ಶಿವಮೊಗ್ಗ, ಅ.18:
ಇಲ್ಲಿನ ಗಾಡಿಕೊಪ್ಪದ ಯುವಕ ಕುಮಾರ ಎಂಬಾತನ ಇಂದಿನ, ಈಗಿನ ಆತ್ಮಹತ್ಯೆಯೊಳಗೆ ಪ್ರೇಮ ವೈಪಲ್ಯ ಹಾಗೂ ಗೆಳೆಯ ಕಾರಣ ಎಂಬ ಸುದ್ದಿ ಬಲವಾಗಿ ಹರಡಿದೆ.
ಇಂದು ಸಂಜೆ ಗಾಡಿಕೊಪ್ಪ ನಿವಾಸಿ, 26 ವರುಷದ ಯುವಕ ಕುಮಾರ ಬಿನ್ ಲೇ. ನಂಜಪ್ಪ ಸಮೀಪದ ಶ್ಯಾಮ್ ಲೇ ಔಟ್ ನಲ್ಲಿ ಆತಹತ್ಯೆ ಮಾಡಿಕೊಂಡಿದ್ದಾನೆ.
ಕುಮಾರ ನಂಜಪ್ಪ ಅವರ ಮೂವರು ಗಂಡು ಮಕ್ಕಳಲ್ಲಿ ಒಬ್ಬರು. ಆತ ಇಂದು ನೇಣಿಗೆ ಶರಣಾಗಿದ್ದಾನೆ.
ಮೃತನ ಜೇಬಲ್ಲಿನ ಚೀಟಿ ಪೊಲೀಸರ ತಲೆ ಕೆಡಿಸಿದೆ. ನನ್ನ ಸಾವಿಗೆ ಜಿತೇಂದ್ರ ಕಾರಣ ಎಂದಿದ್ದಾನೆ.
ಆದರೆ ಮೃತನ ಕುಟುಂಬವಾಗಲಿ, ಊರಿನ ಪ್ರಮುಖರಾಗಲಿ ಇದನ್ನ ಒಪ್ಪಿಕೊಳ್ಳುತ್ತಿಲ್ಲ.
ಈ ಘಟನೆಯ ಹಿಂದೆ ಪ್ರೇಮ ಪ್ರಕರಣದ ಸುಳಿವಿದೆ ಎನ್ನಲಾಗಿದೆ. ಇಡೀ ಪ್ರಕರಣವನ್ನು ಬೇದಿಸುವ ಹೊಣೆಗಾರಿಕೆ ಹೊತ್ತಿರುವ ತುಂಗಾ ನಗರ ಇನ್ನ್ ಸ್ಪೆಕ್ಟರ್ ದೀಪಕ್ ಅವರು ಇಡೀ ಪ್ರಕರಣದ ಆಳದಲ್ಲಿ ವಿಚಾರಿಸಿ ಸತ್ಯಾಂಶ ಕಂಡುಹಿಡಿಯುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಿದ್ದಾರೆ.