Davanagere Crime

ಶಿವಮೊಗ್ಗ ಫೇಸ್ ಬುಕ್ ನಲ್ಲಿ ಪರಿಚಯವಾಗಿದ್ದಕ್ಕೆ ಗಿಫ್ಟ್ ನೀಡುವುದಾಗಿ ನಂಬಿಸಿ ಲಕ್ಷಾನುಗಟ್ಟಲೆ ಹಣ ವಂಚಿಸಿದ ಪ್ರಕರಣ ಈಗ ಸಿಇಎನ್ ಪೊಲೀಸ್ ಠಾಣೆಯಲ್ಲಿ ದೂರುದಾಖಲಾಗಿದೆ.
ತೀರ್ಥಹಳ್ಳಿ ತಾಲೂಕು ನಮಗೆ ಗ್ರಾಮದ ಸತ್ಯನಾರಾಯಣ ಕೆಕೆ ಕೃಷ್ಣಮೂರ್ತಿಗೆ ಫೇಸ್ ಬುಕ್ಕಿನಲ್ಲಿ ಅಪರಿಚಿತ ವ್ಯಕ್ತಿಯೊಬ್ಬ ಪರಿಚಯವಾಗಿದ್ದ ತಾನೊಬ್ಬ ಯುನಿಟೆಡ್ ಕಿಂಗ್ಡಮ್ ನಲ್ಲಿ ಮಿನಿಸ್ಟರಿ ಆಫ್ ಹೆಲ್ತ್ ನಲ್ಲಿ ಉದ್ಯೋಗಿಯಾಗಿದ್ದು ಫೇಸ್ಬುಕ್ಕಿನಲ್ಲಿ ಸತ್ಯನಾರಾಯಣರಿಗೆ ಪರಿಚಯವಾದ ಕಾರಣ ಗಿಫ್ಟ್ ಕಳುಹಿಸುವುದಾಗಿ ಹೇಳಿ ಗಿಫ್ಟ್ ಅನ್ನು ಕಳಿಸಿದ್ದಾರೆ.


ನಂತರ ಅಪರಿಚಿತ ಮೊಬೈಲ್ ನಂಬರ್ ನಿಂದ ಕರೆ ಮಾಡಿ ಹಂತಹಂತವಾಗಿ  ಕೊರಿಯರ್ ಆಫೀಸ್ ಹಾಗೂ ಇತರೆ ಖರ್ಚು ವೆಚ್ಚಗಳ  ಒಟ್ಟು ಮೊತ್ತ  ಲಕ್ಷದ 644300/- ರೂಗಳನ್ನು ಭರಿಸುವಂತೆ ತಿಳಿಸಿದ್ದಾನೆ.


ಈ ಹಣವನ್ನ ಸತ್ಯನಾರಾಯಣ ಅವರು ಐಸಿಐಸಿಐ ಬ್ಯಾಂಕ್ ಅಕೌಂಟ್ ನಿಂದ ಪಡೆದಿದ್ದು. ಈ ಬಗ್ಗೆ ಅನುಮಾನಗೊಂಡು  ಸ್ನೇಹಿತರಲ್ಲಿ ವಿಚಾರಿಸಿದಾಗ ಇದು ಆನ್ ಲೈನ್ ಮೋಸವೆಂದು ತಿಳಿದುಬಂದಿದೆ.
ಸಿಇಎನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ಮುಂದುವರೆಸಿದ್ದಾರೆ

By admin

ನಿಮ್ಮದೊಂದು ಉತ್ತರ

error: Content is protected !!