ಶಾಂತಿಸಾಗರ ವಲಯ ಅರಣ್ಯಾಧಿಕಾರಿಗಳಿಂದ ದಾಳಿ: ಇಬ್ಬರ ಬಂಧನ

ಶಿವಮೊಗ್ಗ, ಸೆ.03:
ಭದ್ರಾವತಿ ಶಾಂತಿಸಾಗರ ವಲಯ ಅರಣ್ಯ ವಿಭಾಗದ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಬೈಕ್‌ವೊಂದರಲ್ಲಿ ಸಾಗಿಸಲು ಯತ್ನಿಸಿದ್ದ ಸುಮಾರು 5 ಲಕ್ಷಕ್ಕೂ ಅಧಿಕ ಮೌಲ್ಯದ ಶ್ರೀಗಂಧವನ್ನು ವಶಪಡಿಸಿಕೊಳ್ಳುವುದರ ಜೊತೆಗೆ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.
ಬಂಧಿತ ಆರೋಪಿಗಳನ್ನು ಚನ್ನಗಿರಿ ತಾಲ್ಲೂಕು ಕೆಂಪಯ್ಯನ ತೊಕ್ಕಲಿನ ಮುನಿಯಪ್ಪ ಹಾಗೂ ರಾಧಕೃಷ್ಣ ಎಂದು ಗುರುತಿಸಲಾಗಿದೆ. ಬೈಕ್ ಸಹಿತ ೫೮ ಕೆ.ಜಿ. ತೂಕದ ಲಕ್ಷಾಂತರ ಮೌಲ್ಯದ ಶ್ರೀಗಂಧವನ್ನು ವಶಪಡಿಸಿಕೊಂಡಿದ್ದಾರೆ. ಸಿರಿಚಂದನವನ ಪ್ಲಾಂಟೆಷನ್‌ನಲ್ಲಿನ ಸರ್ವೆ ನಂ.೫೦ರ ಅರಣ್ಯ ಭೂಮಿಯಲ್ಲಿ ಕಟಾವು ಮಾಡಿದ್ದ ಶ್ರೀಗಂಧವನ್ನು ಸಾಗಿಸುವಾಗ ಆರೋಪಿಗಳನ್ನು
ಖಚಿತ ಮಾಹಿತಿ ಮೇರೆಗೆ ಉಪ ಅರಣ್ಯ ಸಂರಕ್ಷಣಾಧಿಕಾರಿಗಳಾದ ಕೆ.ಕೆ. ಗಾಮನಗಟ್ಟಿ ಹಾಗೂ ಎಸಿಎಫ್ ಸುಬ್ರಮಣ್ಯ ಅವರ ಮಾರ್ಗದರ್ಶನದಲ್ಲಿ ಅರಣ್ಯ ವಿಭಾಗದ ವಲಯ ಅರಣ್ಯಾಧಿಕಾರಿಗಳಾದ ಮಾವಿನಹೊಳೆಯಪ್ಪ, ಉಪವಲಯ ಅರಣ್ಯಾಧಿಕಾರಿಗಳಾದ ಸದಾಶಿವ ಕೆ.ಪಿ, ಮೈಲಾರಸ್ವಾಮಿ ಎಲ್., ಮನೋಹರ್ ವೈ.ಎಸ್. ಹಾಗೂ ಸುಮಯ್ಯ ನಜರತ್, ಅರಣ್ಯ ರಕ್ಷಕರಾದ ಹೇಮಂತ್, ರಾಮನಾಯ್ಕ, ಜಯರಾಮ ಜೆ.ಎಲ್., ವೆಂಕಟೇಶ ವಿ. ಜಬಿವುಲ್ಲಾ ಕೆ.ಎಂ, ಅವರ ನೇತೃತ್ವದ ತಂಡ ದಾಳಿ ನಡೆಸಿದೆ.

By admin

ನಿಮ್ಮದೊಂದು ಉತ್ತರ

error: Content is protected !!