗ್ರಹಗಳನ್ನು ಸೇರಿಸುವ ಗುರಿಯನ್ನು ಸ್ಟಾರ್‌ಲಿಂಕ್ ಇಟ್ಟುಕೊಂಡಿದೆ. ಅಂತರಿಕ್ಷಕ್ಕೆ ಇಷ್ಟೊಂದು ಉಪಗ್ರಹಗಳನ್ನು ಕಳಿಸಿದರೆ ಅಲ್ಲಿಯೂ ಟ್ರಾಫಿಕ್ ಜಾಂ ಆಗಲಾರದೆ? ಇತರ ದೇಶಗಳ ಬಾಹ್ಯಾಕಾಶ ಚಟುವಟಿಕೆಗಳಿಗೆ ತೊಂದರೆಯಾಗದೆ ಎಂಬ ಪ್ರಶ್ನೆಗಳನ್ನು ಹಲವರು ಕೇಳುತ್ತಿದ್ದಾರೆ.
ಯುಎಫ್‌ಒ ಎಂದು ಅನುಮಾನ ವ್ಯಕ್ತಪಡಿಸಿತ್ತಿರುವ ಜನರಿಗೆ ಅಧಿಕಾರಿಗಳು ಯುಎಫ್‌ಒ ಬಗ್ಗೆ ಖಚಿತ ಮಾಹಿತಿ ನೀಡಿದ್ದಾರೆ. ಎರಡು ವಾರದ ಹಿಂದೆ ಪಂಜಾಬ್ನ ಕೆಲ ಪ್ರದೇಶಗಳಲ್ಲಿ ಇದೇ ರೀತಿ ಆಕಾಶದಲ್ಲಿ ದೀಪಗಳ ಸಾಲು ಪತ್ತೆಯಾಗಿದೆ. ಪಂಜಾಬ್, ಹಿಮಾಚಲ ಪ್ರದೇಶ ಭಾಗದಲ್ಲಿ ದೀಪಗಳ ಸಾಲು ಕಾಣಿಸಿಕೊಂಡಿದೆ.

By admin

ನಿಮ್ಮದೊಂದು ಉತ್ತರ

error: Content is protected !!