ಮಹಿಳೆಯರ ಖಾಸಗಿತನಕ್ಕೆ ಗೌರವ ನೀಡಬೇಕು. ಮಹಿಳೆಯರ ಜೀವನಶೈಲಿಯನ್ನು ಪ್ರಶ್ನೆ ಮಾಡುವ ಅಧಿಕಾರ ಪುರುಷರಿಗೆ ಇಲ್ಲ. ಮಹಿಳೆಯರ ಗೌರವಕ್ಕೆ ಚ್ಯುತಿ ತರುವವರ ವಿರುದ್ಧ ಹಾಂಕಾಂಗ್ ಸರ್ಕಾರ ದಿಟ್ಟ ಕ್ರಮಕ್ಕೆ ಮುಂದಾಗಿದೆ. ಮಹಿಳೆಯರ ಸ್ಕರ್ಟ್​ ಕೆಳಗಿನ ಫೋಟೋವನ್ನು ಸೋಶಿಯಲ್​ ಮೀಡಿಯಾದಲ್ಲಿ ಹರಿಬಿಡುವವರನ್ನು ನೇರವಾಗಿ ಜೈಲಿಗೆ ಕಳಿಸೋದಾಗಿ ಹೇಳಿದೆ.


ಹೊಸ ನಿಯಮಗಳ ಪ್ರಕಾರ, ಮಹಿಳೆಯ ಖಾಸಗಿ ಅಂಗಾಂಗಗಳ ಫೋಟೋವನ್ನು ತೆಗೆದು ಸೋಶಿಯಲ್​ ಮೀಡಿಯಾದಲ್ಲಿ ಹಂಚಿಕೊಳ್ಳುವವರ ವಿರುದ್ಧ 5 ವರ್ಷ ಜೈಲು ಶಿಕ್ಷೆ ಹಾಗೂ ದಂಡ ವಿಧಿಸಲು ಹಾಂಕಾಂಗ್​ ಸರ್ಕಾರ ಅನುಮತಿ ನೀಡಿದೆ.
ಕೇವಲ ಸಾರ್ವಜನಿಕ ಸ್ಥಳಗಳಲ್ಲಿ ಮಾತ್ರವಲ್ಲದೇ ಖಾಸಗಿ ಸ್ಥಳಗಳಲ್ಲೂ ಇಂತಹ ಚಿತ್ರಗಳನ್ನು ತೆಗೆಯುವುದು ಹಾಗೂ ರೆಕಾರ್ಡಿಂಗ್​ ಮಾಡೋದು ಅಪರಾಧ ಎಂದು ಪರಿಗಣಿಸಲಾಗಿದೆ.
ಈ ರೀತಿಯ ಪ್ರಕರಣಗಳು ದೇಶದಲ್ಲಿ ಹೆಚ್ಚಾದ ಹಿನ್ನೆಲೆಯಲ್ಲಿ ಹಾಂಕಾಂಗ್​ ಸರ್ಕಾರ ಈ ಕಾನೂನನ್ನು ಜಾರಿಗೆ ತಂದಿದೆ ಎನ್ನಲಾಗಿದೆ. ಹೊಸ ಕಾನೂನು ಜಾರಿಗೆ ಬಂದ ಬಳಿ ಇಂತಹ ದೂರುಗಳು ಕಡಿಮೆಯಾಗಲಿದೆ ಎಂದು ನಂಬಲಾಗಿದೆ.


(ಸಂಗ್ರಹ ಸುದ್ದಿ ಹಾಗೂ ಚಿತ್ರ)

By admin

ನಿಮ್ಮದೊಂದು ಉತ್ತರ

error: Content is protected !!