ಶಿವಮೊಗ್ಗ,ಆ.25

ಸ್ತಿ ತೆರಿಗೆಗೆ ಸಂಬಂಧಿಸಿದಂತೆ ಇಂದು ನಡೆದ ಮಹಾನಗರ ಪಾಲಿಕೆ ಸಾಮಾನ್ಯ ಸಭೆಯಲ್ಲಿ ಆಡಳಿತ ಪಕ್ಷ ಮತ್ತು ವಿರೋಧ ಪಕ್ಷದ ಸದಸ್ಯರ ನಡುವೆ ಜಟಾಪಟಿ ನಡೆದು ಕಾಂಗ್ರೆಸ್ ಸದಸ್ಯರ ಪ್ರತಿಭಟನೆ ನಡುವೆಯೇ ಗದ್ದಲ, ಗಲಾಟೆ ಕೋಲಾಹಲ ಉಂಟಾಯಿತು.
ಸಭೆ ಆರಂಭವಾಗುತ್ತಿದ್ದಂತೆಯೇ ಒಲಿಂಪಿಕ್ಸ್ ನಲ್ಲಿ ಗೆದ್ದವರಿಗೆ ಪಾಲಿಕೆಯಿಂದ ಪಕ್ಷಬೇಧ ಮರೆತು ಅಭಿನಂದನೆ ಸಲ್ಲಿಸಲಾ ಯಿತು. ಇದರ ಬೆನ್ನಲ್ಲೇ ಆಸ್ತಿ ತೆರಿಗೆಗೆ ಸಂಬಂಧಿ ಸಿದಂತೆ ಗದ್ದಲ ಉಂಟಾಯಿತು. ವಿಪಕ್ಷ ನಾಯಕಿ ಯಮುನಾ ರಂಗೇಗೌಡ ಸಭೆ ಆರಂ ಭದಲ್ಲಿಯೇ ಅವೈಜ್ಞಾನಿಕ ಆಸ್ತಿ ತೆರಿಗೆ ವಿರೋ ಧಿಸಿ ಪಾಲಿಕೆ ಹೊರಗಡೆ ಸಂಘ, ಸಂಸ್ಥೆಗಳು, ಸಾರ್ವಜನಿಕರು ಬೃಹತ್ ಪ್ರತಿಭಟನ ನಡೆಸು ತ್ತಿದ್ದಾರೆ. ಅವರ ಪ್ರತಿಭಟನೆಯನ್ನು ಗಮನಕ್ಕೆ ತೆಗೆದುಕೊಳ್ಳದೇ ಸಭೆ ನಡೆಸುವುದು ಸರಿಯಲ್ಲ ಎಂದರು.


ಇದಕ್ಕೆ ಸಹಮತ ವ್ಯಕ್ತಪಡಿಸಿದ ಕಾಂಗ್ರೆಸ್ ಸದಸ್ಯರಾದ ರಮೇಶ್ ಹೆಗ್ಡೆ, ಯೋಗೀಶ್, ರೇಖಾ ರಂಗನಾಥ್, ಜೆಡಿಎಸ್ ಸದಸ್ಯ ನಾಗರಾಜ್ ಕಂಕಾರಿ, ಇದು ಅಭಿವ್ಯಕ್ತಿ ಸ್ವಾತಂತ್ರ್ಯದ ಹರಣವಾಗಿದೆ. ನ್ಯಾಯವಾಗಿ ನೋಡಿದರೆ ಎಸ್‌ಆರ್ ದರದಲ್ಲಿ ಆಸ್ತಿ ತೆರಿಗೆ ವಿಧಿಸುವುದು ಸರಿಯಲ್ಲ. ಬೆಂಗಳೂರಿಗೆ ಒಂದು, ಶಿವಮೊಗ್ಗಕ್ಕೆ ಒಂದು ತೆರಿಗೆ ನೀತಿ ಇರಬಾರದು. ಇದು ಸಾರ್ವಜನಿಕರಿಗೆ ಹೊರೆಯಾಗುವುದರಲ್ಲಿ ಯಾವ ಅನುಮಾನಗಳು ಇಲ್ಲ. ಈಗಾಗಲೇ ಆಸ್ತಿ ತೆರಿಗೆಗೆ ಸಂಬಂಧಿಸಿದಂತೆ ಸರ್ಕಾರಕ್ಕೆ ಪತ್ರ ಬರೆದು ಮರುಪರಿಶೀಲನೆ ನಡೆಸುವಂತೆ ಹಿಂದಿನ ಸಭೆಯಲ್ಲಿ ತೀರ್ಮಾನ ಮಾಡಲಾಗಿತ್ತು. ಆದರೂ ಕೂಡ ಸರ್ಕಾರಕ್ಕೆ ಪತ್ರ ಬರೆದಿಲ್ಲ ಎಂದು ಸದಸ್ಯರು ಆರೋಪಿಸಿದರು.
ಈ ಸಂದರ್ಭದಲ್ಲಿ ಮಧ್ಯಪ್ರವೇಶ ಮಾಡಿದ ಆಡಳಿತ ಪಕ್ಷದ ನಾಯಕ ಚನ್ನಬಸಪ್ಪ, ಅಭಿವ್ಯಕ್ತಿ ಸ್ವಾತಂತ್ರ್ಯದ ಹರಣದ ಬಗ್ಗೆ ನಿಮ್ಮಿಂದ ಪಾಠ ಕಲಿಯಬೇಕಿಲ್ಲ. ಕಾಂಗ್ರೆಸ್ ತುರ್ತು ಪರಿಸ್ಥಿತಿಯನ್ನು ತಂದಿದ್ದು ನೆನಪಿಲ್ಲವೇ ಎಂದು ಇತಿಹಾಸಕ್ಕೆ ಜಾರಿದರು. ಇದರಿಂದ ಆಕ್ರೋಶಗೊಂಡ ಕಾಂಗ್ರೆಸ್ ಸದಸ್ಯರು, ಇದು ಭಾಷಣದ ಸಮಯವಲ್ಲ. ಪ್ರಸ್ತುತದ ಸಮಸ್ಯೆ ಇದೆ. ಹೊರಗಡೆ ಪ್ರತಿಭ ಟನಾಕಾರರು ಮನವಿ ಸಲ್ಲಿಸಲು ಹೋರಾಟ ನಡೆಸುತ್ತಿದ್ದಾರೆ.
ವರನ್ನು ಒಳಗೆ ಬಿಡದೇ ಇರುವುದು ಎಷ್ಟರಮಟ್ಟಿಗೆ ಸರಿ? ಅವರಿಂದ ಮನವಿ ಪಡೆಯಲು ಯಾಕೆ ಹಿಂದೇಟು ಹಾಕುತ್ತೀದ್ದೀರಿ ಎಂದು ಪ್ರಶ್ನಿಸಿದರು.
ಆಸ್ತಿ ತೆರಿಗೆಗೆ ಸಂಬಂಧಿಸಿದಂತೆ ಆಡಳಿತ ಮತ್ತು ಪ್ರತಿ ಪಕ್ಷಗಳ ನಡುವೆ ಗದ್ದಲವೇ ಉಂಟಾಗಿ ಒಂದು ಹಂತದಲ್ಲಿ ಕಾಂಗ್ರೆಸ್ ಸದಸ್ಯರು ಬಾವಿಗಳಿದು ಪ್ರತಿಭಟನೆ ನಡೆಸಿದರು. ಆಸ್ತಿ ತೆರಿಗೆಗೆ ಸಂಬಂಧಿಸಿದಂತೆ ಸರ್ಕಾರಕ್ಕೆ ಪತ್ರ ಬರೆಯುವುದರಿಂದ ಹಿಡಿದು ಯಾವ ಕ್ರಮವನ್ನು ತೆಗೆದುಕೊಂಡಿದ್ದೀರಿ ಸಭೆಗೆ ಉತ್ತರ ಹೇಳಿ ಎಂದು ಜೋರುಧ್ವನಿಯಲ್ಲೇ ಕೇಳಿದರು. ಆಡಳಿತ ಪಕ್ಷದ ಸದಸ್ಯರು ಕೂಡ ಪಟ್ಟು ಬಿಡದೇ ಕೂಗಾಟ ನಡೆಸಿದರು. ಸುರೇಖಾ ಮುರಳೀಧರ್, ಸುವರ್ಣಾ ಶಂಕರ್, ಅನಿತಾ ರವಿಶಂಕರ್ ಸೇರಿದಂತೆ ಮಹಿಳಾ ಸದಸ್ಯೆಯರು ಕೂಡ ಜೋರು ಧ್ವನಿಯಲ್ಲಿ ಮಾತನಾಡಿದರು. ಯಾರು ಏನು ಮಾತನಾಡುತ್ತಿದ್ದಾರೆ? ಮೇಯರ್ ಸುನಿತಾ ಅಣ್ಣಪ್ಪ ಉತ್ತರವೇನು? ಆಯುಕ್ತರು ಏನು ಹೇಳುತ್ತಿದ್ದಾರೆ ಎಂಬುದೇ ಅರ್ಥವಾಗುತ್ತಿರಲಿಲ್ಲ.
ಆಯುಕ್ತ ಚಿದಾನಂದ ವಠಾರೆ ಒಂದು ಹಂತದಲ್ಲಿ ವಿರೋಧ ಪಕ್ಷದವರಿಗೆ ಉತ್ತರ ಹೇಳಲು ಮುಂದಾದರು. ಆಸ್ತಿ ತೆರಿಗೆಗೆ ಸಂಬಂಧಿಸಿದಂತೆ ನಾಗರಿಕ ಹಿತರಕ್ಷಣಾ ಸಮಿತಿಯವರು ಸಲ್ಲಿಸಿದ ಮನವಿಯನ್ನು ಸರ್ಕಾರಕ್ಕೆ ತಲುಪಿಸಲಾಗಿದೆ ಎಂದರು. ಇದಕ್ಕೆ ಅಸಮಾಧಾನ ವ್ಯಕ್ತಪಡಿಸಿದ ವಿಪಕ್ಷ ಸದಸ್ಯರು, ನಾಗರಿಕ ಹಿತರಕ್ಷಣಾ ಸಮಿತಿಯವರು ಪಾಲಿಕೆಗೆ ಸಲ್ಲಿಸಿದ ಮನವಿ ಬಗ್ಗೆ ನಾವು ಕೇಳುತ್ತಿಲ್ಲ. ಪಾಲಿಕೆ ವತಿಯಿಂದಲೇ ತೀರ್ಮಾನವಾಗಿದ್ದನ್ನು ಸರ್ಕಾರಕ್ಕೆ ತಿಳಿಸಿದ್ದೀರಾ ಎಂದು ಪ್ರಶ್ನೆ ಮಾಡಿದರು.
ಆಡಳಿತ ಪಕ್ಷದ ಸದಸ್ಯರು ಸಮಜಾಯಿಷಿ ನೀಡಲು ಮುಂದಾದಾಗ ವಿಪಕ್ಷ ಸದಸ್ಯರು ಅದನ್ನು ಕೇಳುವ ಸ್ಥಿತಿಯಲ್ಲಿ ಇರಲಿಲ್ಲ. ಆಸ್ತಿ ತೆರಿಗೆಗೆ ಸಂಬಂಧಿಸಿದಂತೆ ಕಳೆದ ಸಭೆಯಲ್ಲಿಯೇ ತೀರ್ಮಾನಿಸಲಾಗಿದೆ. ಈ ಬಾರಿಯ ಅಜೆಂಡಾದಲ್ಲಿ ಆ ವಿಷಯವನ್ನು ಸೇರಿಸಿಯೇ ಇಲ್ಲ. ಹಾಗಾಗಿ ಚರ್ಚೆಗೆ ಅವಕಾಶವಿಲ್ಲ ಎಂಬ ಆಯುಕ್ತರ ಉತ್ತರಕ್ಕೆ ಆಕ್ರೋಶಗೊಂಡ ಕಾಂಗ್ರೆಸ್ ಸದಸ್ಯರು ಮತ್ತೊಮ್ಮೆ ಬಾವಿಗಿಳಿದು ಪ್ರತಿಭಟನೆ ನಡೆಸಿದರು. ಸರ್ಕಾರಕ್ಕೆ ಕೂಡಲೇ ಪುನರ್ ವಿಮರ್ಶೆ ಮಾಡುವಂತೆ ಪಾಲಿಕೆ ವತಿಯಿಂದ ಪತ್ರ ಬರೆಯಬೇಕು ಎಂದು ಒತ್ತಾಯಿಸಿದರು.
ಈ ಹಂತದಲ್ಲಿ ಪ್ರತಿಭಟನೆ ನಡೆಯುತ್ತಿದ್ದ ಸ್ಥಳಕ್ಕೆ ಎಲ್ಲ ಸದಸ್ಯರು ಹೋಗಿ ಮನವಿ ಪಡೆದು ಬರುವಂತಹ ತುರ್ತು ನಿರ್ಧಾರವನ್ನು ಸಭೆ ತೆಗೆದುಕೊಂಡಿತು. ಬಹುತೇಕ ಎಲ್ಲ ಸದಸ್ಯರು ಪ್ರತಿಭಟನೆ ಸ್ಥಳಕ್ಕೆ ಹೋಗಿ ಮನವಿ ಪಡೆದು ಮತ್ತೆ ಸಭೆ ಆರಂಭಿಸಿದರು. ಆಗಲೂ ಕೂಡ ಗದ್ದಲ, ಗಲಾಟೆ ನಡೆಯಿತು. ನಂತರ ಅಜೆಂಡಾ ಪ್ರಕಾರವೇ ಸಭೆ ನಡೆಸಬೇಕು ಎಂದು ತೀರ್ಮಾನಿಸಿ ಆಸ್ತಿ ತೆರಿಗೆ ವಿಷಯವನ್ನು ಅಲ್ಲಿಗೆ ನಿಲ್ಲಿಸಲಾಯಿತು.
ಅನಂತರ ಶಿವಪ್ಪ ನಾಯಕ ಮಾರುಕಟ್ಟೆ ಬ್ಯಾರೀಸ್ ಸಿಟಿ ಸೆಂಟರ್ ಮಾಲ್ ಗೆ ಸಂಬಂಧಿಸಿದಂತೆ ಮತ್ತು ಆಡಳಿತ ಹಾಗೂ ವಿಪಕ್ಷಗಳ ಸದಸ್ಯರ ನಡುವೆ ಗದ್ದಲ, ಗಲಾಟೆ ಆರಂಭವಾಯಿತು. ಸದಸ್ಯರಾದ ನಾಗರಾಜ್ ಕಂಕಾರಿ, ಯೋಗೀಶ್, ಯಮುನಾ ರಂಗೇಗೌಡ ಮುಂತಾದವರು ಸಿಟಿ ಸೆಂಟರ್ ಗೆ ಸಂಬಂಧಿಸಿದಂತೆ ಲೀಸ್ ಗೆ ನೀಡಿದ ಬಗ್ಗೆ ಸಮಿತಿ ರಚಿಸಿ ವರದಿ ಪಡೆದು ಕ್ರಮ ಕೈಗೊಳ್ಳುವಂತೆ ನಿರ್ಣಯವಾಗಿದ್ದರೂ ಕೂಡ ಯಾರೂ ಚೆಕಾರವೆತ್ತಿಲ್ಲ ಸಭೆ ಏಕೆ ನಡೆಯುತ್ತಿಲ್ಲ. ಏನಾಗುತ್ತಿದೆ ಇಲ್ಲಿ? ಇದನ್ನೆಲ್ಲ ನೋಡಿದರೆ ಭ್ರಷ್ಟಾಚಾರದ ಘಾಟು ಕಾಣಿಸುತ್ತಿದೆ ಎಂದು ನೇರ ಆರೋಪ ಮಾಡಿದರು.
ಇದಕ್ಕೆ ಉತ್ತರ ನೀಡಿದ ಆಯುಕ್ತರು ಸಮಿತಿ ರಚನೆ ಮಾಡಿದಾಗ ಅಧಿಕಾರಿಯೊಬ್ಬರನ್ನು ನೇಮಕ ಮಾಡಲಾಗಿತ್ತು. ಆದರೆ, ಅವರಿಗೆ ಅನಾರೋಗ್ಯ ಕಾರಣ ಅವರಿಗೆ ರಜೆ ನೀಡಲಾಗಿದೆ. ಅವರ ಬದಲು ಬೇರೊಬ್ಬ ಅಧಿಕಾರಿಯನ್ನು ನೇಮಿಸಲಾಗಿದೆ ಎಂದರು.
ಏನೇ ಆಗಲಿ, ಸಮಿತಿಯನ್ನು ರಚಿಸಿದ ಮೇಲೆ ಅದರ ವಿವರಗಳನ್ನು ಸಮಿತಿಗೆ ತಿಳಿಸಬೇಕು. ಈಗಾಗಲೇ ಸಮಿತಿ ರಚನೆಯಾಗಿದೆ. ಕಾಂಗ್ರೆಸ್ ನ ಇಬ್ಬರು, ಬಿಜೆಪಿಯ ಇಬ್ಬರು, ಜೆಡಿಎಸ್ ನ ಒಬ್ಬರು ಹಾಗೂ ಅಧಿಕಾರಿಗಳು ಸಮಿತಿಯಲ್ಲಿದ್ದಾರೆ. ಇದನ್ನು ಬೇಕೆಂದೇ ಮುಂದೂಡಲಾಗುತ್ತಿದೆ. ವರದಿ ಬಂದರೆ ಮಾಲ್ ನ ಸತ್ಯಗಳೆಲ್ಲ ಬಯಲಾಗುತ್ತವೆ ಎಂಬ ಭಯ ಆಡಳಿತ ಪಕ್ಷದ ಸದಸ್ಯರನ್ನು ಕಾಡುತ್ತಿದೆ ಎಂದು ಯೋಗೀಶ್ ವ್ಯಂಗ್ಯವಾಡಿದರು.

By admin

ನಿಮ್ಮದೊಂದು ಉತ್ತರ

You missed

error: Content is protected !!