ಶಿವಮೊಗ್ಗ, ಅ.01:
ನಮ್ಮನ್ನ ಸಂಕಷ್ಟಗಳಲ್ಲಿ ರಕ್ಷಿಸುವ ಪೊಲೀಸರೆಂದರೆ ಸಾರ್ವಜನಿಕವಾಗಿ ಭಯ ಮಿಶ್ರಿತ ಪ್ರೀತಿ ಸಾಮಾನ್ಯ. ಈ ಪೊಲೀಸರೆಂದರೆ ಅವರ ಖಾಖಿ ಯೂನಿಪಾರಂ ಜೊತೆ ತಲೆಯ ಟೋಪಿ, ಬೆಲ್ಟ್ ಹಾಗೂ ಶೂ ಈಗಲೂ ಅತ್ಯಂತ ಗೌರವಯುತ ಸ್ಥಾನದಲ್ಲಿ ಜನ ಗುರುತಿಸುತ್ತಿದ್ದಾರೆ.
ಈ ಪೀಠಿಕೆಗೆ ಕಾರಣ ಇಷ್ಟೆ. ಮಾನ್ಯ ಗೃಹ ಸಚಿವರ ತವರು ಅದರಲ್ಲೂ ಸಭ್ಯ ಸುಸಂಸ್ಕೃತಿಯ ಮಲೆನಾಡಿನ ಶಿವಮೊಗ್ಗ ನಗರದ ಈ ಚಿತ್ರವೊಂದು ಇಂದು ನಮ್ಮಕಾರ್ಯಾಲಯಕ್ಕೆ ಬಂತು.
ವಿಳಾಸ ಹಾಗೂ ಹೆಸರಿಲ್ಲದ ಈ ಪತ್ರದಲ್ಲಿ ಆ ಎರಡು ಪೊಲೀಸರ ಟೋಪಿಯನ್ನು ಹಾಗೂ ಎರಡು ಜೊತೆ ಶೂಗಳನ್ನ ಅಲ್ಲಿ ಬಿಸಾಕಿದ್ದ ಬಗ್ಗೆ ಆಕ್ಷೇಪವಿತ್ತು.
ಶಿವಮೊಗ್ಗ ಸರ್ಕಾರಿ ಬಸ್ ಗಳ ಡಿಪೋ ಅಂದರೆ ಬಸ್ ನಿಲ್ದಾಣ ಹಿಂದಿನ ಡಿಪೋ ಬಳಿ ರಸ್ತೆ ಮಗ್ಗುಲಲ್ಲಿ ಸುಸ್ ಮಾಡುವ, ಗಲೀಜಿನ ಕೊಂಪೆಯಲ್ಲಿದ್ದವು ಎಂದಿದ್ದಾರೆ.
ಜನ ಗೌರವಿಸುವ ಈ ಪೊಲೀಸ್ ಟೋಪಿಗಳು ಯಾರವಾಗಿದ್ದವು. ಹೀಗೇಕೆ ಬಿಸಾಕಿದರು ಗೊತ್ತಿಲ್ಲ. ದಯಮಾಡಿ ಜನರಿಗೆ ಕಾಣುವ ಮುನ್ಬ ಇವನ್ನ ವರ್ಗಾಯಿಸಲು ಹೇಳಿ ಎಂದಿದ್ದಾರೆ….!
ಈ ಪೊಲೀಸ್ ಟೋಪಿಗಳ ಕಥೆ ವೈರಲ್ ಆಗುವ ಮುನ್ನ ತೆದು ಹಾಕಿಸಿ…!
ತುಂಗಾತರಂಗ ದಿನಪತ್ರಿಕೆ ವೆಬ್ ಗೆ ಜಾಹೀರಾತಿಗಾಗಿ 9448256183 ಗೆ ಸಂಪರ್ಕಿಸಿ, ಫಲಿತಾಂಶ ವೀಕ್ಷಿಸಿ.