ಶಿವಮೊಗ್ಗ, ಡಿ.07:
ಶರಾವತಿ ಹಿನ್ನೀರಿರ ಸುಂದರ ಜಾಗ ಕುಡುಕರಿಗೆ, ಮೋಜು ಮಸ್ತಿ ಮಾಡುವವರಿಗೆ ಆಶ್ರಯ ತಾಣಗಳಾಗುತ್ತಿರುವುದು ದುರಂತದಲ್ಲಿ…!
ಸಾಗರ ತಾಲ್ಲೂಕಿನ ಯಡಜಿಗಳ ಮನೆ ಗ್ರಾಮಪಂಚಾಯ್ತಿ ವ್ಯಾಪ್ತಿಯ ಕೆಸವಿನ ಮನೆ ಸಮೀಪ ಬರುವ ಶರಾವತಿ ಹಿನ್ನೀರಿನ ದಡದಲ್ಲಿ ಇಂದು ದೊಡ್ಡ ಪಾರ್ಟಿ ನಡೆದಿದೆ. ಇದು ಇಲ್ಲಿ ಮಾಮೂಲಿಯಂತಾಗಿದೆ.
ಇದನ್ನು ನೋಡಿ ನೋಡಿ ಬೇಸತ್ತಿದ್ದ ಜನರ ಶಾಪ ತಟ್ಟಿತೋ ಇಲ್ಲವೋ ಗೊತ್ತಿಲ್ಲ. ಆದರೆ ಈ ಪಾರ್ಟಿ ಬಗ್ಗೆ ಯಾರೋ ಸ್ಥಳೀಯರು ನೀಡಿದ ಮಾಹಿತಿ ಮೇರೆಗೆ ಸ್ಥಳಕ್ಕೆ ಬಂದ ಪೊಲೀಸರು ಪಾರ್ಟಿ ಮಾಡ್ತಿದ್ದವರಿಗೆ ಪೊಲೀಸ್ ಪಾಠ ಮಾಡಿದ್ದಾರೆ.


ಈ ಭಾಗವಷ್ಟೆ ಅಲ್ಲದೆ ಶರಾವತಿ ಹಿನ್ನೀರು ಎನ್ನುವುದು ಹಲವರಿಗೆ ಮೋಜ ಮಸ್ತಿಯ ತಾಣವಾಗಿ ಮಾರ್ಪಟ್ಟಿದೆ. ಇದಕ್ಕೆಲ್ಲಾ ಯಾರು ಅನುಮತಿ ನೀಡುತ್ತಾರೆ ಅನ್ನೋದು ಯಕ್ಷ ಪ್ರಶ್ನೆ?
ಅರಣ್ಯ ಇಲಾಖೆ ತನ್ನ ವ್ಯಾಪ್ತಿಯಲ್ಲಿ ಯಾರಾದರೂ ವಾಹನ ನಿಲ್ಲಿಸಿದರೂ ಪ್ರಶ್ನೆ ಮಾಡುತ್ತದೆ. ಹಾಗಿದ್ದಾಗ ರಸ್ತೆ ಬದೀಲಿ ಸಿಗುವ ಕಾಡಿನ ಸ್ಥಳದಲ್ಲಿ ಎಣ್ಣೆ ಬಾಟಲಿಗಳು ಎಲ್ಲಿಂದ ಬರುತ್ತವೆ ಅನ್ನೋದನ್ನ ಯಾರಿಗೆ ಪ್ರಶ್ನಿಸಬೇಕು?
ಇನ್ನೂ ಶರಾವತಿ ಹಿನ್ನೀರನ್ನ ರೆಸಾರ್ಟ್​ ಬ್ಯುಸಿನೆಸ್​ಗೆ ಬಳಸಿಕೊಳ್ಳುತ್ತಿರುವ ಮಹಾನುಬಾವರುಗಳು ತಮ್ಮ ಕಸವನ್ನು ಕೂಡ ಕ್ಲೀನ್ ಮಾಡುತ್ತಿಲ್ಲ. ಮೇಲಾಗಿ ಇಂತಹ ಮೋಜಿನ ಪಾರ್ಟಿಗಳಿಗೆ ಖುದ್ದು ಅನುವು ಮಾಡಿಕೊಡುತ್ತಿದ್ದಾರೆ.
ಇನ್ನೂ ಇವತ್ತಿನ ಪಾರ್ಟಿ ಕೇವಲ ಒಂದು ಉದಾಹರಣೆಯಷ್ಟೆ, ಶರಾವತಿ ಹಿನ್ನೀರು ಪ್ರಕೃತಿ ಮಡಿಲಷ್ಟೆ ಅದನ್ನ ಮೋಜಿಗೆ ಬಳಸದಿರಿ ಎಂದು ಸ್ಥಳೀಯರು ಒತ್ತಾಯಿಸುತ್ತಿದ್ದಾರೆ.

By admin

ನಿಮ್ಮದೊಂದು ಉತ್ತರ

error: Content is protected !!